Dussehra: A grand jumbo ride in Hemagudda
ಕೊಪ್ಪಳ : ವಿಜಯದಶಮಿ ಶರನ್ನವರಾತ್ರಿ ಪ್ರಯುಕ್ತ ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ವಿಷೇಶ ಅಭಿಷೇಕ, ಕುಂಕುಮಾರ್ಚನೆ ಹಾಗೂ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು.
ನವರಾತ್ರಿ ಅಂಗವಾಗಿ ಶುಕ್ರವಾರ ಸಾಯಂಕಾಲ ಪ್ರತಿ ವರ್ಷದ ಪದ್ದತಿಯಂತೆ ಜಂಬೂ ಸವಾರಿ ಕಾರ್ಯಕ್ರಮದಲ್ಲಿ ವಿಷೇಶವಾಗಿ ಅಲಂಕೃತಗೊಂಡ ದುರ್ಗಾಪರಮೇಶ್ವರಿಯ ಭಾವಚಿತ್ರವಿಟ್ಟು ಜಂಬೂ ಸವಾರಿಯನ್ನು ಮುಖ್ಯ ದ್ವಾರಗಳಲ್ಲಿ ನೆರವೇರಿಸಲಾಯಿತು.
ಗೋಧೂಳಿ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಅಂಬಾರಿ ಹೊತ್ತು ನಿಂತಿದ್ದ ಆನೆಗೆ ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನದಿಂದ ಹೊರಟ ಈ ಅಂಬಾರಿ ಮೆರವಣಿಗೆಗೆ ಮಾಜಿ ಸಂಸದ ಎಚ್.ಜಿ. ರಾಮುಲು ಪೂಜೆ ಸಲ್ಲಿಸಿ ವಿದ್ಯುಕ್ತ ಚಾಲನೆ ನೀಡಿದರು.
ನಂತರ ಹೊರಟ ಮೆರವಣಿಗೆಯು ಆಂಜನೇಯ ದೇವಸ್ಥಾನದ ಪಾದಗಟ್ಟೆಗೆ ತಲುಪಿ ಮರಳಿ ದೇವಸ್ಥಾನಕ್ಕೆ ಆಗಮಿಸಿತು.
ಈ ವೇಳೆ ವಿವಿಧ ಜನಪದ ಕಲಾತಂಡಗಳು, ವಾಧ್ಯ ಮೇಳ, ಮಹಿಳೆಯರ ಕಳಸ ಕನ್ನಡಿಗಳು ಜಂಬೂ ಸವಾರಿಯೊಂದಿಗೆ ಭಕ್ತಾಧಿಗಳ ಜಯಘೋಷದೊಂದಿಗೆ ಹೆಜ್ಜೆ ಹಾಕಿದ್ದು ನೋಡುಗರ ಕಣ್ಮನ ಸೂರೆಗೊಂಡವು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಆರ್ ಶ್ರೀನಾಥ, ನೇತೃತ್ವದಲ್ಲಿ ಜಂಬೂ ಸವಾರಿ ಹಾಗೂ ನವರಾತ್ರಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನೆರವೇರಿದವು.
ದೇವಸ್ಥಾನದಲ್ಲಿ ಶುಕ್ರವಾರದಂದು ಉಚಿತ ಸಾಮೂಹಿಕ ವಿವಾಹ ಹಮ್ಮಿಕೊ ಳ್ಳಲಾಗಿತ್ತು ಈ ಸಂದರ್ಭದಲ್ಲಿ ದುರ್ಗಾದೇವಿ ಸನ್ನಿಧಿಗೆ ಶಾಸಕ ಜನಾರ್ದನರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕರಿಯಣ್ಣ ಸಂಗಟಿ, ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೋಂಡು ಶ್ರೀ ದೇವಿಯ ದರ್ಶನಾಶಿರ್ವಾದ ಪಡೆದರು.