Breaking News

ಮಹೇಶ ಮಹೋತ್ಸವ ಸಮಿತಿಯಿಂದ ಮಹಿಷ ದಸರಾ ಆಚರಣೆ.

Mahisha Dasara celebration by Mahesh Mahotsava Committee.

ಜಾಹೀರಾತು
IMG 20241012 WA0197

ಸಿಂಧನೂರು : ಅ 12 ನಗರದ ವಿವಿಧ ದಲಿತಪರ ಸಂಘಟನೆ ಗಳ ಪ್ರಮುಖ ಮುಖಂಡರು ತಾಲೂಕು ಪಂಚಾಯಿತಿ ಉದ್ಯಾನವನದಲ್ಲಿರುವ ಶುಕ್ರವಾರದಂದು ಡಾ.ಬಿ.ಆ‌ರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೈಕ್ ರ್ಯಾಲಿ ಮೂಲಕ ಅಂಭಾಮಠಕ್ಕೆ ತೆರಳಿ ಮಹಿಷಾಸುರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಿಷ ದಸರಾ ಆಚರಣೆ ಮಾಡಿದರು.

ಉಪಾನ್ಯಾಸಕರಾದ ರಾಮಣ್ಣ ಗೋಲ್ವಾರ ಮಾತ ನಾಡಿ, ಮಹಿಷಾ ದಸರಾ ಆಚರಣೆ ನಿನ್ನೆ ಮೊನ್ನೆ ಆಚರಣೆ ಮಾಡಿರ್ತಕ್ಕಂತದ್ದಲ್ಲ ಸುಮಾರು

50 ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದಾರೆ ಐವತ್ತು ವರ್ಷಗಳ ಹಿಂದೆ ದಲಿತ ಪರ ಚಿಂತಕರಾದ ಮೂಲ ನಿವಾಸಿಗಳ ಪರಂಪರೆ ಉಳಿವಿಗಾಗಿ ಮಂಟಲಿಂಗಯ್ಯ

ಎನ್ನುವಂತವರು ಮಹಿಷಾ ದಸರಾ ಎಂಬ ಕಾರ್ಯಕ್ರಮ ವನ್ನು ಹುಟ್ಟು ಹಾಕಿದರು. ಅಂದಿನಿಂದ ಇಂದಿನವರೆಗೆ ಸು ಮಾರು ಚಾಮರಾಜ ಒಡೆ ಯರು 1950 ರಲ್ಲಿ ಮೈಸೂರಿನ

ಮಹಾಬಲಿ ಬೆಟ್ಟ ಮಹಿಷಾಸುರ ಆಳಿರ್ತಕ್ಕಂತ ಪ್ರದೇಶವಾಗಿದ್ದು ಯಾರೋ ಹೇಳಿದ ಮಾತಿಗೆ ಒಬ್ಬ ಮಹಿಷಾಸುವರನ್ನ ಜಯ ಚಾಮರಾಜ ಒಡೆಯರು ಮಹಿಷಾಸುರನನ್ನು ಆಕಾರ

ವಿಕಾರವನ್ನಾಗಿ ಮಾಡಿ ರಾಕ್ಷಸರ ರೀತಿಯಲ್ಲಿ `ಚಾಮುಂಡಿ ಬೆಟ್ಟ ದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ತಿಳಿಸಿದರು.

ಮಹಿಷಾಸುರ ಒಬ್ಬ ಅರಸರಾಗಿದ್ದ ಆದರೆ ಅದಕ್ಕಿಂತ ಮುಂಚೆ ಮೊದಲು ಬೌದ್ಧ ಧರ್ಮದ ಬಿಕ್ಕು ಆಗಿದ್ದ ಎನ್ನುವುದಕ್ಕೆ ಅಶೋಕ ಸಾಮ್ರಾಟನ ಕಾಲದಲ್ಲಿ ಉಲ್ಲೇ ಖವಿದೆ. ಮಾಕರ್ಂಡೇಯ, ಭೀಷ್ಮ ಪುರಾಣದಲ್ಲಿ ಬುದ್ಧನ ಮಹಾವಂಶ ಮತ್ತು ದೀಪ ವಂಶ ಪುಸ್ತಕದಲ್ಲಿ ಈತನ ಇತಿಹಾಸದ ಬಗ್ಗೆ ಉಲ್ಲೇಖವಿದೆ. ಮಹಿಷಾಸುರ ಒಬ್ಬ ಉತ್ತಮ
ರಾಜ ತರ್ಕಕ್ಕೆ ನಿಲುಕದೇ ಇರತಕ್ಕಂತಹ, ಕಾಲ್ಪನಿಗೆ ಮೀರಿದ ವಿಷಯವನ್ನು ನಾವು ಎಂದು ಪ್ರಶ್ನಿಸದೆ ಒಪ್ಪಿಕೊಳ್ಳಬಾ ರದು. ಮನು ವಾದವನ್ನು ನಮ್ಮ ತಲೆಯಲ್ಲಿ ಬಿತ್ತುತ್ತಿದ್ದಾರೆ. ಮಹಿ ಷಾಸುರ ಒಬ್ಬ ಮಹಾರಾಜ ಎನ್ನುವುದಕ್ಕೆ ಅವರ ಕೈಯಲ್ಲಿ ಖಡ್ಗವಿದೆ ಈ ದೇಶದ ಮೂಲ ಪರಂಪರೆಯ ಸಂಸ್ಕೃತಿಯ ಸಂಕೇತವಾಗಿದೆ. ನಾಗಸಂಸ್ಕೃತಿಯ ಪ್ರತೀಕವಾಗಿ ನಾಗರಾಜನ ಕೈಯಲ್ಲಿದೆ ಮಹಿಷಾಸುರ ರಾಕ್ಷಸ ಅಲ್ಲ ಜನರ ರಕ್ಷಕ ಇಂತಹ ರಕ್ಷಕನ ಚರಿತ್ರೆ ಇನ್ನು ಮುಂದೆ ಸಂಶೋಧನೆ ಆಗಬೇಕಾಗಿದೆ ತಾಲೂಕ ಆಡಳಿತ ಮತ್ತು ಜಿಲ್ಲಾಡಳಿತ ಪ್ರತಿ ವರ್ಷವೂ ಮಹಿಷಾಸುರ ದಸರಾ ಆಚರಣೆ ಮಾಡಲು ಅವಕಾಶ ಮಾಡಿಕೊಡಬೇಕು ಮಹಿಷಾಸುರನ ಆಕಾರ ವಿಕಾರ ಮೂರ್ತಿಯನ್ನು ನೈಜ ಮೂರ್ತಿಯನನ್ನಾಗಿ ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದರು.

ವಿಶೇಷ ಉಪನ್ಯಾಸಕರಾದ ರಮೇಶ ಹಲಗಿ ಮಾತನಾಡಿ, ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಸಾರುತ್ತಿವೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಸೂರು, ಮಹಿಷನೂರು ಮೊದಲಾದ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಇಂದಿನ ಮೈಸೂರು ಮಹಿಷನಾಳಿದ ಬಹುದೊಡ್ಡ ಪ್ರದೇಶವಾಗಿತ್ತು.ಪುರ್ವಜರ ಇತಿಹಾಸವನ್ನು ತಿಳಿದುಕೊಂಡು ತಿಳಿಯದ ಇರುವವರಿಗೆ ತಿಳಿಸಬೇಕಾಗಿದೆ ಆ ಕೆಲಸ ಮಹಿಷಾ ಮಹೋತ್ಸವ ಮುಂದೆ ನಡೆಯುತ್ತಿದೆ. ಮೈಸೂರಿನಲ್ಲಿರುವ ಚಾಮುಂಡಿಗೂ ಮಹಿಷಾಸುರನಿಗೂ ಎಲ್ಲಿಂದ ಎಲ್ಲಿಗೆ ಸಂಬಂಧ ಕಲ್ಪಿಸಿ ಬೌದ್ಧಿಕ ಧಾರ್ಮಿಕತೆಗೆ ತಳ್ಳಿದ್ದಾರೆ ಅಲ್ಲಿದ್ದ ಎಂದರೆ ಅದು ಲೆಕ್ಕಾನೆ ಇಲ್ಲ ಕಾಲ್ಪನಿಕ ಚಿತ್ರವಾಗಿರುವ ಚಾಮುಂಡಿಗು ಐತಿಹಾಸಿಕ ವ್ಯಕ್ತಿಗೆ ಮಹಿಷಾಸುರನಿಗೂ ಇಬ್ಬರ ನಡುವೆ ಕದನವಾಗಿದೆ ಎಂದು ಮನುವಾದಿ ಸಂಸ್ಕೃತಿಯ ಚರ್ಚೆಗಳು ನಮ್ಮ ಮುಂದೆ ಇವೆ. ಪುರಾಣಗಳ ಮೂಲಕ ಚಾಮುಂಡಿ ಇದಾಳೆ ಎಂದು ಹೇಳಲಾಗುತ್ತಿದೆ. ಪುರಾಣಗಳು ಯಾವು ಕೂಡ ಶಾಶ್ವತವಾಗಿ ಇರುವುದಿಲ್ಲ. ಸತ್ಯವಾದ ಘಟನೆಗಳನ್ನು ಹೇಳುತ್ತೇವೆ ಎನ್ನುವುದು ಶುದ್ಧ ಸುಳ್ಳು ನಾವು 90 ಪಸೆರ್ಂಟ್ ಸುಳ್ಳು ತುಂಬಿರ್ತಕ್ಕಂತ ಪುರಾಣಗಳಿಗೆ ಬಲಿಯಾಗಿದ್ದೇವೆ ಹೊರತು ನೈಜ ಇತಿಹಾಸ ತಿಳಿದುಕೊಳ್ಳಲು ಪರಿವರ್ತನೆಯಾಗಿಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದಾಗ ತಳ ಸ್ಪರ್ಶವಾಗಿ ಅಧ್ಯಯನ ಮಾಡಿ ಬೌದ್ಧ ಧರ್ಮವೇ ಅಂತಿಮ ಧರ್ಮ ಎಂದು ಕರೆ ಕೊಡುತ್ತಾರೆ.

ಭಾರತಕ್ಕೆ ಬಂದ ಆರ್ಯರು ಇಲ್ಲಿ ಇದ್ದ ಮೂಲ ನಿವಾಸಿಗಳನ್ನು ಅಸುರರು ಅಂತಾ ಕಥೆ ಕಟ್ಟಿದರು. ಮಹಿಷ ಮತ್ತು ಚಾಮುಂಡಿ ಭೌಗೋಳಿಕವಾಗಿ ಎಲ್ಲೋ ಒಂದು ಕಡೆ ಹುಟ್ಟಿ ಬೆಳೆದವರಲ್ಲ, ಒಂದೇ ಕಾಲ ಘಟ್ಟದವರಲ್ಲ. ಮಹಿಷ ಚಾರಿತ್ರಿಕ ಪುರುಷ, ಆದರೆ, ಚಾಮುಂಡಿ ಪುರಾಣ ಕಟ್ಟಕತೆಗಳು, ಈ ದೇಶದ ಮೂಲ ನಿವಾಸಿಗಳ ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ. ದೊಡ್ಡಮನಿ, ಹುಲುಗಪ್ಪ ಮಲ್ಕಾಪುರ, ಶರಣಪ್ಪ ಸೋಮನಾಳ, ಮಹಾಕಾಳಪ್ಪ ಮಲ್ಲಾಪುರ, ಪಂಪಾಪತಿ ಬೂದಿಹಾಳ, ಚೆನ್ನಪ್ಪ ಅಮೀನಗಡ, ಹನುಮಂತಪ್ಪ ವಕೀಲರು, ಮೌಲಪ್ಪ ವಕೀಲರು, ದುರ್ಗಪ್ಪ ಮಲ್ಲಾಪುರ, ಶರಣಬಸವ ಮಲ್ಲಾಪುರ, ನಿರುಪಾದಿ ಸಾಸಲಮರಿ, ರಾಮಕೃಷ್ಣ, ಮುದುಕಪ್ಪ ಮಲ್ಲಾಪುರ, ಹೊನ್ನೂರ್ ಕಟ್ಟಿಮನಿ, ಸಿದ್ದು ಸೋಮಲಾಪುರ,
ವಿರುಪಾಕ್ಷಿ ಸಾಸಲಮರಿ, ದೊಡ್ಡ ಬಸವ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.