Breaking News

“ನಡಗರ ಸಂಭ್ರಮದಿಂದ ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ “


Kottoor Sri Guru Basaveshwara Swamy’s Palankki Utsavam with Festival of Movement”

ಜಾಹೀರಾತು
IMG 20241012 WA0330

ಕೊಟ್ಟೂರು: ಶ್ರದ್ಧಾ ಭಕ್ತಿಗಳೊಂದಿಗೆ ಆಚರಣೆಗೊಂಡ ವಿಜಯದಶಮಿ ಹಬ್ಬ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದಿಂದ ಶನಿವಾರ ಸಂಜೆ ಅಂತಿಮ ತೆರೆಕಂಡಿತು.

ಸದ್ಗುಣ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯವೆಂದು ಸಂಭ್ರಮದಿಂದ ಆಚರಿಸಲಾಗುವ ಹಬ್ಬವೇ ವಿಜಯದಶಮಿ ಅಥವಾ ದಸರಾ. ಈ ವರ್ಷ ನಾಡ ಹಬ್ಬ ದಸರಾವನ್ನು ಅಕ್ಟೋಬರ್‌ 12 ರಂದು ಆಚರಿಸಲಾಗುವುದು.

ದಸರಾ ನಿಮಿತ್ಯ 2024 ರ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ ಪಠಣದೊಂದಿಗೆ ನಿತ್ಯ ಪಟ್ಟಣದಲ್ಲಿನ ಕೋಟೆ ಬಾಗದ ಊರಮ್ಮನ ದೇವಸ್ಥಾನ, ಕಾಳಮ್ಮದೇವಿ ದೇವಸ್ಥಾನ, ಬನಶಂಕರಿ, ನೇಕಾರ ಕಾಲೋನಿಯ ಚೌಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶ್ರೀರಾಮ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ದಿನಂಪ್ರತಿ ವಿವಿಧ ಬಗೆಯ ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಸಾಗಿದ್ದವು.

ಕೊನೆಯ ದಿನವಾದ ಶನಿವಾರ ರಂದು ದಸರಾ ಹಬ್ಬದ ಅಂಗವಾಗಿ ಶ್ರೀ ಗುರು ಬಸವೇಶ್ವರ ಸ್ವಾಮಿಯ ಬೆಳ್ಳಿ  ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಸಾಗಿತು. ಅಕ್ಟರ್ ಬಾದುಷಹ ನೀಡಿದ್ದ ಖಡ್ಗವನ್ನು ಪಲ್ಲಕ್ಕಿಯಲ್ಲಿ ಇರಿಸಲಾಗಿತ್ತು. ಕ್ರಿಯಾಮೂರ್ತಿಗಳಾದ ಆರ್.ಎಂ.ಪ್ರಕಾಶ್ ಸ್ವಾಮಿ  ಕೊಟ್ಟೂರು ದೇವರು ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವ ಹಿರೇಮಠದಿಂದ ಮಂಗಳವಾರ ಸಂಜೆ 4.30ಕ್ಕೆ ಆರಂಭಗೊಂಡಿತು.

ಈ ದಸರಾ ಮಹೊತ್ಸವ ತೇರು ಬಜಾರ್ ಮೂಲಕ ಸಾಗಿ ಹ್ಯಾಳ್ಯಾ ರಸ್ತೆಯಲ್ಲಿನ ಬನ್ನಿಕಟ್ಟೆಗೆ ತಲುಪಿ ಬನ್ನಿ ಮಹಾಕಾಳಿ ದೇವತೆಗೆ ಪೂಜೆಯು ನೆರವೇರಿಸಿ

ಸಾವಿರಾರು ಭಕ್ತರು ಪಲ್ಲಕ್ಕಿಯಲ್ಲಿರುವ ಶ್ರೀ ಗುರು ಬಸವೇಶ್ವರ ಸ್ವಾಮಿಯ ದರ್ಶನ ಪಡೆದು ಬನ್ನಿ ತೆಗೆದುಕೊಂಡು ದಸರಾ ಹಬ್ಬಕ್ಕೆ ಮೆರುಗು ಮೂಡಿತು.

ದಸರಾ ಹಬ್ಬದ ಸ್ವಾಮಿಯ ಮಹೋತ್ಸವವದುದ್ದಕ್ಕೂ ಸಮಳ, ನಂದಿಕೋಲು ಮತ್ತಿತರ ವಾದ್ಯಗಳ ನೀನಾದ ಅದ್ದೂರಿಯ ಈ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು. ಬನ್ನಿ ಕಟ್ಟೆಗೆ ಸಂಜೆ 5.ರ ಸುಮಾರಿನಲ್ಲಿ ಧಾರ್ಮಿಕ ವಿಧಿ ವಿಧಾನದೊಂದಿಗೆ ಆಗಮಿಸುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಶ್ರೀ ಸ್ವಾಮಿಗೆ ಜೈಕಾರಗಳನ್ನು ಹಾಕಿ ನಮಿಸಿದರು.

ಕೊಟ್ಟೂರು ದೈವಸ್ತರ ಪರವಾಗಿ ಸಂಪ್ರದಾಯದಂತೆ ಬನ್ನಿ ಮಹಾಕಾಳಿ ದೇವತೆಗೆ ಕುಂಕುಮ, ಅಕ್ಷತೆ, ಪುಷ್ಪ, ಫಲತಾಂಬುಲಗಳೊದಿಗೆ ದೇವಸ್ಥಾನದ ಬಳಗ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬನ್ನಿಮಹಾಕಾಳಿಗೆ ಒಕ್ಕಣಿಯ ಪತ್ರ ಬರೆದು ಪಟ್ಟಣದ ಜನತೆಯ ಕಾಣಿಕೆಯನ್ನು ಸ್ವೀಕರಿಸಿ ಸರ್ವರಿಗೂ ಒಳಿತು ಮಾಡುವಂತೆ ಕೋರಿ ಬರೆದ ಪತ್ರವನ್ನು ಶ್ಯಾನುಭೋಗರು ಈ ಸಂದರ್ಭದಲ್ಲಿ ಓದಿ ಮರಕ್ಕೆ ಕಟ್ಟಿದರು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬನ್ನಿ ವಿತರಿಸುವ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು.

About Mallikarjun

Check Also

screenshot 2025 11 19 18 50 08 70 6012fa4d4ddec268fc5c7112cbb265e7.jpg

ಸುಳ್ವಾಡಿ ದುರಂತಕ್ಕೆ ಕಾರಣರಾದ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ಸಂತ್ರಸ್ತರ ಆಕ್ರೋಶ . Victims' anger over bail granted to …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.