Dussehra celebration of Goddess Rajarajeshwari of Sri Gudda.
ಸಿಂಧನೂರು:ಗ್ರಾಮದ ಅಧಿನಾಯಕಿ ಕಲಿಯುಗದ ಕಾಮಧೇನು ಶ್ರೀ ಗುಡ್ಡದ ರಾಜರಾಜೇಶ್ವರಿ ದೇವಿಯ ದಸರಾ ಮಹೋತ್ಸವ ಮತ್ತು ಮೆರವಣಿಗೆ ಕಾರ್ಯಕ್ರಮಕ್ಕೆ ಮೆರವಣಿಗೆ ಊರಿನ ಸಕಲ ಸಮಾಜದ ಜನರಿಗೆ ಸಂಭ್ರಮ ಸಡಗರ.
ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಶ್ರೀ ಗುಡ್ಡದ ರಾಜ ರಾಜೇಶ್ವರಿಯ ದಸರಾ ಮಹೋತ್ಸವದ ಪ್ರಯುಕ್ತವಾಗಿ ಶುಕ್ರವಾರದಂದು ವಿಜ ಯದಶಮಿ ದಿನದಂದು ಶ್ರೀ ಗುಡ್ಡದ ರಾಜರಾಜೇಶ್ವರಿಯ ದೇವಿಯನ್ನು ಬೆಳಗ್ಗೆ ಪರ್ವಕವಾಗಿ ಶ್ರೀ ರಾಜರಾ ಜರಾ ಜೇಶ್ವರಿ ದೇವಿಗೆ ಕುಂಕುಮಾರ್ಚನೆ ಸೇರಿ ವಿವಿಧ ವಿಶೇಷ ಪೂಜೆಗಳು ನೆರ ವೇರಿದವು.
ಅನೇಕ ಭಕ್ತರು ದೇವಿ ಪಾದಗಟ್ಟೆವರೆಗೆ ದೀರ್ಘದಂಡ ನಮಸ್ಕಾರ ಹಾಕಿ, ಹರಕೆ ತೀರಿಸಿದರು.
ಅರಳಹಳ್ಳಿ ಗುಂಡಿಗೆ :
ಸಂಜೆ ಕಾಲ್ನ ಡಿಗೆಯೊಂದಿಗೆ ಅರಳಹಳ್ಳಿ ಗುಂಡಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅರಳಳ್ಳಿ ಗ್ರಾಮ ಸಿಮಾದಿಂದ ಕುರುಕುಂದಾ ಗ್ರಾಮಕ್ಕೆ ಕುಂಬ ಹೊರುವ ಮೂಲಕ ದೇವಿಯನ್ನು ಬರಮಾಡಿಕೊಂಡ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು.
ಈ ದಾರ್ಮಿಕ ಕಾರ್ಯಕ್ರಮಕ್ಕೆ 100 ವರ್ಷಗಳ ಕಾಲ ಇತಿಹಾಸ ವಿದ್ದು ಊರಿನ ಎಲ್ಲಾ ಸರ್ವ ಜಾತಿ ಜನಾಂಗದ ಹಾಗೂ ಸುತ್ತಮುತ್ತಲಿನ ಗ್ರಾಮದ ದೇವಿಯ ಭಕ್ತರು ಈ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವೂ ಡೊಳ್ಳು, ಬಾಜಬಜಂತ್ರಿಯ ಮೆರವಣಿಗೆ ಯೊಂದಿಗೆ ಸಾವಿರಾರು ಜನಸಂಖ್ಯೆ ಯಲ್ಲಿ ದೇವಿಯ ದರ್ಶನಕ್ಕೆ ಭಕ್ತರು ಸೇರಿದ್ದರು.
ನಂತರ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ, ಪಾದಗಟ್ಟೆ ತಲುಪಲಾಯಿತು.
ವಿಜಯದಶಮಿ ನಿಮಿತ್ತ ಸುತ್ತಮುತ್ತಲಿನ ಗ್ರಾಮಗಳಾದ ಕುರುಕುಂದ, ತಿಡಿಗೋಳ, ನಿಡಿಗೋಳ, ಶಿವರಾಮನಗರಕ್ಯಾಂಪ್, ಗುಡದಮ್ಮ ಕ್ಯಾಂಪ್, ಬೊಮ್ಮನಾಳ ಗ್ರಾಮಸ್ಥರು ಇದ್ದರು.