Breaking News

ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಆಹಾರ ಪೌಷ್ಠಿಕ ಭದ್ರತಾ ಯೋಜನೆಯಡಿಯಲ್ಲಿ ಕ್ಷೇತ್ರೋತ್ಸವ

Field Festival under National Food Nutrition Security Scheme by Department of Agriculture

ಜಾಹೀರಾತು

ಮಾನ್ವಿ: ತಾಲೂಕಿನ ಕಲ್ಲೂರು ಗ್ರಾಮದಲ್ಲಿನ ಪ್ರಗತಿ ಪರ ರೈತ ರಾಮಕೃಷ್ಣರವರ ತೋಗರಿ ಹೊಲದಲ್ಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ೨೦೨೪-೨೫ ನೇ ಸಾಲಿನ ರಾಷ್ಟ್ರೀಯ ಆಹಾರ ಪೌಷ್ಠಿಕ ಭದ್ರತಾ ಯೋಜನೆಯಡಿಯಲ್ಲಿ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಕಲ್ಲೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ್ ಮಾತನಾಡಿ ರೈತರಿಗಾಗಿ ಸರಕಾರವು ಕೃಷಿ ಇಲಾಖೆಯ ಮೂಲಕ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ವೈಜ್ಞಾನಿಕ ಸುಧಾರಿತ ಕೃಷಿಯನ್ನು ಕೈಗೊಂಡಾಗ ಮಾತ್ರ ರೈತರಿಗೆ ಕೃಷಿಯಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆದುಕೊಂಡು ಕೃಷಿಯನ್ನು ಲಾಭದಾಯಕವನ್ನಾಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ರೈತರು ಬಿತ್ತನೆಗೆ ಪೂರ್ವದಲ್ಲಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಲ್ಲಿ ದೊರೆಯುವ ಜೈವಿಕ ರೋಗನಾಶಕವಾದ ಟ್ರೆöÊಕೋಡರ್ಮ ಬಳಸಿ ಬಿಜೋಪಚಾರ ಕೈಗೊಂಡಲ್ಲಿ ಬೀಜದಿಂದ ಬರುವ ಅನೇಕ ರೋಗಗಳನ್ನು ತಡೆಯುವುದಕ್ಕೆ ಸಾಧ್ಯವಾಗುತ್ತದೆ ಹತ್ತಿ ಮತ್ತು ತೋಗರಿ ಬೆಳೆಯಲ್ಲಿ ಬರನಿರೋಧಕತೆಯನ್ನು ತಡೆಯಲು ಪೋಟ್ಯಾಷ್ ಹೆಚ್ಚಿರುವ ರಾಸಾಯನಿಕ ಗೊಬ್ಬರಗಳನ್ನು ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ಬೆಳೆಗೆ ಸಿಂಪಡಿಸಬೇಕು ಹಾಗೂ ತೋಗರಿ ಮತ್ತು ಹತ್ತಿಯಲ್ಲಿ ಹೆಚ್ಚಿನ ಹಾನಿಯನ್ನುಂಟುಮಾಡುವ ಗುಲಾಬಿ ಕಾಯಿಕೊರಕ ಹಾಗೂ ಹಸಿರುಕಾಯಿಕೋರಕ ಕೀಟಗಳನ್ನು ನಿವಾರಿಸುವುದಕ್ಕೆ ಸಮಗ್ರ ಕೀಟನಿರ್ವಾಹಣೆ ಕ್ರಮಗಳನ್ನು ಅನುಸರಿಸಿದಲ್ಲಿ ಕಡಿಮೆ ಖರ್ಚಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಕೀಟಗಳನ್ನು ನಿಯಂತ್ರಿಸುವುದಕ್ಕೆ ಪ್ರತಿ ಒಂದು ಎಕರೆಗೆ ಮೋಹಕ ಬಲೆಗಳನ್ನು ಅಳವಡಿಸಬೇಕು ಮೋಹಕ ಬಲೆಯಲ್ಲಿ ಬಿಳುವ ಗಂಡು ಪತಂಗಗಳ ಸಂಖ್ಯೆಗೆ ಅನುಗುಣವಾಗಿ ಬೇವು ಆಧಾರಿತ ಹಾಗೂ ರಾಸಾಯನಿಕ ಕೀಟನಾಶಕಗಳನ್ನು ಕೃಷಿ ಅಧಿಕಾರಿಗಳ ಸೂಚನೆಗೆ ಅನುಗುಣವಾಗಿ ಬಳಸಬೇಕು. ತೋಗರಿಯಲ್ಲಿ ಅಂತರ ಬೆಳೆಯಾಗಿ ಹತ್ತಿಯನ್ನು ಬೆಳೆಯುವುದರಿಂದ ಒಂದು ಬೆಳೆಯಲ್ಲಿ ನಷ್ಟವಾದಲ್ಲಿ ಇನ್ನೋಂದು ಬೆಳೆಯಲ್ಲಿ ಅದಾಯವನ್ನು ಪಡೆಯುವ ಮೂಲಕ ನಿಶ್ಚೀತವಾದ ಅದಾಯವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ರೈತರು ಹತ್ತಿರದಲ್ಲಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧಾನ ಯೋಜನೆಯಲ್ಲಿ ಕೃಷಿ ಪರಿಕಾರಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಗ್ರಾಮದ ರೈತರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಕೃಷಿ ಅಧಿಕಾರಿ ಡಾ.ಶಿವಶಂಕರ್ ರೈತರಿಗೆ ಬಿಜೋಪಚಾರ, ಕೀಟಮತ್ತು ರೋಗಗಳ ನಿವಾರಣೆ,ರಸಗೋಬ್ಬರಗಳ ಬಳಕೆ, ಸೇರಿದಂತೆ ಅಧಿಕ ಇಳುವರಿ ಪಡೆಯುವುದಕ್ಕೆ ರೈತರಿಗೆ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡಿದರು. ಕೃಷಿ ಸಖಿ ಲಿಲಾವತಿ ಹೋಕ್ರಾಣಿ, ಅತ್ಮ ಯೋಜನೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಯಲ್ಲಪ್ಪ,
ಗ್ರಾಮದ ಪ್ರಗತಿ ಪರ ರೈತರಾದ ಬಸವರಾಜ ಹೋಕ್ರಾಣಿ, ಷಣ್ಮಖ ಆಂಜನೇಯ್ಯ, ತಿಪ್ಪಣ್ಣ, ಅಯ್ಯಳ್ಳಪ್ಪ ಹೋಕ್ರಾಣಿ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.