Belagavi-Manuguru Express train service will start from 16: Dr. Baburao

ರಾಯಚೂರು: ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಮುಣುಗೂರ ಎಕ್ಸಪ್ರೆಸ್ ರೈಲ್ವೆ ಸಂಚಾರವನ್ನು ಪುನರಾರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಡಾ.ಬಾಬುರಾವ್ ಅವರು ತಿಳಿಸಿದ್ದಾರೆ.
ರೈಲ್ವೆ ಸಂಖ್ಯೆ 07335/07336 ಬೆಳಗಾವಿಯಿಂದ ವಾರದಲ್ಲಿ ರವಿವಾರ, ಬುಧವಾರ, ಶನಿವಾರ, ಮಂಗಳವಾರ ನಾಲ್ಕು ದಿನ ಬೆಳಗಾವಿಯಿಂದ ಸಂಚರಿಸುವ ರೈಲು ಮುಣುಗೂರಿನಿಂದ ವಾರದಲ್ಲಿ ಸೋಮವಾರ, ಗುರುವಾರ, ರವಿವಾರ ಮತ್ತು ಬುಧವಾರ ಸಂಚರಿಸಲಿದೆ.
ಈ ರೈಲು ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಮಂತ್ರಾಲಯಂ, ರಾಯಚೂರು, ಯಾದಗಿರಿ, ಚಿತ್ತಾಪೂರ, ಸಿಕಂದ್ರಬಾದ್ ಗಳಲ್ಲಿ ನಿಲುಗಡೆಯಾಗಲಿದೆ. ಅ.16ರಂದು ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿರುವ ಡಾ. ಬಾಬುರಾವ್ ಅವರು, ಇತ್ತೀಚೆಗೆ ರಾಯಚೂರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆಗಮಿಸಿದ್ದ ವೇಳೆ ಈ ರೈಲು ಸಂಚಾರವನ್ನು ಪುನರಾರಂಭಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು. ಮನವಿ ಸ್ಪಂದಿಸಿರುವ ಸಚಿವರು ಈಗ ಪ್ರಯಾಣಿಕರ ಅನುಕೂಲಕ್ಕೆ ರೈಲು ಓಡಿಸಲು ನಿರ್ಧರಿಸಿದ್ದು ಸ್ವಾಗತಾರ್ಹವಾಗಿದೆ. ಹಾಗೂ ಸಚಿವರು ಅಭಿನಂದನಾರ್ಹರಾಗಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.