Appeal for action against those who demolished the municipal women’s collective toilet

ಮಾನ್ವಿ: ಪಟ್ಟಣದ ವಾರ್ಡ ನಂ. 20ರಲ್ಲಿನ ಆದಾಪುರ ಪೇಟೆಯ ನೂರಾರು ಮಹಿಳೆಯರು ಬೆಳಿಗ್ಗೆಯಿಂದಲೇ ಪುರಸಭೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು ವಾರ್ಡನಲ್ಲಿರುವ ಪುರಸಭೆಯ ಮಹಿಳೆಯರ ಸಾಮೂಹಿಕ ಶೌಚಾಲಯವನ್ನು ಕೆಲವರು ಜೆ.ಸಿ.ಬಿ.ಬಳಸಿ ನೆಲಸಮ, ಮಾಡುತ್ತಿದ್ದಾರು ಕೂಡ ಪುರಸಭೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುದಾಂಗದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ವಾರ್ಡನ ನಿವಾಸಿ ಮಲ್ಲಮ್ಮ ಗೊರವಾರ ಮಾತನಾಡಿ ಆದಾಪುರ ಪೇಟೆಯ ಮಹಿಳೆಯರಿಗಾಗಿ ಕಳೆದ 40 ವರ್ಷಗಳ ಕೆಳಗೆ ಪುರಸಭೆ ಆಡಳಿತದ ವತಿಯಿಂದ ಸರಕಾರಿ ಜಾಗವನ್ನು ಗುರುತಿಸಿ ಸಾಮೂಹಿಕ ಶೌಚಾಲಯವನ್ನು ನಿರ್ಮಿಸಲಾಗಿತ್ತು ಮಹಿಳೆಯರು ತಮ್ಮ ನಿತ್ಯ ಶೌಚಾಕಾರ್ಯಕ್ಕೆ ಸಾಮೂಹಿಕ ಶೌಚಾಲಯವನ್ನು ಬಳಸಿಕೊಳ್ಳುತ್ತಿದ್ದೇವೆ ಅದರೆ ಚಾಕರಿ ಹನುಮಯ್ಯ,ಆದೇಪ್ಪ, ಇವರು ಸರಕಾರಿ ಜಾಗದಲ್ಲಿರುವ ಪುರಸಭೆಯ ಸಾಮೂಹಿಕ ಶೌಚಾಲಯವನ್ನು ಕೆಡುವುತ್ತಿದ್ದಾರು ಕೂಡ ಪುರಸಭೆ ಅಧಿಕಾರಿಗಳು ಮೌನವಾಗಿದ್ದರೆ ಆದಾಪುರ ಪೇಟೆಯಲ್ಲಿನ ಸಾವಿರಾರು ಮಹಿಳೆಯರು ದಿನನಿತ್ಯ ಶೌಚಾಲಯಕ್ಕೆ ಎಲ್ಲಿಗೆ ಹೋಗಬೇಕು ಹಾಗೂ ಮನೆಯಲ್ಲಿನ ವೃದ್ದ ಮಹಿಳೆಯರು,ಮಕ್ಕಳಿಗೆ ತೀವ್ರವಾದ ತೊಂದರೆಯಾಗಿದ್ದು ಕೂಡಲೆ ಪುರಸಭೆ ಅಧಿಕಾರಿಗಳು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಹಾಗೂ ಪುರಸಭೆ ವತಿಯಿಂದ ಪುನಃ ಸಾಮೂಹಿಕ ಶೌಚಾಲಯ ವ್ಯವಸ್ಥೆ ಮಾಡುವಂತೆ ಪುರಸಭೆ ವ್ಯವಸ್ಥಾಪಕರಾದ ಕೆ.ನರಸಿಂಹ ರವರಿಗೆ ಒತ್ತಾಯಿಸಿದರು.
20 ವಾರ್ಡ ಪುರಸಭೆ ಸದಸ್ಯರಾದ ವೆಂಕಟೇಶ ನಾಯಕ ಸೇರಿದಂತೆ ವಾರ್ಡನ ಮಹಿಳೆಯರಾದ ಗಂಗಮ್ಮ, ಸಗರಮ್ಮ, ರಾಘಮ್ಮ, ಲಕ್ಷ್ಮೀ, ಉರುಕುಂದಮ್ಮ,ಹುಸೇನಮ್ಮ, ಮುದ್ದಮ್ಮ, ಬಸ್ಸಮ್ಮ, ಪದ್ದಮ್ಮ ಸೇರಿದಂತೆ ನೂರಾರು ಮಹಿಳೆಯರು ಇದ್ದರು.