
Nameplate of re-established farmers association in Alambadi village


ವರದಿ : ಬಂಗಾರಪ್ಪ .ಸಿ .
ಹನೂರು :ಗಡಿಯಂಚಿನ ಅಲಂಬಾಡಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕದ ನಾಮಫಲಕ ಹಾಗೂ ಅರಣ್ಯ ಇಲಾಖೆ ನಡುವೆ ಉಂಟಾಗಿದ್ದ ಗೊಂದಲದ ಸ್ಥಳಕ್ಕೆ ರೈತ ಸಂಘದ ಚಾಮರಾಜನಗರ ಜಿಲ್ಲಾ ಘಟಕ ಉಪಾಧ್ಯಕ್ಷ ಗೌಡೇಗೌಡ ಭೇಟಿನೀಡಿ ಮತ್ತೆ ತಮ್ಮ ರೈತ ಸಂಘದ ನಾಮ ಫಲಕವನ್ನು ಅಳವಡಿಸಲು ಯಶಸ್ವಿಯಾದರು.
ಅಲಂಬಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡರಾದ ಗೌಡೆಗೌಡರು ರೈತ ಸಂಘದ ನಾಮಫಲಕವನ್ನು ತೆರವು ಮಾಡಬೇಕು ಎಂದು ನೆನ್ನೆ ಅಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ನಿಂದಿಸಿದ್ದಾರೆ ಇದನ್ನು ನಮ್ಮ ಸಂಘಟನೆ ವತಿಯಿಂದ ಖಂಡಿಸುತ್ತೇವೆ. ನಾಮಫಲಕ ವಿಚಾರವಾಗಿ ಅರಣ್ಯ ಇಲಾಖೆಯ ಡಿ ಎಫ್ ಒ ಮಾತನಾಡಿ ಅನುಮತಿ ಪಡೆದಿದ್ದರು ಸಹ ನಾಮ ಫಲಕವನ್ನು ತೆಗೆಯಲು ಅಧಿಕಾರಿಗಳ ತಂಡ ಆಗಮಿಸಿದರು.
ನಮ್ಮ ಸಂಘಟನೆಯು
ತೆರವು ಮಾಡಲ್ಲ. ಕಾರ್ಯಕರ್ತರು, ಮಹಿಳೆಯರ ಮೇಲೆ ಏನಾದರು ತೊಂದರೆ ಉಂಟಾದಲ್ಲಿ ಅರಣ್ಯ ಇಲಾಖೆಯವರೇ ಕಾರಣರಾಗುತ್ತಾರೆ ,
ಅರಣ್ಯ ವಾಸಿಗಳಿಗೆ ಕುಡಿಯುವನೀರು, ವಿದ್ಯುತ್, ರಸ್ತೆ ಕೇಳುತ್ತಾರೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಇದೆ ರೀತಿ ತೊಂದರೆ ಮುಂದುವರೆದರೆ ರಾಜ್ಯ ಸಂಘಟನೆ ಅಲಂಬಾಡಿಗೆ ಬಂದು ಹೋರಾಟ ಮಾಡಬೇಕಾಗುತ್ತದೆ ಎಂದರು .
ಇದೇ
ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಹನುರು ಘಟಕದ ಅಧ್ಯಕ್ಷ ಅಮ್ಮದ್ ಖಾನ್,ಗ್ರಾಮ ಘಟಕದ ಸಂಘಟನೆಯ ಎಲ್ಲಾ ಪ್ರಮುಖರು ಸೇರಿದಂತೆ ,ಇನ್ನಿತರರು ಹಾಜರಿದ್ದರು.


