Breaking News

ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪ್ರಥಮ ಬಾರಿಗೆ ಕ್ರಿಕೇಟ್ ಟೂರ್ಲಿಮೆಂಟ್ ಪ್ರಾರಂಭ

On the occasion of Dussehra festival, the Karnataka Journalists Association has launched the first cricket tournament

ಜಾಹೀರಾತು

ಕೊಟ್ಟೂರು : ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ) ಕೊಟ್ಟೂರು ತಾಲೂಕು ಘಟಕ ದಸರಾ ಹಬ್ಬದ ಪ್ರಯುಕ್ತ ಕೊಟ್ಟೂರಿನ ವಿವಿದ ಇಲಾಖೆಗಳ ಕ್ರಿಕೇಟ್ ಪಂಧ್ಯಗಳನ್ನು ಅಯೋಜಿಸಲಾಗಿತ್ತು. ಶನಿವಾರ ಬೆಳಿಗ್ಗೆ ೧೦-೩೦ ಕ್ಕೆ ನಿವೃತ್ತಿ ಶಿಕ್ಷಕ ವಿ.ಎನ್.ಹಟ್ಟಿ ಯವರು ಕ್ರಿಕೇಟ್ ಪಂದ್ಯಗಳಿಗೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಹಸಿರು ಹೊನಲು ತಂಡದ ನಾಗರಾಜ್ ಬಂಜಾರ್ ಅವರು ಮಾತನಾಡಿ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಪೀಳಿಗೆ ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದರು

ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್ ಮಾತನಾಡಿ ಪತ್ರಕರ್ತರ ವೃತ್ತಿ ಬರವಣಿಗೆ ಸೀಮಿತವಲ್ಲ. ಕ್ರೀಡೆಯಲ್ಲಿ ಭಾಗವಹಿಸಿ ಆಸಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಹಾಗೂ ಹಳೆ ಕೊಟ್ಟೂರು ಸೇವಾ ಸಂಸ್ಥೆಯು ಸಾಮಾಜಿಕ ಹಿತಕ್ಕಾಗಿ ಶ್ರಮಿಸಲು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.

ಶುಕ್ರವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಕ್ರೀಡಾಂಗಣ ಅಟವಾಡಲು ಬರದೆ ಬೆಳಿಗ್ಗೆ ೮-೦೦ ಗಂಟೆಗೆ ಪ್ರಾರಂಭವಾಗಿಬೇಕಿದ್ದ ಪದ್ಯಗಳು ಎರಡು ತಾಸು ತಡವಾಗಿ ಆರಂಭಗೊAಡವು ಪ್ರಾರಂಭದ ಪದ್ಯದಲ್ಲಿ ಹಸಿರು ಹೊನಲು ತಂಡ ಹಾಗೂ ಶಿಕ್ಷಕರ ತಂಡದೊAದಿ ಕ್ರಿಕೇಟ್ ಪಂದ್ಯ ಆರಂಭಗೊAಡಿತು. ಇದರಲ್ಲಿ ಶಿಕ್ಷಕರ ತಂಡ ಜಯಗಳಿಸುವುದರೊಂದಿಗೆ ಶುಭ ಆರಂಭವಾಯಿತು.

ಕ್ರೀಡಾ ಕೂಟವನ್ನು ಅಚ್ಚುಕಟ್ಟಾಗಿ ಮತ್ತು ಯಾವುದೇ ಗಲಬೇ ತೊಂದರೆ ಇಲ್ಲದೆ ಕ್ರಿಕೇಟ್ ಪಂದ್ಯಾಟಗಳನ್ನು ಅಯೋಜಿಸಲಾಗಿತ್ತು ಆಟದಲ್ಲಿ ತೊಂದರೆಯಾದವರು ತಾಲೂಕು ಸಮೂದಯಾ ಕೇಂದ್ರದಿAದ ಆಸ್ಪತ್ರೆಯ ಸಿಬ್ಬಂದಿಯವರು ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿದೆ ಕ್ರೀಡಾಪಟುಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಂಗಣದಲ್ಲಿ ಯಾವುದೇ ಗಲಾಟೆ ಆಗದಂತೆ ಎಚ್ಚರ ವಹಿಸಲಾಗಿತ್ತು.
ಟೂರ್ಲಿಮೆಂಟ್‌ನಲ್ಲಿ ೧೨ ಟೀಮ್‌ಗಳು ಭಾಗವಹಿಸಿದ್ದವು ಕೊಟ್ಟೂರು ತಾಲೂಕಿನ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಭಾಗವಹಿಸುವುದರ ಮೂಲಕ ತಮ್ಮ ಕ್ರೀಡಾಭಿಮಾನವನ್ನು ತೋರಿಸಿದರು. ತಾಲೂಕು ಪಂಚಾಯಿತಿ, ಕೆ.ಇ.ಬಿ, ಅಗ್ನಿಶಾಮಕದಳ, ಶಿಕ್ಷಕರು(ಎ), ಹಳೇ ಕೊಟ್ಟೂರು, ವಕೀಲರು, ಆರೋಗ್ಯ ಇಲಾಖೆ, ಹಸಿರುಹೊನಲು ತಂಡ, ಕರ್ನಾಟಕ ಪತ್ರಕರ್ತರ ಸಂಘ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಕರು ಬಿ ತಂಡ, ಈ ಎಲ್ಲಾ ಇಲಾಖೆಯವರು ಭಾಗವಹಿಸಿದ್ದರು. ಅದರೆ ಕೆಲವು ಕಾರಣಗಳಿಂದ ಪೊಲೀಸ್ ಇಲಾಖೆ, ತಾಲೂಕು ಆಡಳಿತ ತಂಡದವರು ಭಾಗವಹಿಸಲಿಲ್ಲ.
ಟೂರ್ಲಿಮೆಂಟ್ ಪಂದ್ಯಗಳು ಎರಡು ದಿನಗಳು ನಡೆಯುತ್ತವೆ. ಇದರಲ್ಲಿ ವಿಜೇತರಾದವರಿಗೆ ಆಕರ್ಷಕ ಟ್ರೋಪಿ ಕೊಡಲಾಗುವುದು. ಅಲ್ಲಿದೆ ಪ್ರಥಮ, ದ್ವಿತೀಯ,ಹಾಗೂ ಮ್ಯಾನ್‌ಆಪ್‌ದಿ ಮ್ಯಾಚ್, ಬೆಸ್ಟ್ ಬೋಲಿಂಗ್, ಬೆಸ್ಟ್ ಕ್ಯಾಚ್ ಹೀಗೆ ಅನೇಕ ಬಹುಮಾನಗಳನ್ನು ಕೊಡಲಾಗುವುದು. ಇದರ ಟ್ರೋಫಿಯ ಜೊತೆಗೆ ಪ್ರಥಮ ಬಹುಮಾನ ೧೫೦೦೦ ರೂಗಳು ಮತ್ತು ದ್ವಿತೀಯ ಬಹುಮಾನ ೧೦೦೦೦ ರೂಗಳನ್ನು ಕೊಡಲಾಗುವುದು ಎಂದು ಕರ್ನಾಟಕ ಪತ್ರಕರ್ತ ಸಂಘ  ತಾಲೂಕು ಘಟಕದ ಅಧ್ಯಕ್ಷ ಕೆ. ಕೊಟ್ರೇಶ್ ಹಾಗೂ ಕಾರ್ಯಾಧ್ಯಕ್ಷ ವಿಜಯ್ ಕುಮಾರ್ ಹೆಚ್ ಪತ್ರಿಕೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿ.ಎನ್.ಹಟ್ಟಿ ನಿವೃತ್ತ ಶಿಕ್ಷರು, ಹಸಿರು ಹೊನಲು ತಂಡದ ಅಧ್ಯಕ್ಷರು ಗುರುರಾಜ್, ಬಂಜಾರ್ ನಾಗರಾಜ್, ವಿಕ್ರಂ, ಪರಶುರಾಮ್ ಎಸ್ , ಪ್ರಕಾಶ್ ಜೆ ಎಸ್ , ಸಂದೀಪ್ ಬಣಕಾರ ,ಡಾ.ಬದ್ದಿನಾಯ್ಕ ಸಮುದಾಯ ಆರೋಗ್ಯ ಕೇಂದ್ರ, ವಿಜಯಕುಮಾರ್ ಎಡಿ ತಾಲೂಕು ಪಂಚಾಯಿತಿ, ಬಸವರಾಜ್  ಬಣಕಾರ ,ಚಿರಿಬಿ ಕೊಟ್ರೇಶ್, ಶ್ರೀನಿವಾಸ್ ಉಪಾಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಕಾರ್ಯದರ್ಶಿ ಡಿ ಸಿದ್ದಪ್ಪ , ಪ್ರತಿಯೊಂದು ಟೀಂ ನ ಸದಸ್ಯರು ಮತ್ತು ಸಾರ್ವಜನಿಕರು ಟೂರ್ಲಿಮೆಂಟ್‌ನಲ್ಲಿ ಭಾಗವಹಿಸಿದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.