A biker missed a cobra and fell into a pothole.

ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ರಾಜ್ಯ ಹೆದ್ದಾರಿ ನಾಗರಹುಣಿಸೆ ಗ್ರಾಮದಲ್ಲಿ ಎದುರಿಗೆ ಬರುವ ಬೈಕಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಆಯ ತಪ್ಪಿ ರಸ್ತೆಯ ಪಕ್ಕದಲ್ಲಿ ಇದ್ದ ಗುಂಡಿಗೆ ಬೈಕ್ ಸಮೇತ ಬಿದ್ದಿದ್ದಾನೆ.ಬೈಕ್ ಸವಾರನಿಗೆ ಯಾವುದೇ ಅಪಾಯ ಆಗಿಲ್ಲ ಎಂದು ತಿಳಿದು ಬಂದಿದೆ. ಗುಡೇಕೋಟೆ ಹೋಬಳಿ ಸೇರಿದಂತೆ ಕೂಡ್ಲಿಗಿ ತಾಲೂಕಿನಾದ್ಯಂತ ಶುಕ್ರವಾರ ಸುರಿದ ಭಾರಿ ಮಳೆಗೆ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು, ಪ್ರಯಾಣಿಕರು ಪರದಾಡುತ್ತಿದ್ದಾರೆ.ಹೆಚ್ಚು ಮಳೆ ಸುರಿದ್ದರಿಂದ ಗ್ರಾಮೀಣ ಭಾಗದ ಹಲವು ರಸ್ತೆಗಳು ಜಲಾವೃತವಾಗಿ ಎರಡ್ಮೂರು ದಿನ ನೀರು ನಿಂತು ಹಾಳಾಗುತಿದ್ದಾವೆ.

ಕೂಡ್ಲಿಗಿ ತಾಲೂಕು ಕೇಂದ್ರದಿಂದ ಗುಡೇಕೋಟೆ ಮಾರ್ಗವಾಗಿ ಮೊಳಕಾಲ್ಮೂರು, ರಾಯದುರ್ಗ,ರಾಂಪುರ, ಬಳ್ಳಾರಿ ಚಳ್ಳಕೆರೆ ಕಡೆ ರಾಜ್ಯ, ಜಿಲ್ಲಾ ರಸ್ತೆಗಳು ಹಾದು ಹೋಗಿದ್ದು, ಹಲವಾರು ಗ್ರಾಮಗಳ ಸಂಪರ್ಕ ರಸ್ತೆಗಳು ಗುಂಡಿ ಬಿದ್ದು, ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ರಸ್ತೆಗಳಲ್ಲಿನ ಗುಂಡಿಗಳು, ಕೊಳಚೆಯಿಂದ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ತಾಲೂಕು ಜಿಲ್ಲಾ ಕೇಂದ್ರದಿಂದ ಸ್ವ ಗ್ರಾಮಗಳಿಗೆ ತೆರಳಬೇಕಾದರೆ ನರಕ ದರ್ಶನದ ಅನುಭವ ಉಂಟಾಗುತ್ತಲಿದೆ.
ಮಳೆಗಾಲ ಆಗಿದ್ದರಿಂದ ರಸ್ತೆಯ ಮಧ್ಯದಲ್ಲಿ ದೊಡ್ಡದಾದ ತಗ್ಗು ಬಿದ್ದಿವೆ. ಜೀವ ಕೈಯಲ್ಲಿ ಹಿಡಿದು ವಾಹನ ಸಂಚಾರ ಮಾಡುವಂತೆ ಆಗಿದೆ.
ಗುಡೇಕೋಟೆ ಹೋಬಳಿ ಸುತ್ತಮುತ್ತಲ ಗ್ರಾಮಗಳ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದು ಹಾಗೂ ರಸ್ತೆ ಅಗೆದು ಹಾಳು ಮಾಡಲಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಗುಂಡಿ ಮಾಡಿರುವುದರಿಂದ ತಗ್ಗು ದಿಣ್ಣೆಗಳಿಂದ ಕೂಡಿದೆ. ಎಕ್ಕುಂಬಿ ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಹಾಳಾಗಿದ್ದು,ಎ.ದಿಬ್ಬದಹಳ್ಳಿಯಿಂದ ಗುಡೇಕೋಟೆ ವರೆಗೆ ಅಲ್ಲಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ. ಗುಡೇಕೋಟೆ ಹೊರ ವಲಯದ ಗುಡೇಕೋಟೆ ಸಿಡೇಗಲ್ಲು,ಅರ್ಜುನಚಿನ್ನನಹಳ್ಳಿ ಮಾರ್ಗ ಹಾಗೂ ಕಸಾಪುರ ಹುರಡಿಹಳ್ಳಿ,ಗುಡೇಕೋಟೆ ರಾಮಸಾಗರಹಟ್ಟಿ ರಸ್ತೆ ಹಾಳಾಗಿದ್ದು, ಬೈಕ್ ಸವಾರರ ಪರದಾಟ ಹೇಳತೀರದಾಗಿದೆ.
ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯ ರಾಜ್ಯ,ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ. ತಾಲೂಕಿನ ಅನೇಕ ಗ್ರಾಮಗಳ ಕೂಡ ರಸ್ತೆಗಳು ಜಿಲ್ಲಾ ಮುಖ್ಯ ರಸ್ತೆಗಳು ಹಾಳಾಗಿವೆ. ಇದರಿಂದಾಗಿ ಸಕಾಲದಲ್ಲಿ ರೋಗಿಗಳು, ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು ತಮ್ಮ ಸ್ಥಳಗಳಿಗೆ ತಲುಪಲು ಆಗುತ್ತಿಲ್ಲ ಎಂದು ದೂರುತ್ತಾರೆ. ರಸ್ತೆಗಳ ದುರಸ್ತಿ ಬಗ್ಗೆ ಅನೇಕ ವೇಳೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸುತ್ತಾರೆ.
Kalyanasiri Kannada News Live 24×7 | News Karnataka
