Gudekote; K. Raipur road washed away by rain
ಗುಡೇಕೋಟೆ: ರಾತ್ರಿ ಪೂರಾ ಸುರಿದ ಭಾರಿ ಮಳೆಗೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಕೆ.ರಾಯಪುರ ಗ್ರಾಮದಿಂದ ಅಪ್ಪಯ್ಯನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದೆ.
ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಪ್ರಯಾಣಿಕರು ಪ್ರಯಾಣ ಮಾಡಲು ಪರದಾಡುವಂತಾಗಿದೆ.
ಕೆ.ರಾಯಪುರ ಗ್ರಾಮದಿಂದ ಅಪ್ಪಯ್ಯನಹಳ್ಳಿ ಗುಡೇಕೋಟೆಗೆ ಹೋಗಲು ಇದೇ ರಸ್ತೆ ಮೂಲಕವೇ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿದ್ದವು.
ಇದೀಗ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದರಿಂದ ಏನು ಮಾಡಬೇಕು ಎಂಬುದು ಪ್ರಯಾಣಿಕರಿಗೆ ತಿಳಿಯದಂತಾಗಿದೆ.
ಈ ರಸ್ತೆಯ ಕಿತ್ತುಹೋಗಿದೆ. ಡಾಂಬರು ಕೂಡ ಇಲ್ಲ. ಸಂಪೂರ್ಣವಾಗಿ ಕಂಕರ್‌ಗಳು ತೇಲಿವೆ. ಲೋಕೋಪಯೋಗಿ ಇಲಾಖೆ ದುರಸ್ಥಿ ಮಾಡಲು ಕೂಡಲೇ ಮುಂದಾಗಬೇಕಿದೆ. ಅಂದರೆ ಮಾತ್ರ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ನಿಷ್ಕಾಳಜಿತನ ಮಾಡಿದರೆ ಇನ್ನು ಸಮಸ್ಯೆ ಹೆಚ್ಚು ಆಗಲಿದೆ.
ಗುಣಮಟ್ಟದ ಕಾಮಗಾರಿ ಮಾಡಿದರೆ ಮಾತ್ರ ಇಂತಹ ರಸ್ತೆ ಬಹಳಷ್ಟು ದಿನಗಳ ಕಾಲ ಬಾಳಿಕೆ ಬರಲಿದೆ. ಆದರೆ ಸರಿಯಾಗಿ ಮಾಡದಿದ್ದರೆ ಮಳೆಗೆ ಹೋಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬುದಕ್ಕೆ ಈ ರಸ್ತೆಯೇ ಸಾಕ್ಷಿಯಾಗಿದೆ.
ಗ್ರಾಮೀಣ ಪ್ರದೇಶದ ಜನತೆ ಆರಾಮವಾಗಿ ಓಡಾಡಲಿ ಎನ್ನುವ ಕಾರಣಕ್ಕಾಗಿ ರಾಜ್ಯ ಸರಕಾರ ಸಾಕಷ್ಟು ಅನುದಾನ ರಸ್ತೆ ನಿರ್ಮಾಣಕ್ಕೆ ನೀಡಲಾಗುತ್ತಿದೆ. ಈ ಕೂಡಲೇ ಅಧಿಕಾರಿಗಳು ನಿಷ್ಕಾಳಜಿತನ ಮಾಡದೆ ಕೂಡಲೇ ರಸ್ತೆ ದುರಸ್ಥಿ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಪ್ರಯಾಣಿಕರಾದ ಕೆ.ರಾಯಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.