Foundation stone of four-lane road construction work
*ಕ ಕ ಖಾಲಿ ಹುದ್ದೆಗಳ ಭರ್ತಿಗೆ ಘೋಷಣೆ,
ಮೊಟ್ಟ ಮೊದಲ ಬಾರಿಗೆ ಸಿಂಧನೂರಿನಲ್ಲಿ ಕಲ್ಯಾಣ ದಸರಾ ಉತ್ಸವ ಉದ್ಘಾಟಿಸಿದ – ಸಿ ಎಂ
ಸಿಂಧನೂರು: ಸೆ 5 ಮೊಟ್ಟ ಮೊದಲ ಬಾರಿಗೆ ಆರಂಭಿಸಲಾದ ವೈಭವದ ಸಿಂಧನೂರು ದಸರಾ ಉತ್ಸವವನ್ನು ಸನ್ಮಾನ್ಯಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ,ಸಿಂಧನೂರು ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ದಂದು ಕರ್ನಾಟಕ ಸರ್ಕಾರದ ಸನ್ಮಾನ್ಯ
ಮುಖಮಂತ್ರಿಗಳಿಂದ ಅವರಿಂದ ಮುಖ್ಯವೇದಿಕೆಯಲ್ಲಿ 1695.85 ಕೋಟಿ ವೆಚ್ಚದ ರಾಯಚೂರು ಕಲ್ಮಲಾ ಜಂಕ್ಷನ್ ನಿಂದ ಸಿಂಧನೂರು ಬಳಿ ಬಳ್ಳಾರಿ- ಲಿಂಗಸಗೂರು ರಸ್ತೆ ವರೆಗಿನ 78.45 ಕಿಮೀ ಉದ್ದದ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ದಸರಾ ಅಂಗವಾಗಿ ಅನುಚ್ಛೇದ 371 (ಜೆ) ದಶಮಾನೋತ್ಸವದ ಮೆಲುಕು
371 ಜೆ ಜಾರಿಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಾತಿ, ಧರ್ಮದ ಮಂದಿ ಒಟ್ಟಾಗಿ ಹೋರಾಟ ನಡೆಸಿದರು. ಈ ಜನ ಹೋರಾಟದ ಬೆನ್ನಿಗೆ ನಿಂತು ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿ ಮಾಡಿಸಿದರು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371 ಜೆ ಜಾರಿಗೆ ಆಗ್ರಹಿಸಿ ಹೋರಾಟ ಸಂಘಟಿಸಿದ ಎಲ್ಲಾ ಜಾತಿ, ಧರ್ಮಗಳ ಹಿರಿಯ ಹೋರಾಟಗಾರರನ್ನು ಇದೇ ದಸರಾ ವೇದಿಕೆಯಲ್ಲಿ ಸನ್ಮಾನಿಸಿದ ಬಳಿಕ 371 ಜೆ ಸೃಷ್ಟಿಸಿದ ಅವಕಾಶದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದುಕೊಂಡ ಸಿಂಧನೂರಿನ 10 ಮಂದಿಯನ್ನು ಸನ್ಮಾನಿಸಲಾಯಿತು.
ಮತೆ ಇದೆಂಗಾಯ್ತು ಹೇಳ್ರಪಾ: BJP ಗೆ ಸಿಎಂ ವ್ಯಂಗ್ಯ
ಗ್ಯಾರಂಟಿಗಳಿಂದಾಗಿ ಬೇರೆ ಅಭಿವೃದ್ಧಿಗೆ ಹಣ ಇಲ್ಲ, ಹಣ ಇಲ್ಲ ಅಂತ BJP ಅಪಪ್ರಚಾರ ಮಾಡ್ತಿದಾರಲ್ಲಾ ಹಾಗಿದ್ರೆ ಈಗ ಉದ್ಘಾಟಿಸಿದ 1695 ಕೋಟಿ ಹಣ ಎಲ್ಲಿಂದ ಬಂತು? ಒಂದೇ ವಿಶೇಷ ಕ್ಯಾಬಿನೆಟ್ ನಲ್ಲಿ 11770 ಕೋಟಿ ಕಾಮಗಾರಿಗೆ ಅನುಮೋದನೆ ಕೊಟ್ವಲ್ಲಾ, ಇದೆಲ್ಲಾ ಹೇಗಾಯ್ತು ಹೇಳ್ರಪಾ ಎಂದು ವ್ಯಂಗ್ಯವಾಗಿ BJP ಯನ್ನು ಪ್ರಶ್ನಿಸಿದರು.
ತಹಶಿಲ್ದಾರ ಕಛೇರಿ ಯಿಂದ ಪ್ರಾರಂಭವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಳಗೊಂಡ ಮೆರವಣಿಗೆ ಯಲ್ಲಿ ರಾಜ್ಯ ,ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಕಲಾ ತಂಡಗಳು ಡೊಳ್ಳು ಕುಣಿತ,ವೀರಗಾಸೆ,ಹಗಲು ವೇಷ,ಬೆದರು ಗೊಂಬೆ,ಚರ್ಮ ವಾದ್ಯ, ಬ್ಯಾಂಡ್ ಸೆಟ್ ಭಾಗವಹಿಸಿದ್ದವು.
ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಬೋಸರಾಜು ಸೇರಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮುಖಂಡರುಗಳು ಉಪಸ್ಥಿತರಿದ್ದರು.