Petition by the Chief Executive Officer of Texocon Company on behalf of the Public Interest Committee




ರಾಯಚೂರು :ತಾಲೂಕಿನ ಚಿಕ್ಕಸುಗೂರು ಕೈಗಾರಿಕಾ ಕೇಂದ್ರದಲ್ಲಿ ಬರುವ ಕೆಲವು ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವ ಕುರಿತು ಇಂದು
ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಟೆಕ್ಸೋಕಾನ್ ಕಂಪನಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು ರಾಯಚೂರು ಗೋಥ್ ಸೆಂಟರ ನಲ್ಲಿ ಕೈಗಾರಿಕಾ ಕಾರ್ಖಾನೆಗಳನ್ನು ಸ್ಥಾಪಿಸಲು ನಮ್ಮ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ.
ಕೈಗಾರಿಕಾ ಕಾರ್ಖಾನೆಗಳ ಪ್ರಾರಂಭದಿಂದಾಗಿ ಅನ್ಯ ರಾಜ್ಯಗಳ ಹಲವಾರು ಜನ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನೀಡಿದ್ದು ಇರುತ್ತದೆ. ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಜಮೀನುಗಳನ್ನು ಕಳೆದುಕೊಂಡ ಭೂ-ಸಂತ್ರಸ್ಥರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ನೀಡದೇ ಸ್ಥಳೀಯರನ್ನು ವಂಚಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಆದ್ದರಿಂದ ಈ ಕೆಳಗಿನ ಕಾನೂನು ಭದ್ಧ ಬೇಡಿಕೆಗಳನ್ನು 10 ದಿನಗಳ ಒಳಗಾಗಿ ಈಡೇರಿಸಬೇಕೆಂದು ಕೆಲವೊಂದು ಬೇಡಿಕೆ ಇಟ್ಟರು
ಸಂದರ್ಶನ ಮಾಡಿದ ಇನ್ನುಳಿದ ಹಳೆಯ ಕಾರ್ಮಿಕರಿಗೆ ನೇಮಕಾತಿ ಆದೇಶವನ್ನು ನೀಡುವುದು.
ಭೂ-ಸಂತ್ರಸ್ಥ ಕುಟುಂಬದ ತಲಾ ಇಬ್ಬರಿಗೆ ಖಾಯಂ ಉದ್ಯೋಗ ನೀಡಬೇಕು.
ರೈತರ ಜಮೀನುಗಳ ಬೆಳೆಗಳ ಮೇಲೆ ಬೀಳುತ್ತಿರುವ ಕಪ್ಪು ಹಾರು-ಬೂದಿಯನ್ನು ತಡೆಗಟ್ಟಿ ಬೆಳೆಗಳ ನಷ್ಟ ಪರಿಹಾರವನ್ನು ನೀಡಬೇಕು. ಸುತ್ತಮುತ್ತಲಿನ ಗ್ರಾಮಗಳ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನೀಡಬೇಕು.
ಸ್ಥಳೀಯ ಗುತ್ತಿಗೆದಾರರಿಗೆ ಅನುಭವಕ್ಕೆ ಅನುಗುಣವಾಗಿ ಕೆಲಸದ ಗುತ್ತಿಗೆಗಳನ್ನು ನೀಡಬೇಕು.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಕಾರ್ಖಾನೆಯ ಮುಖ್ಯ ದ್ವಾರದ ಮುಂದೆ ಧರಣಿ ಮಾಡಲಾಗುವುದೆಂದು ಹೇಳಿದರು
ಈ ಸಂದರ್ಭದಲ್ಲಿ ಶರಣುಗೌಡ ಸುಗುರೆಡ್ಡಿ ರಾಮನಗೌಡ ಎಗನೂರ್ ಶರಣಪ್ಪ ನಾಮಲಿ ಮಾಂಗೇಶ್ ರಾಮಕೃಷ್ಣ ಶಿವಶರಣ ಗೌಡ ಎಚ್ ಸುಗನಗೌಡ ಮುಂತಾದವರು ಪಾಲ್ಗೊಂಡು