Breaking News

ಅ.5ರಂದುಮುಖ್ಯಮಂತ್ರಿಗಳಿಂದ ಬಹು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ:ಎನ್.ಎಸ್.ಬೋಸರಾಜು

Foundation stone laying for multi-crore development works by Chief Minister on 5th: NS Bosaraju

ಜಾಹೀರಾತು
IMG 20241004 WA0034

ಮಾನ್ವಿ: ಪಟ್ಟಣದ ಭಾರತ ಜೋಡೊ ಭವನದಲ್ಲಿ ಸುದ್ದಿಗಾರರೊಂದಿಗೆ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮಾತನಾಡಿ ನಿಷ್ಕಳಂಕ,ಪ್ರಮಾಣಿಕವಾಗಿ ಜಾತಿ. ಧರ್ಮಗಳನ್ನು ಮೀರಿ ಜನಪರವಾದ ಉತ್ತಮ ಆಡಳಿತವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ ರಾಜ್ಯಕ್ಕೆ ಜನಪ್ರಿಯವಾದ ಹಿಂದುಳಿದವರ, ಬಡವರ .ಅಲ್ಪ ಸಂಖ್ಯಾತರ ಅಭಿವೃದ್ದಿಗಾಗಿ 15 ಜನಪ್ರಿಯವಾದ ಎಲ್ಲಾ ವರ್ಗಗಳಿಗೆ ಉತ್ತಮವಾದ ಬಜೇಟ್ ನೀಡಿದ್ದಾರೆ ರಾಜ್ಯದ ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಭಾಗದ ಶೈಕ್ಷಣಿಕ ಯೋಜನೆಗಳಿಗೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಮಂಡಳಿಗೆ ಈ ಭಾಗದ ಅಭಿವೃದ್ದಿಗಾಗಿ 5 ಸಾವಿರ ಕೋಟಿ ಅನುದಾನವನ್ನು ನೀಡಿದ್ದಾರೆ. ಈ ಭಾಗದಲ್ಲಿನ ರೈತರ ನೀರಾವರಿ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿದ್ದು ಶಾಶ್ವತ ಪರಿಹಾರಕ್ಕೆ ಬರವಸೆ ನೀಡಿದ್ದಾರೆ. ಒಳಮೀಸಲಾತಿ ಜಾರಿಗೆ ರಾಜ್ಯ ಕ್ಯಾಬಿನೇಟ್ ನಲ್ಲಿ ಚರ್ಚೆ ಮಾಡಿದ್ದು ಜಾರಿ ಮಾಡುವ ಕುರಿತು ಸಾಧಕ ಬಾದಕಗಳನ್ನು ಪರಿಶೀಲಿಸಿ ನ್ಯಾಯಾಲಯದ ತೀರ್ಪಿನ ಪ್ರಕಾರವೇ ಜಾರಿಗೆ ತರುವುದಕ್ಕೆ ಕ್ರಮ ಕೈಗೊಳ್ಳಲಾಗುವುದಾಗಿ ಬರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳಿಗೆ ಬೆಂಬಲವಾಗಿ ಪಟ್ಟಣದಲ್ಲಿ ಬೃಹತ್ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು . ಪ್ರಥಮವಾಗಿ ಮಾನ್ವಿ ಪಟ್ಟಣಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳನ್ನು ಪಟ್ಟಣದಲ್ಲಿ ಭವ್ಯವಾಗಿ ಸ್ವಾಗತಿಸಲಾಗುವುದು ವೇದಿಕೆಯಲ್ಲಿ ಮುಖ್ಯ ಮಂತ್ರಿಗಳು ರಾಜಕೀಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ.
ತಾಲೂಕಿಗೆ ಆಗಮಿಸುವ ಮುಖ್ಯಮಂತ್ರಿಗಳಿಗೆ ತಾಲೂಕು ಬ್ಲಾಕ್ ಕಾಂಗ್ರೇಸ್ ಹಾಗೂ ಜನತೆಯ ಪರವಾಗಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಇಂದಿನ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳಿಗೆ ನೈತಿಕವಾದ ಬೆಂಬಲವನ್ನು ನಾವೇಲ್ಲರು ನೀಡುವ ಅವಶ್ಯಕತೆ ಇರುವುದರಿಂದ ಮಾನ್ವಿ ಮತ್ತು ಸಿರವಾರ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ.5 ರಂದು ಬೆ.11 ಕ್ಕೆ ರಾಯಚೂರು ರಸ್ತೆಯಲ್ಲಿನ ಭಾವ್ಯ ವೇದಿಕೆಯಲ್ಲಿ ಮಾನ್ವಿ ತಾಲೂಕಿನಲ್ಲಿ ಬಹುಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮಾನ್ವಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಲ್ಮಲ ದಿಂದ ಸಿಂಧನೂರು ವರೆಗಿನ 1686 ಕೋಟಿ ವೆಚ್ಚದ ಚತುಷ್ಪದ ರಸ್ತೆ ಕಾಮಗಾರಿ, ಮಾನ್ವಿ ಪಟ್ಟಣದಲ್ಲಿ ಕೆ.ಕೆ.ಅರ್.ಡಿ.ಬಿ. ಹಾಗೂ ಎನ್.ಕೆ.ಆರ್.ಟಿ.ಸಿ ವತಿಯಿಂದ 9.5 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ,ಮಾನ್ವಿ ಮತ್ತು ಸಿರವಾರ ತಾಲೂಕಿನ ಅಯುಷ್ಮನ್ ಇಲಾಖೆಯ ವಿವಿಧ ಕಟ್ಟಡಗಳ ಕಾಮಗಾರಿ ಅಂದಾಜು 4.5 ಕೋಟಿ ,ಕೈಗಾರಿಕ ತರಬೇತಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ 3.5 ಕೋಟಿ, ಗೃಹ ನಿರ್ಮಾಣ ಮಂಡಳಿ ವತಿಯಿಂದ ನಿರ್ಮಾಣವಾಗುವ ಮಾನ್ವಿ ಪಟ್ಟಣದ ಮಿನಿ ವಿಧಾನಸೌಧ 15 ಕೋಟಿ, ಕೆ.ಕೆ.ಅರ್.ಡಿ.ಬಿ.ಯಿಂದ ನಿರ್ಮಾಣವಾಗಲಿರುವ ಸಿರವಾರ ತಾಲೂಕಿನ ಮಿನಿ ವಿಧಾನಸೌಧ ಸೇರಿ ಇತರೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಅಂದಾಜು 1ಕೋಟಿ ವೆಚ್ಚದಲ್ಲಿ ನಿರ್ಮಾಣ ಪೂರ್ಣವಾಗಿರುವ ಮಾನ್ವಿ ತಾಲೂಕು ಪಂಚಾಯಿತಿ ನೂತನ ಕಟ್ಟಡ, ಹಾಗೂ ಪೂರ್ಣವಾಗಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಸೇರಿದಂತೆ ಇತರೆ ನೂತನ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ.
ನಮ್ಮ ಸಣ್ಣ ನೀರಾವರಿ ಇಲಾಖೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 5 ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಎಲ್ಲಾ ಕಾಮಗಾರಿಗಳು ಕೂಡ ಟೆಂಡರ್ ಹಂತದಲ್ಲಿ ಇವೆ ತಾಲೂಕಿನಲ್ಲಿ ಕುರ್ಡಿ ಗ್ರಾಮದ ಕೆರ ಅಭಿವೃದ್ದಿಗಾಗಿ 132 ಕೋಟಿ, ಚೀಕಲಪರ್ವಿ ಗ್ರಾಮದಲ್ಲಿನ ತುಂಗಭದ್ರ ನದಿಗೆ ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣಕ್ಕೆ ಅಂದಾಜು 396 ಕೋಟಿ, ಸಚಿವ ಡಾ.ಶರಣಪ್ರಕಾಶ ಪಾಟೀಲ್ ರವರ ಕ್ಷೇತ್ರದಲ್ಲಿ 3 ಕೆರೆಗಳ ಅಭಿವೃದ್ದಿ ಕೈಗೊಳ್ಳಲಾಗಿದೆ. ತಾಲೂಕಿನ ವಿವಿಧ ಚೆಕ್ ಡ್ಯಾಂಗಳ .ಕೆರೆಗಳ ನಿರ್ಮಾಣಕ್ಕೆ ಅಂದಾಜು 30 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳ್ಳಿಸಲಾಗುವುದು .
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.ರಾಜ್ಯದ ಸಚಿವರಾದ ಹೆಚ್.ಸಿ. ಮಹಾದೇವಪ್ಪ, ಹೆಚ್.ಕೆ.ಮುನಿಯಪ್ಪ,ಡಾ.ಶರಣಪ್ರಕಾಶ ಪಾಟೀಲ್, ಶಿವರಾಜ ತಂಗಡಗಿ,ರೆಹಮಾನ್ ಖಾನ್,ಸತೀಶ್ ಜಾರಕಿಹೊಳ್ಳಿ ಸೇರಿದಂತೆ ವಿವಿಧ ಸಚಿವರು ಪಕ್ಷದ ಹಿರಿಯ ನಾಯಕರು,ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕುರುಬರ ಸಂಘದ ರಾಜ್ಯ ಅಧ್ಯಕ್ಷರಾದ ಎಂ.ಈರಣ್ಣ, ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು, ಕೆ.ಶಾಂತಪ್ಪ, ಶಿವಮೂರ್ತಿ , ಬಾಲಸ್ವಾಮಿ ಕೋಡ್ಲಿ,ಮುರಾರಿ, ರಾಮಣ್ಣ ಈರಬಗೇರಿ, ಅಮರೇಗೌಡ ಹಂಚಿನಾಳ, ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.