Civil Judge Rangaswamy visits Balageri Home for mentally retarded children
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಕೇರಿಯ ಬಡ ಕುಟುಂಬದ ಹನುಮಪ್ಪ ಹನುಮವ್ವ ದಂಪತಿಯ ಮೂವರು ಮಕ್ಕಳು ಬುದ್ದಿ ಮಾಂಧ್ಯರಾಗಿದ್ದು ಈ ವಿಷಯವನ್ನರಿತ ಯಲಬುರ್ಗಾ ಸಿವಿಲ್ ನ್ಯಾಯಾಧೀಶ ಜೆ. ರಂಗಸ್ವಾಮಿ ಅವರು ಗುರುವಾರ ಬಳಗೇರಿ ಗ್ರಾಮದ ಹನುಮಪ್ಪ ಇವರ ನಿವಾಸಕ್ಕೆ ಭೇಟಿ ನೀಡಿ ಮಕ್ಕಳನ್ನು ವಿಕ್ಷೀಸಿದರು.
ಈ ಕುರಿತು ಕುಟುಂಬದ ಹನುಮಪ್ಪ ಅವರೊಂದಿಗೆ ಮಾಹಿತಿ ಪಡೆದರು. ನಂತರ ಹನುಮಪ್ಪ ಮಾತನಾಡಿ ನಮ್ಮ ಮಕ್ಕಳು ಹುಟ್ಟಿದ ಆರು ವರ್ಷದಿಂದ ಬುದ್ದಿ ಮಾಂಧ್ಯತೆ ಹೊಂದಿದ್ದು, ಪ್ರತಿ ನಿತ್ಯ ಇವರ ಸೇವೆಯೇ ನಮ್ಮ ದಿನ ನಿತ್ಯದ ಕಾಯಕವಾಗಿದೆ ಎಂದು ತಿಳಿಸಿದರು.
ನಮಗೆ ಸರಕಾರದವರು ನೀಡಿದ ಆಶ್ರಯ ಯೋಜನೆ ಮನೆಯನ್ನು ಬಿಟ್ಟು ಬೇರೆ ಯಾವುದೇ ಜಮೀನು ಆಸ್ತಿಯಾವುದು ಇಲ್ಲ, ಇವರು ಮೂರು ಜನರ ಮಾಶಾಸನದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ.
ನಾವು ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದು ದುಡಿದ ಹಣದಲ್ಲಿ ಕೊಪ್ಪಳ, ಬಾಗಲಕೋಟೆ ವಿವಿಧೆಡೆ ಆಸ್ಪತ್ರೆಗಳಲ್ಲಿ ತೋರಿಸಿದರು ಪ್ರಯೋಜನವಾಗಿಲ್ಲಾ ಎಂದು ಅಳಲನ್ನು ತೋಡಿಕೊಂಡರು.
ಮಕ್ಕಳು ಈ ರೀತಿ ಬುದ್ದಿ ಮಾಂಧ್ಯತೆ ಹೊಂದಿದ್ದು ಹಿರಿಯ ಮಗ 18 ವರ್ಷ, ಎರಡನೇಯವನು 16ವರ್ಷ, ಮೂರನೇ ಮಗಳು 15 ವರ್ಷದವರಾಗಿದ್ದು ಇಲ್ಲಿಯವರೆಗೆ ಅವರ ಪ್ರತಿಯೊಂದು ಕೆಲಸವು ಅವರ ತಾಯಿ ಇಲ್ಲವೇ ನಾನು ಮಾಡಬೇಕಾಗಿದೆ ಇವರು ಸರಿ ಹೋಗಲು ಹೆಚ್ಚಿನ ಚಿಕಿತ್ಸೆ ಒದಗಿಸಲು ಹಣವಿಲ್ಲದೇ ಪರದಾಡಬೇಕಾಗಿದೆ ಎಂದರು.
ನಂತರ ಕುಟುಂಬದವರೊಂದಿಗೆ ನ್ಯಾಯಾಧೀಶರು ಮಾತನಾಡಿ ಈ ಮಕ್ಕಳ ಹೆಚ್ಚಿನ ಚಿಕಿತ್ಸೆಗಾಗಿ ಡಿಎಚ್ಒ ಅವರಿಂದ ವರದಿ ತರಿಸಿ ಅದನ್ನು ನೀಡಿ ಬೆಂಗಳೂರು ಇಲ್ಲವೇ ಧಾರವಾಡ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುವವರೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಹಕರಿಸುವುದಾಗಿ ತಿಳಿಸಿದರು. ಜೊತೆಗೆ ತಮ್ಮ ವಯಕ್ತಿಕ ಆರ್ಥಿಕ ನೆರವು ನೀಡಿದರು ಎಂದು ತಿಳಿದು ಬಂದಿತು.
ಈ ಸಂದರ್ಭದಲ್ಲಿ ಲೋಕೇಶ ಶಿರಸ್ತೆದಾರರು, ಬಳಗೇರಿ ಗ್ರಾಮ ಸಹಾಯಕರು, ಎಎಸ್ಐ ನಿಂಗಮ್ಮ, ಪೋಲಿಸ್ ಪೇದೆ ಮಾರುತಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ, ಅಧ್ಯಕ್ಷರು, ಸದಸ್ಯರು, ವಾಲಿಕಾರ ಸೇರಿದಂತೆ ಪ್ರಮುಖರು ಇದ್ದರು.