Breaking News

ಬನ್ನಿಕೊಪ್ಪ : 36ನೇ ವರ್ಷದ ಶ್ರೀದೇವಿ ಪುರಾಣಪ್ರಾರಂಭೋತ್ಸವ,

Bannikoppa: 36th year of Sridevi Purana Samutsav,

ಜಾಹೀರಾತು
IMG 20241004 WA0325



ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಬನ್ನಿಕೊಪ್ಪ ಗ್ರಾಮದ ಹಿರೇಸಿಂದೋಗಿ ಚನ್ನಬಸವೇಶ್ವರ ಕಪ್ಪತ್ತಮಠದ ಶಾಖಾ ಮಠದಲ್ಲಿ ದಿ. 03ರ ಗುರುವಾರದಿಂದ ಶರನ್ನವರಾತ್ರಿ ಅಂಗವಾಗಿ ಶ್ರೀದೇವಿ ಪುರಾಣ ಕಾರ್ಯಕ್ರಮಗಳು ಪ್ರಾರಂಭಗೊಂಡವು.

ದಿ.03-10-2024 ಗುರುವಾರ ದಿಂದ ದಿ. 12-10-2024 ಶನಿವಾರ ವಿಜಯದಶಮಿಯವರೆಗೆ ಬೆಳಗಿನ 7-30 ಕ್ಕೆ ಶ್ರೀ ಆದಿಶಕ್ತಿ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುತ್ತೈದೆಯರೊಂದಿಗೆ ಸಕಲ ವಾದ್ಯ ಮೇಳ ವೈಭವಗಳೊಂದಿಗೆ ಉತ್ಸವವು ನೆರವೇರುವುದು. ಮಧ್ಯಾಹ್ನ 12ಗಂಟೆಗೆ ಮಹಾಪ್ರಸಾದ ಜರುಗುವುದು. ಸಾಯಂಕಾಲ 7 ಗಂಟೆಗೆ ಪುರಾಣ ಪ್ರಾರಂಭಗೊಳ್ಳುವುದು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಬನ್ನಿಕೊಪ್ಪ ಚನ್ನಬಸವೇಶ್ವರ ಕಪ್ಪತ್ತಮಠದ ಚಿದಾನಂದ ಸ್ವಾಮಿಗಳು, ಮುಂಡರಗಿ ಅನ್ನದಾನೀಶ್ವರ ಮಹಾಸ್ವಾಮಿಗಳು, ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಬಳಗಾನೂರು ಶಿವಶಾಂತವೀರ ಶರಣರು ವಹಿಸಿದ್ದರು.

ಪುರಾಣ ಪ್ರವಚನಕಾರರು ಗಾನಯೋಗಿ ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಕರಬಸಯ್ಯ ಶಾಸ್ತ್ರಿಗಳು, ಪಠಣಕಾರರು ಕಲ್ಲಪ್ಪ ಚನ್ನಪ್ಪ ಹಳ್ಳಿಕೇರಿ ನಡೆಸಿಕೊಡುವರು.

ಸಂಗೀತ ಸೇವೆ ಶರೀಫಸಾಬ ಯಲಿಗಾರ, ತಬಲಾ ಸಾಥ್ ಬ್ಯಾಡಗಿ ಗಜಾನಂದ ಎಂ. ಹೂಗಾರ, ಶ್ರೀ ಆದಿಶಕ್ತಿ ಪೂಜಾ ಸೇವೆಯನ್ನು ದೇವಪ್ಪ ಗುಡ್ಲಾನೂರ ನಡೆಸಿಕೊಡುವರು.

ಮಹಾನವಮಿಯ ಪ್ರತಿನಿತ್ಯದ ಕಾರ್ಯಕ್ರಮಗಳಲ್ಲಿ ಪ್ರಸಾದ ಸೇವೆಯನ್ನು ಪ್ರತಿ ದಿನಕ್ಕೊಬ್ಬರಂತೆ ಬಸವಣ್ಣೆಪ್ಪ ಈಶ್ವರಪ್ಪ ಹಳ್ಳಿಕೇರಿ, ನಾಗಮ್ಮ ನಿಜಲಿಂಗಪ್ಪ ಯರಾಶಿ, ಬಸವರಾಜ ಬಸಪ್ಪ ಬ್ಯಾಳಿ, ಚನ್ನಬಸಮ್ಮ ಚನ್ನಪ್ಪ ಗುಡ್ಲಾನೂರ, ಮಲ್ಲಮ್ಮ ವಿರುಪಾಕ್ಷಪ್ಪ ಗೊಂದಿ, ಬಸವಂತಪ್ಪ ಕೊಟ್ರಬಸಪ್ಪ ಮೈನಳ್ಳಿ, ಶರಣಪ್ಪ ವಿರುಪಾಕ್ಷಪ್ಪ ದೇವರ, ಮಲ್ಲಿಕಾರ್ಜುನ ಗವಿಸಿದ್ದಪ್ಪ ಓಜನಹಳ್ಳಿ, ಮೈಲಾರಪ್ಪ ನಿಂಗಪ್ಪ ಕರಮುಡಿ, ವಿಜಯಕುಮಾರ ಲಿಂಗಬಸಪ್ಪ ಯರಾಶಿ ಇವರೆಲ್ಲ ಮಹನೀಯರು ಪುರಾಣ ಸೇವೆಯಲ್ಲಿ ಪಾಲ್ಗೋಳ್ಳುವರು ಹಾಗೂ ಗ್ರಾಮದ ಸಮಸ್ತ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವರು ಎಂದು ಗ್ರಾಮದ ನಾರಾಯಣ ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.