At Doddalathur Village in Hanur Taluk Excavation of 2000 year old tombs started from Mysore University.

ವರದಿ : ಬಂಗಾರಪ್ಪ ಸಿ.
ಹನೂರು :ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಬ್ಬಿಣ ಯುಗದ ಸಮಾಧಿಗಳಿದ್ದು 2000-2500 ವರ್ಷಗಳಾದ್ದಾಗಿದೆ. ಸ್ಥಳೀಯಯವಾಗಿ ಇದನ್ನು ಪಾಂಡವರ ಮನೆ ಎಂದು ಕರೆಯಲಾಗುತ್ತಿದ್ದು,
ಬಂಡೆಕಲ್ಲಗಳನ್ನು ಸುತ್ತಲೂ ಜೋಡಿಸಿ ಮಧ್ಯದಲ್ಲಿ ಕಲ್ಲಿನ ರಾಶಿಗಳನ್ನು ಗುಪ್ಪೆ ಥರಾ ಮಾಡಲಾಗಿದೆ. ಇಂದಿನಿಂದ ಈ ಸಮಾಧಿಗಳ ಉತ್ಖನನ ಕಾರ್ಯ ಆರಂಭಗೊಂಡಿದೆ.
ಸಂಶೋಧನೆಯಲ್ಲಿ
ಮೈವಿವಿಯ ಪ್ರಾಚೀನ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ ಶೋಭಾ ನೇತೃತ್ವದಲ್ಲಿ 20 ಕ್ಕೂ ಅಧಿಕ ಸಂಶೋಧಕರು, ವಿದ್ಯಾರ್ಥಿಗಳು ಈ ಉತ್ಖನನ ಕಾರ್ಯದಲ್ಲಿ ತೊಡಗಿದ್ದಾರೆ.
1961 ರಲ್ಲಿ ಭಾರತೀಯ ಪುರಾತತ್ತ್ವ ಇಲಾಖೆ ವತಿಯಿಂದ ಈ ಸಮಾಧಿಗಳನ್ನು ಕೃಷ್ಣಮೂರ್ತಿ ಎಂಬವರು ಗುರುತು ಮಾಡಿದ್ದರು. ಆದಾದ ಬಳಿಕ ಸಂಶೋಧನಾ ಕಾರ್ಯ ನಡೆದಿರಲಿಲ್ಲ. ಈಗ , ಉತ್ಖನನ ಆರಂಭಿಸಿದ್ದು ಕಬ್ಬಿಣ ಯುಗದ ಜನರ ನಂಬಿಕೆ ಏನಾಗಿತ್ತು, ಸಮಾಧಿಯಲ್ಲಿ ಅವರು ಯಾವ ವಸ್ತುಗಳನ್ನು ಇಡುತ್ತಿದ್ದರು, ಅವರ ದೃಷ್ಟಿಯಲ್ಲಿ ಸಮಾಧಿ ಅಂದರೆ ಏನಾಗಿತ್ತು, ಸಮಾಧಿ ಒಳಗಡೆ ಎಷ್ಟೆಲ್ಲಾ ವಸ್ತುಗಳನ್ನು ಇಡುತ್ತಿದ್ದರು ಎಂಬ ವಿಚಾರ ಈ ಉತ್ಖನನದಲ್ಲಿ ತಿಳಿಯುವ ನಿರೀಕ್ಷೆ ಇದೆ ಎನ್ನಲಾಗಿದೆ.