Anjali Belgal selected for Mysore Dussehra Poetry Festival
ಜಾಹೀರಾತು
ಹೊಸಪೇಟೆ: ಇಲ್ಲಿನ ಅಂಗನವಾಡಿ ಕೇಂದ್ರದ ಶಿಕ್ಷಕಿ, ಬಂದೂಕು ಹಿಡಿದ ಕೈಗಳು ಕೃತಿಯ ಖ್ಯಾತ ಲೇಖಕಿ, ಕವಯಿತ್ರಿ ಅಂಜಲಿ ಬೆಳಗಲ್ ಅವರು ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಲು ಆಯ್ಕೆಯಾಗಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಪಂಚ ಕಾವ್ಯೋತ್ಸವ ಕವಿಗೋಷ್ಠಿಗೆ ಅಂಜಲಿ ಬೆಳಗಲ್ ಆಯ್ಕೆಯಾಗಿದ್ದು ಕನ್ನಡ ಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಪ್ರೇಮಿಗಳು ಅಭಿನಂದನೆ ವ್ಯಕ್ತಪಡಿಸಿದ್ದಾರೆ. ನಾಡಿನ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ಪಂಚ ಕಾವ್ಯೊತ್ಸವದ ಕವಿಗೋಷ್ಠಿಗೆ ವಿಜಯ ನಗರ ಜಿಲ್ಲೆಯ ಖ್ಯಾತ ಲೇಖಕಿ ಅಂಜಲಿ ಬೆಳಗಲ್ ಅವರು ಆಯ್ಕೆ ಆಗಿದ್ದಕ್ಕೆ ಮಹಿಳಾ ಕವಯಿತ್ರಿಯರಿಗೆ ಹಾಗೂ ಲೇಖಕಿಯರಿಗೆ ಪ್ರೇರಣೆ ನೀಡಿದಂತಾಗಿದೆ. ಮಹಿಳೆಯರಿಂದ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಉಳಿದು ಬೆಳೆಯಲು ಸಾಧ್ಯ. ಈ ದಿಸೆಯಲ್ಲಿ ಅಂಜಲಿ ಬೆಳಗಲ್ ಉತ್ತಮ ಲೇಖಕಿಯಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ಅವರು ದೆಹಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವಿಶ್ವ ಸಾಹಿತ್ಯ ಸಮ್ಮೇಳನದಲ್ಲಿ ಪಂಚ ಭಾಷೆಗಳಲ್ಲಿ ಸಾಹಿತ್ಯವನ್ನು ಬರೆದು ಬೇರೆ ಭಾಷೆಗೆ ಕನ್ನಡದ ಕಾವ್ಯವನ್ನು ಅನುವಾದಿಸಿದ್ದಾರೆ.
Related