Petition to Minister for fulfillment of various demands on behalf of Union of Private School Educational Institutions
ಮಾನ್ವಿ: ಪಟ್ಟಣದ ಈದ್ಗ ಫಂಕ್ಷನ್ ಹಾಲ್‌ನಲ್ಲಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ರವರಿಗೆ ತಾ.ಖಾ.ಶಾ.ಶಿ.ಸಂ. ಒಕ್ಕೂಟದ ತಾ.ಅಧ್ಯಕ್ಷರಾದ ಶರ್ಫುದಿನ್ನ್ ಪೋತ್ನಾಳ ರವರಿಗೆ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿ ನಂಜುಂಡಪ್ಪ ಅಯೋಗದ ವರದಿಯಂತೆ ಕನ್ನಡ ಮಾಧ್ಯಮದಲ್ಲಿನ ಎಲ್ಲಾ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು.ಶಾಲೆಗಳಿಗೆ ಬಿಲ್ಡಿಂಗ್ ಸೇಫ್ಟಿ ಹಾಗೂ ಫೈರ್ ಸೇಫ್ಟಿ ಪ್ರಮಾಣ ಪತ್ರಗಳು ಸರಳವಾಗಿ ಸಿಗುವಂತಾಗಬೇಕು, 30 ವರ್ಷದ ಹಳೆ ಶಾಲೆಗಳಿಗೆ ಭೂಪರಿವರ್ತನೆ ಹಾಗು ಒಪಂದ ಪತ್ರ ಅನ್ವಯಿಸದಂತೆ ಆದೇಶ ನೀಡಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಧಿಯಿಂದ ಖಾಸಗಿ ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತಸೌಲಭ್ಯಗಳಿಗಾಗಿ ಅನುದಾನ ನೀಡಬೇಕು. ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ವಿಮೆ ಸೌಲಭ್ಯ ಕಲ್ಪಿಸಬೇಕು. ಶಾಲಾ ಆಡಳಿತ ಮಂಡಳಿಯವರಿಗೆ ಹಾಗೂ ಸಿಬ್ಬಂದಿಗಳಿಗೆ ಭದ್ರತೆ ನೀಡಬೇಕು.ಆರ್.ಟಿ.ಇ.ಶುಲ್ಕವನ್ನು ಸಕಾಲದಲ್ಲಿ ಮರು ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ತಾ.ಕಾರ್ಯದರ್ಶಿ ರಾಜು ತಾಳಿಕೋಟೆ, ಕೇಶವರೆಡ್ಡಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ವರು ಸೇರಿದಂತೆ ಇನ್ನಿತರರು ಇದ್ದರು.