Corruption in Kottoor Town Panchayat: Demand for inquiry in Lokayukta
ಕೊಟ್ಟೂರು ಪಟ್ಟಣ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ವಿಳಂಬವಾಗಿದ್ದರಿಂದ ಸುಮಾರು ಒಂದೂವರೆ ವರ್ಷ ಕಾಲ ಜಿಲ್ಲಾಧಿಕಾರಿ ಮತ್ತು ಆಡಳಿತಾಧಿಕಾರಿಗಳ ಅವಧಿಯಲ್ಲಿ ಬ್ರಷ್ಟಾಚಾರ ಹೆಚ್ಚಾಗಿ ಕಂಡುಬಂದಿದ್ದು .ಹಾಗೂ ಈ ಹಿಂದೆ ಜಿಲ್ಲಾಧಿಕಾರಿ ವೆಂಕಟೇಶ್ ಇರುವಾಗ ಹೊಸದಾಗಿ 20 ಕ್ಕೂ ಹೇಚ್ಚು ಮಂದಿ ಸಿಬ್ಬಂದಿಗಳನ್ನು ನಿಯಮಬಾಹಿರವಾಗಿ ನೇಮಕ ಮಾಡಿಕೊಳ್ಳಲು ಒಬ್ಬ ವ್ಯಕ್ತಿಯಿಂದ ಲಕ್ಷ ಲಕ್ಷಗಟ್ಟಲೆ ಹಣ ಪಡೆದಿರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ ? ಈ ವಿಷಯದ ಬಗ್ಗೆ ಲೋಕಾಯುಕ್ತದಲ್ಲಿ ಸೂಕ್ತವಾಗಿ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಯಾರು ಬೇಕಾದರೂ ಅವರಿಗೆ ಇಷ್ಟವಾದ ಕೆಲಸ ನಿರ್ವಹಿಸಬಹುದು ನಾಳೆಯಿಂದ ಪೌರಕಾರ್ಮಿಕರು ಕಛೇರಿಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಲು ಯಾರಾ ಅಭ್ಯಂತರವೂ ಇಲ್ಲ ಮೇಲಧಿಕಾರಿಗಳು ಕಂಡರೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ.
ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಮತ್ತು ಪೌರಕಾರ್ಮಿಕರು ಬಗ್ಗೆ ಹಲವಾರು ಸಂಘಟನೆಗಳು ಮತ್ತು ಆರ್ ಟಿ ಐ ಕಾರ್ಯಕರ್ತರು ಮಾಹಿತಿ ಕೇಳಿದರೆ ಕೊಡದಂತೆ ರಾಜಕೀಯ ವರಿಂದ ನಿಯಂತ್ರಿಸುವುದು, ಬೆದರಿಸುವ ಕಾರ್ಯಗಳ ನಡೆದಿರುವುದು ಬೆಳಕಿಗೆ ಕಂಡು ಬಂದಿರುವುದಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ. ಅಂಜಿನಿ , ಅಜ್ಜಪ್ಪ,ಚಂದ್ರಶೇಖರ್ ,ಪ್ರವೀಣ್ ,ಕುಮಾರ್ ಆಗ್ರಹಿಸಿದ್ದಾರೆ.
“ಅಬಿಪ್ರಾಯ”
ವಾಚ್ ಮ್ಯಾನ್ ಕೆಲಸ ಮಾಡುವ ಸಿಬ್ಬಂದಿ
ಕಂಪ್ಯೂಟರ್ ಕೆಲಸ ಮಾಡುತ್ತಾರೆ. ಇಲ್ಲಿರುವ ಅಧಿಕಾರಿಗಳಿಗೆ ಅಡ್ಜಸ್ಟ್ಮೆಂಟ್ ಸಿಬ್ಬಂದಿಯನ್ನು ಅವರಿಗೆ ಬೇಕಾದ ಕೆಲಸಕ್ಕೆ ನೇಮಿಸಿ ಕೊಳ್ಳುತ್ತಾರೆ.ಎಂದು
ಕೊಟ್ಟೂರಿನ ಕೊಟ್ರೇಶ್ ಜೆ ಪಿ ನಗರ ನಿವಾಸಿ ಪತ್ರಿಕೆ ಹೇಳಿದರು.