Folk literature expresses the sufferings of the common people in the rural areas: Doddmani
ಮಾನ್ವಿ: ಪಟ್ಟಣದ ಲೊಯೋಲ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಾನಪದ ಹಾಡುಗಳ ಹಬ್ಬ ಕಾರ್ಯಕ್ರಮವನ್ನು ದಲಿತ ಕವಿ ಮತ್ತು ಜನಪದ ಗಾಯಕರಾದ ಜಾಕೋಬ ದೊಡ್ಡಮನಿ ಉದ್ಘಾಟಿಸಿ ಮಾತನಾಡಿ ಜನಪದ ಸಾಹಿತ್ಯ ಗ್ರಾಮೀಣ ಭಾಗದ ಜನಸಾಮಾನ್ಯರ ನೋವು ನಲ್ಲಿವುಗಳನ್ನು ವ್ಯಕ್ತಪಡಿಸುವ ಪ್ರಮುಖ ಮಾಧ್ಯಮವಾಗಿ ಉದಯಿಸಿದ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯಕ್ಕೆ ಪ್ರಮುಖ ಸ್ಥಾನವಿದೆ ಮೌಕಿಕ ಪರಂಪರೆಯ ಮೂಲಕ ಸಾವಿರಾರು ವರ್ಷಗಳ ಇತಿಹಾಸವನ್ನು ನಮಗೆ ಜನಪದ ಸಾಹಿತ್ಯ ತಿಳಿಸುತ್ತದೆ ಅಂತಹ ಜನಪದ ಸಾಹಿತ್ಯದ ರಕ್ಷಣೆಯ ಹೊಣೆ ಪ್ರತಿಯೊಬ್ಬರದಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ, ಕನ್ನಡ ಉಪನ್ಯಾಸಕ ಡಾ. ಬಸವರಾಜ ಸುಂಕೇಶ್ವರ ಉಪನ್ಯಾಸ ನೀಡಿ ಕನ್ನಡ ಭಾಷೆಯಲ್ಲಿನ ಸಾಹಿತ್ಯ ಪ್ರಕಾರದಲ್ಲಿ ಜನಪದ ಸಾಹಿತ್ಯವು ಅತ್ಯಂತ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಜನಪದ ಹಾಡುಗಳಲ್ಲಿ ಸತ್ಯ, ಧರ್ಮ, ನೀತಿ ಮತ್ತು ತ್ಯಾಗಕ್ಕೆ ಹೆಚ್ಚಿನ ಆದ್ಯತೆಯನ್ನು ಕಾಣಬಹುದಾಗಿದೆ. ಜನಪದ ಸಾಹಿತ್ಯವು ನಮ್ಮ ದೇಶದ ಹೆಮ್ಮೆಯ ಸಾಹಿತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಲಿತ ಕವಿ ಮತ್ತು ಜನಪದ ಗಾಯಕರಾದ ಜಾಕೋಬ ದೊಡ್ಡಮನಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಜಾನಪದ ಹಾಡುಗಳನ್ನು ಹಾಡಿದರು.
ದಲಿತ ಕವಿ ಮತ್ತು ಜನಪದ ಗಾಯಕರಾದ ಜಾಕೋಬ ದೊಡ್ಡಮನಿಯವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂ.ಫಾ ವಿನೋದ್ ಪೌಲ್ ವಹಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಖಾಸಿಂ ಸಾಬ್ , ಲೊಯೋಲ ಶಾಲೆಯ ನಿರ್ದೇಶಕರಾದ ಫಾ ಸಿರಿಲ್ ರಾಜ್, ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ದೇವಣ್ಣ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.