From Kannada Awareness Committee
Hoisting of the flag as part of 78th Independence Day.
ಗಂಗಾವತಿ: ತಾಲೂಕಿನ ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಬೃಹನ್ಮಠದ ರಾಜರಾಜೇಶ್ವರಿ ಜಾನಪದ ಕಲಾಭಿವೃದ್ಧಿ ಸಂಘ ಹಾಗೂ ಕನ್ನಡ ಜಾಗೃತಿ ಸಮಿತಿ ಗಂಗಾವತಿ ಇವರಿಂದ ಇಂದು ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಕನ್ನಡ ಜಾಗೃತಿ ಸಮಿತಿಯ ಭವನದಲ್ಲಿ ಬೆಳಿಗ್ಗೆ ೮:೩೦ಕ್ಕೆ ಧ್ವಜಾರೋಹಣವನ್ನು ಕನ್ನಡ ಜಾಗೃತಿ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್. ರಾಮಲಿಂಗಪ್ಪ ಧಣಿಯವರು ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶ ನಮಗೆನು ಕೊಟ್ಟಿದೇ ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಂಡು ನಾಡ, ನುಡಿ, ಸೇವೆಗೆ ಎಲ್ಲರೂ ಸನ್ನದ್ಧರಾಗಿ ಸೇವೆ ಮಾಡಿ, ದೇಶದ ಋಣವನ್ನು ತೀರಿಸಬೇಕು. ಹಿಂದಿನ ಅನೇಕ ವೀರ ಹೋರಾಟಗಾರರ ತ್ಯಾಗದ ಫಲವಾಗಿ ನಾವು ಸ್ವಾತಂತ್ರö್ಯವನ್ನು ಪಡೆದಿದ್ದೇವೆ. ಈ ಸ್ವಾತಂತ್ರö್ಯವನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ದೇಶದ ಐಕ್ಯತೆಯನ್ನು ಕಾಪಾಡಬೇಕೆಂದು ಹೇಳಿದರು.
ಈ ಧ್ವಜಾರೋಹಣ ಸಮಾರಂಭದ ದಿವ್ಯಸಾನಿಧ್ಯವನ್ನು ರಾಜರಾಜೇಶ್ವರಿ ಬೃಹನ್ಮಠದ ಅಭಿನವ ಶರಣಬಸವ ದೇವರು ವಹಿಸಿದ್ದರು. ನಂತರ ರಾಷ್ಟçಗೀತೆ ಹಾಡುವ ಮೂಲಕ ತ್ರಿವರ್ಣ ಬಾವುಟಕ್ಕೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅರಳಹಳ್ಳಿ ಬೃಹನ್ಮಠದ ರೇವಣಸಿದ್ದಯ್ಯ ತಾತ, ಮುಷ್ಠಿ ವಿರುಪಾಕ್ಷಪ್ಪ, ಡಾ|| ಎಸ್.ಬಿ ಹಂದ್ರಾಳ, ಎಸ್.ಬಿ ಹಿರೇಮಠ ಹಿರೇಜಂತಕಲ್, ಪ್ರಭುರಾಜ ಶೆಟ್ಟರ್, ಸುಭಾಷಚಂದ್ರ ಶೇಟ್ ಜೈನ್, ವಿಶ್ವನಾಥ ಬೂತಲದಿನ್ನಿ, ಶಶಿಧರಸ್ವಾಮಿ, ರಾಜಶೇಖರ ಹೇರೂರು, ಶರಣಪ್ಪ ಮೆಟ್ರಿ, ಸುಂದರ ರೆಡ್ಡಿ, ಶರಣಬಸವ ಮೈಲಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.