Officials of the Government Medical Officers Association held a protest condemning the killing of the student.
ಗಂಗಾವತಿ,14:ಕೋಲ್ಕತ್ತಾದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕ್ರೂರ ಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲಾ ವೈದ್ಯಾಧಿಕಾರಿಗಳು ಸಂಘದಿಂದ ಉಪವಿಭಾಗ ಆಸ್ಪತ್ರೆಯೊಂದ ನಗರದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರಿ ವೈದ್ಯಾಧಿಕಾರಿಗಳು ಸಂಘದಿಂದ ಶ್ರೀಕೃಷ್ಣದೇವರಾಯವೃತ್ತದವರೆಗೂ ಮೇಣದ ಬತ್ತಿ ಹಿಡಿದುಕೊಂಡು ತೆರಳಿ ವೃತ್ತದಲ್ಲಿ ಸಂತಾಪ ವ್ಯಕ್ತ ಪಡಿಸಿದರು.
ಈ ಸಂದರ್ಭ ಸರ್ಕಾರಿ ವೈದ್ಯಾಧಿಕಾರಿಗಳು ಜಿಲ್ಲಾ ಅಧ್ಯಕ್ಷ ಡಾ.ಈಶ್ವರ ಶಿ.ಸವಡಿ ಮಾತನಾಡಿ, ಕಾಲೇಜಿನ ಸೆಮಿನಾರಹಾಲ್‌ನಲ್ಲಿ ಹತ್ಯೆ ನಡೆದಿದ್ದು, ಹತ್ಯೆಯ ಮೊದಲು ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎನ್ನುವುದಕ್ಕೆ ಬಲವಾದ ಸಾಕ್ಷಿ ಕಂಡುಬಂದಿವೆ. ಈ ಅಪರಾಧವು ಕಾಲೇಜಿನಲ್ಲಿ ನಿರ್ವಹಣೆ ಮತ್ತು ಭದ್ರತೆ ಇಲ್ಲದಿರುವುದನ್ನು ತೋರಿಸುತ್ತದೆ. ವೈದ್ಯರ ಉದ್ಯೋಗ ಸ್ಥಳಗಳಲ್ಲಿ ಇಂತಹ ವಿಷಪೂರಿತ ವಾತಾವರಣ ಹೆಚ್ಚುತ್ತಿರುವ ಪ್ರಕರಣಗಳು ತುಂಬಾ ಆತಂಕಕಾರಿ. ವೈದ್ಯರು, ವಿಶೇಷವಾಗಿ ಮಹಿಳೆಯರು, ವೃತ್ತಿಯ ಸ್ವಭಾವದಿಂದ ಹಿಂಸೆಗೆ, ಶೋಷಣೆಗೆ ಒಳಗಾಗುತ್ತಾರೆ. ಆಸ್ಪತ್ರೆ ಮತ್ತು ಕಾಲೇಜುಗಳಲ್ಲಿ ವೈದ್ಯರಿಗೆ ಸುರಕ್ಷತೆ ಒದಗಿಸುವುದು ಅಧಿಕಾರಿಗಳ ಹೊಣೆಯಾಗಿದೆ ಈ ಒಂದು ಪ್ರತಿಭಟನೆಯಲ್ಲಿ ನೂರಾರು ವೈದ್ಯರು ಭಾಗವಾಸಿದರು,ಮತ್ತು ಕೊಪ್ಪಳ ಜಿಲ್ಲಾ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದರು.
ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳಿಗೆ ಶಿಕ್ಷೆಯಾಗಬೇಕು, ಉದ್ಯೋಗದ ಸ್ಥಳಗಳಲ್ಲಿ, ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆ ವೃದ್ಧಿಸಲುತಕ್ಷಣದಕ್ರಮಗಳಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ್, ತಾಲೂಕು ವೈದ್ಯಾಧಿಕಾರಿಗಳಾದ ಡಾ.ಗೌರಿಶಂಕರ್,ಡಾ.ನಂದಕುಮಾರ,ಡಾ.ಶಕುಂತಲಾ, ಡಾ.ರಾಮಾಂಜಿನೇಯ,ಡಾ.ರಮೇಶ,ಡಾ.ವಾದಿರಾಜ್, ಸರ್ಕಾರಿ ವೈದ್ಯಾಧಿಕಾರಿಗಳು ಸಂಘದ ಜಿಲ್ಲಾ ಉಪಾಧ್ಯಕ್ಷ ಡಾ.ಕಾವೇರಿ, ಹಾಗೂ ನೂರಾರು ವೈದ್ಯರು ಸೇರಿದಂತೆ ಇತರರು ಇದ್ದರು