Hagari Gajapur village on the taluk border is neglected by politicians and officials
ಕೊಟ್ಟೂರು : ಇದೊಂದು ಸಮಸ್ಯಗಳನ್ನ ಮೈತುಂಬ ತುಂಬಿ ಕೊಂಡಿರವ ಗ್ರಾಮ ಸ್ವಾತಂತ್ರ್ಯ ಬಂದಾಗಿನಿಂದಲು ಡಾಂಬರು ಕಾಣದ ರಸ್ತೆ ಗಳು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿ ಭಾಗದ ಹಗರಿ ಗಜಾಪುರ ಗ್ರಾಮ ಎತ್ತಲಿಂದ ನೋಡಿದರು ಅತಂತ್ರ ಸ್ಥಿತಿಯಲ್ಲಿದೆ
ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆಯ ಲ್ಲಿದ್ದ ಗ್ರಾಮ ಜೆ.ಹೆಚ್. ಪಾಟೀಲ್ ಮುಖ್ಯಮಂತ್ರಿ ಇದ್ದಾಗ ಹರಪನಹಳ್ಳಿ ತಾಲೂಕು ನ್ನು ನೂತನ ದಾವಣಗೆರೆ ಜಿಲ್ಲೆಗೆ ಸೆರಿಸಿದರು ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಮತ್ತೆ ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆ ಮಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ನೂತನ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಿದರು. ಹೀಗೆ ಅಲ್ಲಿಂದ ಇಲ್ಲಿಂದ ಅಲ್ಲಿಗೆ ಗ್ರಾಮಸ್ಥರು ಪರದಾಡಿದ್ದೆ ಬಂತು ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಕೇವಲ ಆರು ಕಿಲೋಮೀಟರ್ ದೂರದಲ್ಲಿ ಇರುವ ಹಗರಿ ಗಜಾಪುರ
ವ್ಯವಹಾರಿಕವಾಗಿ ಮತ್ತು ವಿಧ್ಯಾಭ್ಯಾಸ ಕ್ಕಾಗಿ ಕೊಟ್ಟೂರನ್ನು ಅವಲಂಬಿಸಿದೆ ಹಗರಿ ಗಜಾಪುರ ಗ್ರಾಮದ ಪಕ್ಕದಲ್ಲಿ ಇರುವ ಗೌರಿಪುರ.ಬಸವನಾಳು.ಕೆಸರಹಳ್ಳಿ.ಬಳಗನೂರು ಮೈದೂರು ಗ್ರಾಮಗಳ ರೈತರು ಕೊಟ್ಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಅವಲಂಬಿಸಿದ್ದಾರೆ.
ಪ್ರತಿ ನಿತ್ಯ ಈ ಗ್ರಾಮ ವಂದಕ್ಕೆ ಒಂಬತ್ತು ಸಾರಿಗೆ ಸಂಸ್ಥೆ ಯ ಬಸ್ಸು ಸಂಚರಿಸುತ್ತವೆ. ಎಲ್ಲಾ ಬಸ್ಸು ಗಳ ಒಳ್ಳೆಯ ಕಲೆಕ್ಷನ್ ಬರುತ್ತಿವೆ. ದುರಂತವೆಂದರೆ ಈ ಗ್ರಾಮಸ್ಥರು ಅಭಿವೃದ್ಧಿ ವಿಚಾರದಲ್ಲಿ ಯಾವ ಜನಪ್ರತಿನಿಧಿಗಳನ್ನ ಕೇಳಬೇಕು ಎನ್ನುವ ಪರಿಸ್ಥಿತಿ ಇದೆ