Crust gate chain link is tied due to irresponsibility of people’s representatives: Gulgannawar
ಕೊಪ್ಪಳ : ದಿ.10ರಂದು ಶನಿವಾರ ತಡರಾತ್ರಿ ತುಂಗಭದ್ರಾ ಅಣೆಕಟ್ಟಿನ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ಟಾಗಿರುವುದು ನಿಜಕ್ಕೂ ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.
ಅವದಿಗೆ ಮುನ್ನ ಡ್ಯಾಮ್ ನಲ್ಲಿ ನೀರು ತುಂಬಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು, ಈ ಭಾಗದ ಜೀವನಾಡಿ ಇರುವ ತುಂಗಭದ್ರಾ ಜಲಾಶಯ ಈ ಘಟನೆಯಿಂದ ಈ ಭಾಗದ ರೈತರಿಗೆ ನಷ್ಟ ಉಂಟು ಮಾಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು.
ಅಧಿಕಾರಿಗಳ ನಿರ್ಲಕ್ಷ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಇಂತಹ ಘಟನೆಗಳಿಗೆ ಕಾರಣ.
ಬೇಸಿಗೆ ಸಂದರ್ಭದಲ್ಲಿ ನಿರ್ವಹಣೆಯನ್ನು ಹಾಗೂ ರಿಪೇರಿ ಗೆ ನೀಡಿದ ಹಣವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಿದ್ದರೆ ಬಹುಶಹ ಇಂತಹ ಘಟನೆ ನಡೆಯುತ್ತಿರಲಿಲ್ಲ. ಜಲಾಶಯದ ನಿರ್ವಹಣಾಕ್ಕೆ, ನೀಡಿದ ಹಣದ ದುರ್ಬಳಿಕೆ ಮಾಡಿಕೊಂಡಿರುವದೇ ಇಂಥ ಘಟನೆಗಳಿಗೆ ಕಾರಣವಾಗಿದೆ ಎಂದರು.
ಈ ಘಟನೆಗೆ ಸಂಬಂಧಪಟ್ಟಂತೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಮತ್ತು ಶೀಘ್ರವೇ ಗೇಟ್ ರಿಪೇರಿ ಆಗಬೇಕು ಆಗುವ ಅನಾಹುತಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.