Nagar Panchami celebration in the surrounding villages of New Halli Hobali
ಕಾನ ಹೊಸಹಳ್ಳಿ: ಹೋಬಳಿಯ ಆದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಣೆ ಮಾಡಲಾಯಿತು, ವಿವಿಧ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಮಹಿಳೆಯರು, ಮಕ್ಕಳು, ಪುರುಷರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ತಾಹೂಡೇಂ ಗ್ರಾಮದಲ್ಲಿ ನಾಗ ದೇವತೆಗೆ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಹಾಲೆರೆದರು. ಸುತ್ತಮುತ್ತಲಿನ ಗ್ರಾಮಗಳಾದ ಕಾನ ಹೊಸಹಳ್ಳಿ, ಬಣವಿಕಲ್ಲು, ಚಿಕ್ಕ ಜೋಗಿ ಹಳ್ಳಿ, ಚೌಡಪುರ, ಹಿರೇ ಕುಂಬಳಗುಟ್ಟೆ, ಗುಂಡು ಮುಣಗು, ಕಾನಮಡುಗು, ತಾಯಕನಹಳ್ಳಿ ಹೀಗೆ ಹಲವು ಗ್ರಾಮೀಣ ಭಾಗಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಸಂಪ್ರದಾಯದಂತೆ ಆಚರಿಸಿದರು. ನಾಗರ ಪಂಚಮಿಯಂದು ಹಾಲು ಎರೆಯುವ ಸಂಪ್ರದಾಯ. ಶ್ರಾವಣ ಮಾಸದ ಹಬ್ಬವಾದ ನಾಗರ ಪಂಚಮಿ ಅಂಗವಾಗಿ ನಾಗ ದೇವತೆಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ ಹಾಲು ಎರೆದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಹಾಲೆರೆದು ಸಂಭ್ರಮಿಸಿದರು.