Breaking News

ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದಸಮಾಜಮುಖಿ : ಶ್ರೀ ಶಾಂತವೀರ ಸ್ವಾಮಿ

Social worker with great concern for children : Shri Shantaveera Swamy

ಜಾಹೀರಾತು

ಯಾದಗಿರಿ: ಶಿಕ್ಷಣ ಇಲಾಖೆಯಲ್ಲಿ ಶ್ರೀ ಮಹ್ಮದ ಖಾಸಿಂ ಅಲಿರವರ ಉತ್ತಮ ಶಿಕ್ಷಕರಾಗಿ 27 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಸ. ಕಿ. ಪ್ರಾ. ಶಾಲೆ ಹಿಮಾಲಪುರ್ ತಾಂಡಾದಿಂದ ವಯೋನಿವೃತ್ತಿ ಹೊಂದಿದ ಹಿನ್ನಲೆ ಪಟ್ಟಣದ ಜಿ. ಹೆಚ್ ಫಂಕ್ಷನ್ ಹಾಲ ಸೇವಾ ವಯೋನಿವೃತ್ತಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು

ಈ ವೇಳೆ ಬಾಲ್ಲಪ ಸಿ.ಆರ್.ಪಿ ಸ್ವಾಗತಿಸಿ, ಸಯ್ಯದ್ ಬಾಬಾ ಸಿ ಆರ್ ಪಿ ಪುಟಪಾಕ್ ಕಿರುಪರಿಚಯಸಿ, ಸಿದ್ದಲಿಂಗಪ್ಪ ಸಿ. ಆರ್. ಪಿ ಚಪೇಟ್ಲಾ ಪ್ರಾಸ್ತಾವಿಕ ನುಡಿ, ಬಾಲರಾಜ್ ಶಿಕ್ಷಕರು ನಿರೂಪಿಸಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರು ಸಂತೋಷ ನಿರೇಟಿ ಮಾತನಾಡಿ ” ಖಾಸಿಂ ಅಲಿ ಅವರು ಓಬ್ಬ ನಿಷ್ಠಾವಂತ ಶಿಕ್ಷಕ, ಸಮಯ ಪಾಲಕ ಅವರ ಸಮಾಜಕ್ಕೆ ಕೂಡುಗೆ ಅಪಾರವಿದೆ”

ದಿವ್ಯ ಸಾನಿಧ್ಯ ವಹಿಸಿ ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಖಾಸಿಂ ಅಲಿ ಅವರು ತಮ್ಮ ಸೇವೆಯಲ್ಲಿ ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಹೊಂದಿದ್ದರು. ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ ಸಮಾಜಮುಖಿ, ಆದರ್ಶ ಶಿಕ್ಷಕರು, ಸಮಾಜ ಸೇವಕರಾಗಿದ್ದಾರೆ. ಇವರಿಗೆ ನೋಡಿದರೆ ಕನ್ನಡ ಕವಿ ನಿಸಾರ್ ಅಹ್ಮದ್ ಅವರ ನೆನಪು ಬರುತ್ತೆ, ದಂಪತಿಗಳಿಗೆ ಆಶೀರ್ವಾದಿಸಿದರು “

ಸತ್ಕಾರ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಮೊಹಮ್ಮದ ಖಾಸಿಂ ಅಲಿ ಮಾತನಾಡಿ ನಾನು ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳು ಎಂಬ ಭಾವನೆಯಿಂದ ಸೇವೆ ಸಲ್ಲಿಸಿದ್ದೇನೆ. ನೀವೆಲ್ಲ ಕಾರ್ಯಕ್ರಮಕ್ಕೆ ಸೇರಿ ನನ್ನ ಬೀಳ್ಕೊಡುತ್ತಿರುವುದು ಮನಸ್ಸಿಗೆ ಹಿತ ತಂದಿದೆ ಜೀವನದಲ್ಲಿ ಏನಾದರೂ ಗಳಿಸಿದ್ದರೆ ಅದು ನಿಮ್ಮ ಹಾಗೂ ಮಕ್ಕಳ ಪ್ರೀತಿ ಪ್ರೇಮ ಮಾತ್ರ ಎಂದು ಭಾವುಕರಾದರು”

ನಾರಾಯಣರೆಡ್ಡಿ ಅಧ್ಯಕ್ಷರು ಕ. ರಾ. ಪ್ರಾ. ಶಾ. ಶಿ. ಸಂ ಗುರುಮಠಕಲ್ ನಿವೃತ್ತ ಶಿಕ್ಷಕರ ಗುಣಗಾನ ಮಾಡಿ ಮುಂದಿನ ಬದುಕಿಗೆ ಶುಭಕೋರಿದರು.

ಇ. ಸಿ. ಓ. ರವೀಂದ್ರ ಮಾತನಾಡಿ ” ಇವರ ಮಾರ್ಗದರ್ಶನದಿಂದ ಹಲವಾರು ಮಕ್ಕಳು ಉನ್ನತ ಹುದ್ದೆಯಲ್ಲಿದ್ದರೆ, ಯಾವುದೆ ಕಪ್ಪು ಚುಕ್ಕಿ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ “

ಮುಖ್ಯ ಅತಿಥಿಗಳಾದ ನಾರಾಯಣರೆಡ್ಡಿ,ಸಯ್ಯದ್ ಬಾಬಾ,ಇಸ್ಮಾಯಿಲ್ ಪ್ಯಾರೆ, ಗುಲಾಮ ರಸೂಲ್, ಶಶಿಕಾಂತ್ ಜನಾರ್ಧನ, ಕಿಷ್ಟರೆಡ್ಡಿ, ಹಾಜರತ ಅಲಿ, ಬುಗಪ್ಪ ಬೇಗರ,ಸಯ್ಯದ್ ಅಕ್ಬರ್, ಮಾಣಿಕಪ್ಪ, ಇ.ಸಿ.ಓ ರವೀಂದ್ರ, ಶಿವರೆಡ್ಡಿ,ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ಶಿಕ್ಷಕರ ನೌಕರರ ಸಂಘದ ಪದಾಧಿಕಾರಿಗಳು, ಶಿಕ್ಷಕ ಮಿತ್ರರು, ಊರಿನ ಗಣ್ಯರು, ಕುಟುಂಬಸ್ಥರು ಅನೇಕರು ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.