Breaking News

ಕಾರ್ಮಿಕ ಇಲಾಖೆಯಲ್ಲಿನ ಭ್ರಷ್ಟಾಚಾರ ನ್ಯಾಯಾಂಗ ತನಿಖೆ ಆಗ್ರಹ

Demand judicial inquiry into corruption in labor department

ಜಾಹೀರಾತು
01 Gvt 03


ಕಲ್ಯಾಣಸಿರಿ ಸಮಾಚಾರ
ಗಂಗಾವತಿ: ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಠಾಚಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಸಿಐಟಿಯು ಹಾಗೂ ಸಿಪಿಐಎಂ ಪಕ್ಷ ರಾಜ್ಯಮುಖಂಡ ಎಂ.ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಹೈಕೋರ್ಟ ಆದೇಶದಂತೆ
ಶೈಕ್ಷಣಿಕ ಧನಸಪಾಯ ಪಾವತಿಸಬೇಕು ಖರೀದಿಗಳ ಮೂಲಕ ನಡೆಸಲಾಗುವ ವ್ಯಾಪಕ ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು” ಎಂದು ಆಗ್ರಹಿಸಿ ಆಗಸ್ಟ್ ೫ ರಂದು ೨೦೨೪
ಬೆಂಗಳೂರಿನಲ್ಲಿ ಬೃಹತ್ ಮುಖ್ಯಮಂತ್ರಿ ಮನೆ ಚಲೋ ನಡೆಸಲು ನಿರ್ಧರಿಸಿದ್ದಾರೆ.ಇದೊಂದು ನ್ಯಾಯಯುತ ಹೋರಾಟವಾಗಿದ್ದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ) ರಾಜ್ಯ ಸಮಿತಿ ಅದಕ್ಕೆ ಸಂಪೂರ್ಣ ಬೆಂಬಲ
ವ್ಯಕ್ತಪಡಿಸುತ್ತದೆ. ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ಆಹಾರ ಕಿಟ್, ಟೂಲ್ ಕಿಟ್ ಇತ್ಯಾದಿಗಳ ಹೆಸರಿನಲ್ಲಿ ಸಾವಿರಾರು ಕೋಟಿ ಹಣವನ್ನು ಮನಸೋಇಚ್ಛೆ ಖರ್ಚು
ಮಾಡಿದ್ದರು ಇದೀಗ, ಕಾಂಗ್ರೆಸ್ ಸರ್ಕಾರದ ಕಾರ್ಮಿಕ ಸಚಿವ ಸಂತೋಷಲಾಡ್ ಖರೀದಿಗಳನ್ನು ನಿಲ್ಲಿಸಿ ಕಾರ್ಮಿಕರಿಗೆ ನೇರ ಹಣ ವರ್ಗಾವಣೆಯ ಮೂಲಕ ಸೌಲಭ್ಯ ವಿತರಿಸಲಾಗುವುದೆಂದು ಘೋಷಿಸಿ, ಮರಳಿ ಕಾರ್ಮಿಕರ
ಹೆಸರಲ್ಲಿ ಮತ್ತೆ ಲ್ಯಾಪ್ ಟಾಪ್ ಖರೀದಿ, ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ ಕಿಟ್ ಖರೀದಿ (ಆಯುರ್ವೇದ ಪೌಡರ್),ಕೌಶಲ್ಯ ತರಬೇತಿ ಇತ್ಯಾದಿಗಳ ಮೂಲಕ ಈಗಾಗಲೇ ನೂರಾರು ಕೋಟಿ
ರೂಪಾಯಿ ಅನಗತ್ಯ ಖರ್ಚು ಮಾಡುತ್ತಿರುವುದು ಗಮನಿಸಿದಾಗ ಹಿಂದಿನ ಭ್ರಷ್ಟ ಬಿಜೆಪಿಗಿಂತ ಕಾಂಗ್ರೆಸ್ ಸರ್ಕಾರ ಭಿನ್ನವಾಗಿಲ್ಲ ಎನ್ನುವ ಭಯ ನಿರ್ಮಾಣ ಕಾರ್ಮಿಕರಲ್ಲಿ ಮನೆ ಮಾಡಿದೆ. ಈ ಎಲ್ಲ ಖರೀದಿಗಳನ್ನು
ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯವೇನೆಂದು ಕಾರ್ಮಿಕರು ತಿಳಿಯುವಂತೆ ಕ್ರಮವಹಿಸಬೇಕು. ಕಲ್ಯಾಣ ಮಂಡಳಿಯಲ್ಲಿ ರೂ ೧೪ ಸಾವಿರ ಕೋಟಿ ಸೆಸ್ ಸಂಗ್ರಹವಾಗಿದ್ದು ಅದರಲ್ಲಿ ರೂ ೬೫೦೦. ಕೋಟಿ ಖರ್ಚಾಗಿದ್ದು
ಸುಮಾರು ೬೭೦೦ ಕೋಟಿ ನಿಧಿ ಬಾಕಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ೨೦೦೭ ರಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ. ಕಾರ್ಮಿಕರಿಗಾಗಿ ೧೯ ಸೌಲಭ್ಯಗಳನ್ನು
ಘೋಷಿಸಿದೆ.ಮಕ್ಕಳ ಶಿಕ್ಷಣ, ಮದುವೆ,ಆರೋಗ್ಯ, ಅಪಘಾತ ಸಹಜ ಮರಣ, ಹೆರಿಗೆ ಮೊದಲಾದ ಕೆಲ ಸೌಲಭ್ಯಗಳ ಹೊರತು ಪಡಿಸಿ ಇತರೆ ಸೌಲಭ್ಯಗಳನ್ನು ಜಾರಿಗೊಳಿಸದಿರುವುದು ಖಂಡನೀಯವಾಗಿದೆ. ಬೋಗಸ್
ಕಾರ್ಡ ನಿಯಂತ್ರಣದ ಹೆಸರಿನಲ್ಲಿ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ, ಹೆರಿಗೆ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಂತೆ ಮಾಡಿದೆ. ವಿವಿಧ ಸೌಲಭ್ಯಗಳಿಗಾಗಿ ಸಲ್ಲಿಸಲಾದ ಸಾವಿರಾರು
ಅರ್ಜಿಗಳಿಗೆ ಧನ ಸಹಾಯ ಪಾವತಿ ಸರಿಯಾಗಿ ಆಗುತ್ತಿಲ್ಲ. ಅಲ್ಲದೆ ಶೈಕ್ಷಣಿಕ ಧನ ಸಹಾಯವನ್ನು ಶೇ ೬೦ ರಿಂದ ೮೦ ದವರೆಗೆ ಶೈಕ್ಷಣಿಕ ಧನ ಸಹಾಯ ಕಡಿತ ಮಾಡಿರುವುದು ಅತ್ಯಂತ ಖಂಡನಾರ್ಹನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.