Precautionary measures have been taken on the occasion of Shravan month in Madappana Hill: Secretary Raghu.
ವರದಿ : ಬಂಗಾರಪ್ಪ ,ಸಿ ,
ಹನೂರು :ವಿಧಾನಸಭಾ ಕ್ಷೇತ್ರದ ಮಾದಯ್ಯನ ಸನ್ನಿದಿಯಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಭೀಮನ ಅಮಾವಾಸ್ಯೆ ಹಾಗು ಶ್ರಾವಣ ಮಾಸದ 108 ಕುಂಭಾಭಿಷೇಕ ಮಹೋತ್ಸವ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಭಕ್ತರಿಗೆ ಕುಡಿಯಲು ನೀರು, ನೆರಳು, ಶೀಗ್ರದರ್ಶನ, ಲಾಡು ಪ್ರಸಾದ ,ಭೋಜನ ಸೇರಿದಂತೆ ಶೌಚಾಲಯದ ಸೇವೆಗಳಿಂದ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾರ್ಯದರ್ಶಿಗಳಾದ ಎ ರಘು ತಿಳಿಸಿದರು.
ನಂತರ ಮಾತನಾಡಿದ ಅವರು
ಶ್ರಾವಣ ಮಾಸದ ಪ್ರಯುಕ್ತ
ಶ್ರೀ ಮಾದಪ್ಪ ಸ್ವಾಮಿಗೆ ಕುಂಭಾಭೀಷೇಕ, ಸಹಸ್ರಾಭಿಷೇಕ ಮಹೋತ್ಸವ, ಲಕ್ಷ ಬಿಲ್ವಾರ್ಚನೆಯು ಆ.5ರಿಂದ ಸೆಪ್ಟೆಂಬರ್ 9ರವರೆಗೆ ನಡೆಯಲಿವೆ.
ಇದರೊಂದಿಗೆ
ಶ್ರೀ ಕ್ಷೇತ್ರದ ಸಾಲೂರು ಬೃಹನ್ಮಠಾಧ್ಯಕ್ಷ ಪ್ರಣವ ಶ್ರೀ ಪಟ್ಟದ ಶಾಂತಮಲ್ಲಿಕಾರ್ಜುನಸ್ವಾಮಿಗಳ ಸಾನಿಧ್ಯದಲ್ಲಿ 108 ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ವಿವಿಧ ಅಭಿಷೇಕಗಳು ಶ್ರಾವಣ ಮಾಸದ ಪರ್ಯಂತ ಬೆಳಿಗ್ಗೆ 9.20ರಿಂದ 10.30 ಗಂಟೆಯೊಳಗೆ ವಿವಿಧ ಪೂಜಾಸೇವೆಗಳು ಜರುಗಲಿವೆ. ಶ್ರೀಕ್ಷೇತ್ರದಲ್ಲಿ ಪೂಜಾ ಸೇವೆಗಳಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳಿಗೆ ಪಂಚ ಕಳಸ ಸಮೇತ ನವರತ್ನ ಕಿರೀಟಧಾರಣೆ ಸೇವೆಗೆ 1000 ರೂ, ಸಹಸ್ರ ಕುಂಭಾಭಿಷೇಕ ಸೇವೆಗೆ 750 ರೂ, ಸಹಸ್ರ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ ಸೇವೆ ಹಾಗೂ ಸಹಸ್ರ ವಾಹನೋತ್ಸವಕ್ಕೆ 300 ರೂ. ಗಳ ದರವನ್ನು ನಿಗಧಿಪಡಿಸಲಾಗಿದೆ ,ಅಲ್ಲದೆ ಇತರೆ ಮೂಲಭೂತ ಸೌಕರ್ಯಗಳು ಒದಗಿಸುವ ಬಗ್ಗೆ ಹಾಗೂ ಸ್ವಚ್ಛತೆಯ ಬಗ್ಗೆ ಪೂರ್ವ ಸಿದ್ಧತೆ ಕೈಗೊಳ್ಳವ ದೇಸೆಯಲ್ಲಿ ನಮ್ಮ ಅಧ್ಯಕ್ಷತೆಯಲ್ಲಿ ನಡೆದ ನೌಕರರ ಸಭೆ. ಉಪ ಕಾರ್ಯದರ್ಶಿಗಳು ಹಾಗು ಎಲ್ಲಾ ವಿಭಾಗಗಳ ಮುಖ್ಯಸ್ಥರು ನೌಕರರು ಹಾಜರಿದ್ದರು ಎಂದು ತಿಳಿಸಿದರು .