Menstrual hygiene awareness program in collaboration with Women Empowerment Cell and Internal Quality Assurance Cell
ವಿಜಯನಗರ: ದಿ,30 /7/ 2024 ಮಂಗಳವಾರ ವಿಜಯನಗರ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಕೋಶ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ ಸಹಯೋಗದೊಂದಿಗೆ ಮುಟ್ಟಿನ ನೈರ್ಮಲ್ಯ ತಿಳುವಳಿಕೆ ಮತ್ತು ಗರ್ಭಾಶಯ ಕ್ಯಾನ್ಸರ್ ತಿಳುವಳಿಕೆ ಅರಿವನ್ನು ವಿದ್ಯಾರ್ಥಿನಿಯರಿಗೆ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಗರದ ಪ್ರಸಿದ್ಧ ವೈದ್ಯರಾದ ಡಾ. ಸುಮಂಗಳ.ಎ ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಿದರು ಡಾಕ್ಟರ್ ಅಂಜನಾ ಜಿ ಮುಟ್ಟಿನ ನೈರ್ಮಲ್ಯದ ಬಗ್ಗೆ ತಿಳುವಳಿಕೆ ನೀಡಿದರು. ಡಾಕ್ಟರ್ ತನುಜ ಹುಬ್ಲಿ ಗರ್ಭಾಶಯ ಕ್ಯಾನ್ಸರ್ ಲಕ್ಷಣಗಳ ಬಗ್ಗೆ ತಿಳುವಳಿಕೆ ನೀಡಿದರು. ಡಾಕ್ಟರ್ ತುಳಸಿ ಪ್ರಿಯ ರವರು
ಗರ್ಭಾಶಯ ಕ್ಯಾನ್ಸರ್ ವ್ಯಾಕ್ಸಿನ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ವಿಜಯನಗರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಎನ್ ಮಲ್ಲಿಕಾರ್ಜುನ ಮೆಟ್ರಿ, ಪ್ರಾಚಾರ್ಯರಾದ ಡಾ. ಪ್ರಭುಗೌಡ ಹಾಗೂ ಮಹಿಳಾ ಸಬಲೀಕರಣ ಕೋಶದ ಸಂಚಾಲಕರಾದ ಶ್ರೀಮತಿ ಬಿ ಎಸ್ ಹೂವಕ್ಕ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಮತಿ ಜಯಶ್ರೀ ಟಿ ಹೆಚ್ ಎಂ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಪುಷ್ಪ ಕೌಟಿಗಿ ವಂದನಾಾರ್ಪಣೆ ಮಾಡಿದರು. ಶ್ರೀಮತಿ ಭಾರತಿ ಮಲ್ಲಿಕಾರ್ಜುನ ಗೌಡ ಕಾರ್ಯಕ್ರಮವನ್ನು ನಿರ್ವಹಿಸಿದರು.
ವರದಿ. ಸಮೀರ್ ಬಂಡಿಹರ್ಲಾಪುರ