Tourists staring at Tungeu Borgareta.
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಈ ಬಾರಿ ಮಲೆನಾಡಿನ ಭಾಗಗಳಲ್ಲಿ ಎಡೆಬಿಡದೇ ನಿರಂತರವಾಗಿ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ರಾಜ್ಯದ ಅನೇಕ ನದಿ, ಜಲಾಶಯ, ಜಲಪಾತ, ಕಾಲುವೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಪ್ರವಾಸಿಗರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ,,
ಮೈಸೂರನ ಕೆಆರ್ ಎಸ್, ಬೆಳಗಾವಿಯ ಘಟಪ್ರಭಾ, ಸೇರಿದಂತೆ ಮಲಪ್ರಭಾ, ಹೋಸಪೇಟೆಯ ತುಂಗಾಭದ್ರ, ಆಲಮಟ್ಟಿ ಕೃಷ್ಣ ನದಿ ತುಂಬಿ ಹರಿಯುತ್ತಿವೆ.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಾಭದ್ರ ಅಣೆಕಟ್ಟು ತುಂಬಲು ಕೆಲವೇ ಅಡಿ ಅಂತರವಿದೆ.
ಒಳ ಹರಿವಿನ ಪ್ರಮಾಣ ಹೆಚ್ಚಾದಂತೆ ಅಣೆಕಟ್ಟಿನ 33 ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಪ್ರಸ್ತುತ 1.49 ಲಕ್ಷ ಕ್ಯೂಸೆಕ ನೀರನ್ನು ಹೊರಬಿಡಲಾಗುತ್ತಿದೆ.
ಗಂಗಾವತಿಯಿಂದ ಕಂಪ್ಲಿಗೆ ಸಂಪರ್ಕಿಸುವ ಬ್ರೀಜ್ ಸಂಪೂರ್ಣ ಜಲಾವೃತವಾಗಿದ್ದು,ವಾಹನ ಸಂಚಾರ ವ್ಯವಸ್ಥೆಗೆ ಬುಕ್ ಸಾಗರ ಮೂಲಕ ವಾಹನಗಳು ಸಂಚರಿಸುವಂತೆ ಸೂಚನೆ ನೀಡಿದ್ದು, ಗಂಗಾವತಿ ನಗರ ಪೋಲಿಸ್ ಠಾಣೆಯ ಇಲಾಖೆ ನಾಲ್ಕು ಪೇದೆಗಳು ಸಾರ್ವಜನಿಕ ಹಿತ ದೃಷ್ಟಿಯಿಂದ ಹಗಲಿರುಳು ಕಾಯಬೇಕಾಗಿದೆ.
ತುಂಬಿ ಹರಿಯುತ್ತಿರುವ ಈ ಸೇತುವೆಯನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ವಿಕ್ಷಕರು ಆಗಮಿಸುತ್ತಿದ್ದು,ಫೋಟೋ, ಸೆಲ್ಪಿ ತೆಗೆದುಕೊಳ್ಳಲು ಯುವಕರು, ಯುವತಿಯರು, ಪಡ್ಡೆ ಹುಡುಗರು ಸೇರಿದಂತೆ ಸಾರ್ವಜನಿಕರನ್ನು ನದಿ ಪಾತ್ರದತ್ತ ತೆರಳದಂತೆ ನೋಡಿಕೊಳ್ಳಲು ನಾಲ್ಕು ಜನ ಪೋಲಿಸ್ ಪೇದೆಗಳು ಅಲ್ಲಿಯೇ ಬಿಡಾರ ಹೂಡುವಂತಾಗಿದೆ.
ವಿಕ್ಷಣೆಗೆ ಬಂದ ಕುಟುಂಬಸ್ಥರು, ಸ್ನೇಹಿತರೊಂದಿಗೆ ಆಗಮಿಸಿದ ವಿಕ್ಷಕರು ನದಿ ವೈಭವ ವಿಕ್ಷಿಸಿ, ತಡದಲ್ಲಿ ತಯಾರಿಸುತ್ತಿರುವ ಮಂಡಕ್ಕಿ ಮಿರ್ಚಿ,ಬೆಯಿಸಿದ ಮೆಕ್ಕೆ ಜೋಳ ಖರೀದಿಸಿತ್ತಿದ್ದು ವ್ಯಾಪಾರಸ್ಥರು ಫುಲ್ ಖುಷ್ ಆಗಿದ್ದು ಕಂಡುಬಂದಿತು.
ತುಂಗಭದ್ರ ಜಲಾಶಯದ ಒಳ ಹರಿವಿನ ಪ್ರಮಾಣ ಲಕ್ಷ ಕ್ಯೂಸೆಕ್ ಮೀರಿದ ಕಾರಣ ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ಎಲ್ಲಾ 33 ಕಸ್ಟ್ ಗೇಟ್ ಗಳನ್ನು ತೆರೆದು ನೀರು ಹೊರಬಿಡಲು ತುಂಗಾಭದ್ರ ಮಂಡಳಿ ನಿರ್ಧರಿಸಿತು. ಶನಿವಾರ ಸಹ ಎಲ್ಲಾ ಗೇಟ್ ಗಳಿಂದ ನೀರು ಹೊರಬರುವುದನ್ನು ವಾರಾಂತ್ಯದ ಪ್ರವಾಸಿಗರು ನೋಡಿ ಖುಷಿ ಪಟ್ಟರು.
ಹಂಪಿಯ ಲಕ್ಷ್ಮಣ ತಿರ್ಥದಲ್ಲಿ ರಾಮಲಕ್ಷ್ಮಣ ದೇವಸ್ಥಾನದ ಸಮೀಪಕ್ಕೆ ನೀರು ಬಂದಿದ್ದು, ಸುಗ್ರೀವ ಗುಹೆಯ ಹತ್ತಿರವಿರುವ ಸೀತೆಯ ಸೆರಗು ಬಂಡೆಯ ಮೇಲೆಯೇ ನೀರು ಹರಿದಿದೆ. ಪುರಂದರ ಮಂಟಪವು ಸಂಪೂರ್ಣ ಜಲಾವೃತಗೊಂಡಿದೆ, ಮಂಟಪದ ಧ್ವಜದ ಮೇಲೆ ನೀರು ಹರಿಯುತ್ತಿದೆ.
ಪ್ರವಾಸಿಗರಿಗೆ ಖುಷ್ : ತುಂಗಾಭದ್ರ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರು ಹರಿಸುತ್ತಿರುವದರಿಂದ ಎಲ್ಲೆಡೆ ಜಲ ವೈಭವ ಕಂಗೊಳಿಸುತ್ತಿದೆ. ವಾರಾಂತ್ಯದ ಪ್ರವಾಸಿಗರು ಇದನ್ನು ಕಂಡು ಖುಷಿಗೊಂಡರು.
ಎರಡು ವರ್ಷಗಳ ಬಳಿಕ ಈ ಅದ್ಬುತ ದೃಷ್ಯವನ್ನು ನೋಡುವ ಅವಕಾಶ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಲಭಿಸಿದ್ದು, ಹೆದ್ದಾರಿಯಲ್ಲಿ ಹೋಗುವ ಪ್ರಯಾಣಿಕರು ಸಹ ಮುನಿರಾಬಾದ್ ಸೇತುವೆಯ ಮೇಲಿನಿಂದಲೇಉಕ್ಕಿ ಹರಿಯುವ ಜಲಧಾರೆಯನ್ನು ಕಣ್ತುಂಬಿಸಿಕೊಂಡು ಪುಳಕಿತರಾಗುತ್ತಿದ್ದಾರೆ.