POCSO Act Legal Awareness Program for College Students:
ಗಂಗಾವತಿ: ನಗರದ ಜೆಎಸ್ಎಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯ್ದೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಶಿವಶರಣಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳು ಕಾನೂನು ವ್ಯಾಪ್ತಿ ಮೀರಿ ನಡೆಯುವ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಸುಂದರವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ದುಷ್ಟರಿಂದ ಮತ್ತು ದುಷ್ಟ ಚಟಗಳಿಂದ ಸಾಧ್ಯವಾದಷ್ಟು ವಿದ್ಯಾರ್ಥಿಗಳು ದೂರ ಉಳಿಯುವುದು ಒಳಿತು. ಸದಾ ತಂದೆ ತಾಯಿಗಳ ಆಶಯದಂತೆ ಮತ್ತು ಗುರುಗಳ ಮಾರ್ಗದರ್ಶ ನದಲ್ಲಿ ತಮ್ಮ ಜೀವನವನ್ನು ಉತ್ತಮ ನಡೆತೆಯೊಂದಿಗೆ ನಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇತ್ತೀಚಿನ ದಿನಮಾನಗಳಲ್ಲಿ ಕಾಲೇಜಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೈಯಲ್ಲಿ ಮೊಬೈಲ್ ಗಳು ಸರ್ವೇಸಾಮಾನ್ಯವಾಗಿ ಇರುತ್ತವೆ. ಅವುಗಳನ್ನು ನೋಡುವ ದೃಷ್ಟಿಯಲ್ಲಿ ಒಳ್ಳೆತನವನ್ನು ಆಯ್ಕೆ ಮಾಡಿಕೊಳ್ಳಬೇಕು, ಇಲ್ಲವಾದಲ್ಲಿ ಮೊಬೈಲ್ ಗಳು ನೋಡಲು ಎಷ್ಟು ಸುಂದರವಾಗಿ ಇರುತ್ತವೆಯೋ ಅಷ್ಟೇ ಸುಂದರವಾದ ನಿಮ್ಮ ಜೀವನವನ್ನು ಸಹ ಮೊಬೈಲ್ ಗಳು ಹಾಳು ಮಾಡುತ್ತವೆ ಎಂಬುದನ್ನು ತಾವು ಮನಗಾಣಬೇಕು, ಕಾಲೇಜ್ ಓದಲು ಬರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಸದಾ ಆದರ್ಶದ ಗುರಿಯನ್ನು ಇಟ್ಟುಕೊಂಡು ಮುನ್ನಡೆಯಬೇಕು, ಮೊಬೈಲ್ ಗಿಳಿಗೆ ಜೊತೂ ಬಿದ್ದರೆ ಮತ್ತು ಪೋಕ್ಸೋ ಕಾಯ್ದೆಗಳಂತಹ ಅಕ್ರಮ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಕಾನೂನಿನಿಂದ ತಾವುಗಳು ತಕ್ಕ ಪಾಠವನ್ನು ಕಲಿಯುತ್ತಿರಿ. ಹಾಗಾಗಿ ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಬೇಕು, ಕಾನೂನು ತಮ್ಮನ್ನು ಗೌರವಿಸುತ್ತದೆ.ತಮ್ಮ ಜೀವನದಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಪೋಕ್ಸೋ ಕಾಯ್ದೆಯಂತಹ ಕಾನೂನಿಗೆ ಒಳಪಡಬೇಡಿ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕಾಗಿದೆ ಎಂದು ನಗರ ಠಾಣೆಯ ಎ ಎಸ್ ಐ ಶಿವಶರಣಪ್ಪ ಕಾನೂನು ಅರಿವಿನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೆಎಸ್ಎಸ್ ಕಾಲೇಜ್ ಪ್ರಾಂಶುಪಾಲರಾದ ಭೀಮಸೇನ ಆಚಾರ್ಯ, ಉಪನ್ಯಾಸಕರಾದ ಎಸ್.ಎಸ್. ತೊಂಡಿಹಾಳ, ವಿನಾಯಕ, ಸಲೀಂ ಪಾಷಾ, ಸುರೇಶ ಶಿವಕುಮಾರ ಸೇರಿದಂತೆ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು