Hirejantakal: Issuance of copy of pension order to beneficiaries on the spot

ಗಂಗಾವತಿ: ಇಂದು ದಿನಾಂಕ 29-07-20204 ರಂದು ಗಂಗಾವತಿ ತಾಲೂಕಿನ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಗಂಗಾವತಿಯ ಹಿರೇಜಂತಕಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು ಗಂಗಾವತಿ ಹೋಬಳಿಯಲ್ಲಿ ಒಟ್ಟು 35 ವಿವಿಧ ಪಿಂಚಣಿ ಅರ್ಜಿಗಳು ಸ್ವೀಕೃತಿ ಆಗಿದ್ದು ಅದರಲ್ಲಿ 24 ವಿವಿಧ ಫಲಾನುಭವಿಗಳಿಗೆ ಸ್ಥಳದಲ್ಲೇ ಪಿಂಚಣಿ ಆದೇಶದ ಪ್ರತಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನರ್ಮದಾ ಉಪತಹಸೀಲ್ದಾರ್ ಗಂಗಾವತಿ ಇವರು ವಹಿಸಿದ್ದರು ಈ ಸಂದರ್ಭದಲ್ಲಿ ಗಂಗಾವತಿ ಹೋಬಳಿಯ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಮಾತನಾಡಿ ಪಿಂಚಣಿ ಅದಾಲತ್ ಕಾರ್ಯಕ್ರಮದ ಮಹತ್ವ ಹಾಗೂ ಮಾನ್ಯ ಘನ ಸರ್ಕಾರದ ಜನಪರ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಬಗ್ಗೆ ವಿವರಿಸಿದರು ಕಾರ್ಯಕ್ರಮದಲ್ಲಿ ಇಂದಿರಾ ಪ್ರ ದ ಸ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಕಾವ್ಯ, ಮಹಾಲಕ್ಷ್ಮೀ, ಅಸ್ಲಾಂ ಪಟೇಲ್, ಮಂಜುನಾಥ ದಮ್ಮಾಡಿ, ಹಾಗೂ ಗ್ರಾಮ ಸಹಾಯಕರು ಹಾಗೂ ಫಲಾನುಭವಿಗಳು ಗ್ರಾಮಸ್ಥರು ಹಾಜರಿದ್ದರು.