Appreciation for Shiksha Sapta Program:
Somasekhara Gowda is a Senior Lecturer in Diet

ಗಂಗಾವತಿ: ಜುಲೈ-೨೭ ರಂದು ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಶಿಕ್ಷಾ ಸಪ್ತ ಕಾರ್ಯಕ್ರಮದಡಿಯಲ್ಲಿ ಇಕೋ ಕ್ಲಬ್ ಹಾಗೂ ಶಾಲಾ ಪೌಷ್ಠಿಕಾಂಶ ದಿನವನ್ನಾಗಿ ಹಮ್ಮಿಕೊಳ್ಳಲಾಗಿತ್ತು ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ ನರಗುಂದ ಪ್ರಕಟಣೆಯಲ್ಲಿ ತಿಳಿಸಿದರು.
ಈ ಶಿಕ್ಷಾ ಸಪ್ತ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಡಯಟ್‌ನ ಹಿರಿಯ ಉಪನ್ಯಾಸಕರಾದ ಸೋಮಶೇಖರಗೌಡರವರು ಮಕ್ಕಳು ತಯಾರಿಸಿದ ಪ್ರೊಜೆಕ್ಟ್ಗಳನ್ನು ನೋಡಿ, ಮಕ್ಕಳು ಹಾಗೂ ಶಿಕ್ಷಕರಿಗೆ ಶ್ಲಾಘನೆ ವ್ಯಕ್ತಪಡಿಸಿದರು. ಭೂಮಿ ಮತ್ತು ಪರಿಸರದ ಬಗ್ಗೆ ಹಾಗೂ ಮಕ್ಕಳಿಗೆ ಬೇಕಾಗುವ ಪೌಷ್ಠಿಕಾಂಶ ಆಹಾರಗಳ ಕುರಿತಾಗಿ ಮಾತನಾಡಿ, ಮಕ್ಕಳಿಗೆ ವಿವಿಧ ಪ್ರೋಜೆಕ್ಟ್ಗಳ ಮೂಲಕ, ಆಟೋಟಗಳ ಮೂಲಕ ಶಿಕ್ಷಾ ಸಪ್ತ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ವಿಜ್ಞಾನ ಶಿಕ್ಷಕ ರಾಘವೇಂದ್ರ, ಗಣಿತ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಹಾಗೂ ಸಂಗೀತ ಶಿಕ್ಷಕ ಪಂಚಾಕ್ಷರ ಕುಮಾರ ಸೇರಿದಂತೆ ಇತರೆ ಶಿಕ್ಷಕ ಸಿಬ್ಬಂದಿಗಳು ಹಾಜರಿದ್ದರು.