Breaking News

ಬೀದಿ ಬದಿ ವ್ಯಾಪಾರಸ್ಥರು ಪಿಎಂ ಯೋಜನೆ ಸದುಪಯೋಗ ಪಡೆದುಕೊಳ್ಳಿ : ಕಾಳೇಶ,,

Street traders take advantage of PM scheme: Kalesh

ಜಾಹೀರಾತು


ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ : ಬೀದಿ ಬದಿ ವ್ಯಾಪಾರಸ್ಥರಿಗೆ ದೀನ ದಯಾಳು ಯೋಜನೆಯಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಪ್ರತಿಯೋಬ್ಬ ವ್ಯಾಪಾರಸ್ಥರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ವ್ಯಾಪಾರ, ಉದ್ಯೋಗಗಳನ್ನು ಉನ್ನತಿಕರಿಸಲು ಮುಂದಾಗಬೇಕು ಎಂದು ಕುಷ್ಟಗಿ ಸರಸ್ವತಿ ಮಹಿಳಾ ಸಂಘದ ಸದಸ್ಯ ಕಾಳೇಶ ಹೇಳಿದರು.
ಜಿಲ್ಲಾಳಿತ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕೊಪ್ಪಳ ಮತ್ತು ಕುಕನೂರು ಪಟ್ಟಣ ಪಂಚಾಯತಿ ಸಹಯೋಗದೊಂದಿಗೆ ಸರಸ್ವತಿ ಸಾಂಸ್ಕ್ರೃತಿಕ ಮಹಿಳಾ ಸಂಘ (ರಿ) ಕುಷ್ಟಗಿಯವರು ಪಟ್ಟಣದ ಬಸ್ ನಿಲ್ದಾಣದ ಮುಂದೆ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ವ್ಯಾಪಾರಸ್ಥರಿಗೆ ಸ್ವನಿಧಿಯಿಂದ ವಿವಿಧ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಬಿ ಓ ಸಿ ಡಬ್ಲ್ಯೂ, ಪ್ರಧಾನ ಮಂತ್ರಿ ಜನನಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗಳನ್ನು ವ್ಯಾಪಾರಸ್ಥರ ಕಲ್ಯಾಣಕ್ಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಜಾಗೃತಿ ಗೀತೆಗಳನ್ನು ಹಾಡಿ ಅಭಿನಯಿಸುವ ಮೂಲಕ ತಿಳಿಸಿದರು.
ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕ್ ಖಾತೆ, ಆಧಾರ, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್ ವಿವಿಧ ಉದ್ಯೋಗಕ್ಕೆ ಸಂಬಂಧಿಸಿದ ದಾಖಲಾತಿ ನೀಡಿ ಮೊದಲ ಕಂತು 10ಸಾವಿರ, ಎರಡನೇ ಕಂತು 20 ಸಾವಿರ, ಮೂರನೇ ಕಂತು 50ಸಾವಿರ ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯತಿಯನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಪಟ್ಟಣದ ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಕಲ್ಲಪ್ಪ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ಲಲಿತಮ್ಮ ಹಿರೇಮಠ, ಬಸವರಾಜ ಕುಷ್ಟಗಿ, ಪಾರ್ವತಿ, ಚಂದ್ರಕಲಾ, ನಾಗಯ್ಯ ಹಿರೇಮಠ, ಶರಣಪ್ಪ, ನೀಲಪ್ಪ, ರಾಮಣ್ಣ ಜಾಗೃತಿ ಗೀತೆಗಳನ್ನು ಹಾಡಿ ಅಭಿನಯಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವಿಂದ್ರ ಬಾಗಲಕೋಟ, ಮೊಕ್ಷಮ್ಮ ಕೊಡ್ಲಿ, ಅಕ್ಕಮ್ಮ ದಿವಟರ್, ಸಿಬ್ಬಂದಿ ಪ್ರಕಾಶ ಬಂಡಿ, ಶ್ರೀಕಾಂತ ಬಾರಿಗಿಡದ ಇದ್ದರು.
ವರದಿ : ಪಂಚಯ್ಯ ಹಿರೇಮಠ,, 

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.