Breaking News

ಕೆ ಆರ್ ಎಸ್ ನಿಂದ ಹೆಚ್ವುವರಿ ನೀರು ಬಿಡುಗಡೆ ನದಿಯಂಚಿನ ಜನರಿಗೆ ಮುನ್ನೆಚ್ಚರಿಕೆಗೆ ಕ್ರಮ , ಉಪವಿಭಾಗ ಅಧಿಕಾರಿ ಮಹೇಶ್ ಸೂಚನೆ

Release of excess water from KRS, take precautionary measures for people along the river, sub-divisional officer Mahesh informed.

ಜಾಹೀರಾತು
IMG 20240726 WA0309 300x235


ವರದಿ : ಬಂಗಾರಪ್ಪ .ಸಿ
ಚಾಮರಾಜನಗರ /ಹನೂರು : ಕೆ ಆರ್ ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವುದರಿಂದ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಲಿದ್ದು ಪ್ರವಾಹ ಭೀತಿ ಎದುರಾಗಿದೆ.

ಕೆಆರ್‌ಎಸ್‌ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ಸ್ ಹಾಗೂ ಕಬಿನಿ ಜಲಾಶಯದಿಂದಲೂ ಭಾರಿ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವುದರಿಂದ ತಾಲೂಕಿನಲ್ಲಿರುವ ನದಿಪಾತ್ರದ ಗ್ರಾಮಗಳಾದ ದಾಸನಪುರ, ಹಳೇ ಅಣಗಳ್ಳಿ, ಹಳೇ ಹಂಪಾಪುರ,
ಎಡಕುರಿಯಾ, ಮುಳ್ಳೂರು ಗ್ರಾಮಗಳು ಮುಳುಗಡೆಯಾಗಲಿವೆ. ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ದವಾಗಿರುವ ತಾಲೂಕು ಆಡಳಿತ ಈ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದರೆ ಅಲ್ಲಿನ ಜನರನ್ನು ಬೇರೆಡೆ ಸ್ಥಳಾಂತರಿಸಲು ಕ್ರಮವಹಿಸಿದೆ. ಅಲ್ಲದೇ ಕೊಳ್ಳೇಗಾಲ, ಸತ್ತೇಗಾಲ, ಮುಳ್ಳೂರು ಸೇರಿದಂತೆ 6 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಿದ್ದು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಾದ ಮುನ್ನೆಚರಿಕೆ ಕ್ರಮಕೈಗೊಳ್ಳಲಾಗಿದೆ ,ಈಗಾಗಲೇ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಜಿಲ್ಲೆಯ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎಂದು ತಿಳಿಸಿದರು .

About Mallikarjun

Check Also

screenshot 2025 11 19 18 50 08 70 6012fa4d4ddec268fc5c7112cbb265e7.jpg

ಸುಳ್ವಾಡಿ ದುರಂತಕ್ಕೆ ಕಾರಣರಾದ ಇಮ್ಮಡಿ ಮಹಾದೇವಸ್ವಾಮಿಗೆ ಜಾಮೀನು ಸಂತ್ರಸ್ತರ ಆಕ್ರೋಶ . Victims' anger over bail granted to …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.