Breaking News

ಪ್ರಾಥಮಿಕ ಹಾಗೂ ಪ್ರೌಡ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮುಖ್ಯ : ಮಾಲಗಿತ್ತಿ,,

Legal awareness is important for students at primary and advanced level: Malagitthi

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ( ಯಲಬುರ್ಗಾ) ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಜ್ಞಾನ ಹೊಂದಿರಬೇಕು ಎಂದು ಯಲಬುರ್ಗಾ ಆರಕ್ಷಕ ಠಾಣೆಯ ಎಎಸ್ಐ ಪಿಎಸ್ ಬಸವರಾಜ ಮಾಲಗಿತ್ತಿ ವಿದ್ಯಾರ್ಥಿಗಳಿಗೆ ಹೇಳಿದರು.

ಪಟ್ಟಣದ ಜ್ಞಾನ ಸಾಗರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಲಬುರ್ಗಾ ಆರಕ್ಷಕ ಠಾಣೆ ವತಿಯಿಂದ ಠಾಣಾ ಪಿಎಸ್ ಐ ವಿಜಯ ಪ್ರತಾಪ್ ಇವರ ನೇತೃತ್ವದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತೆರೆದಮನೆ ಕಾರ್ಯಕ್ರಮದಲ್ಲಿ ಮಾತನಾಡಿ ಪೋಲಿಸ್ ಇಲಾಖೆಯ ದೈನಂದಿನ ಕರ್ತವ್ಯದ ಬಗ್ಗೆ ಹಾಗೂ ಎಫ್ಐಆರ್, ಚಾರ್ಜಶಿಟ್ ದಾಖಲಿಸುವ ಕುರಿತು ಯು ಡಿ ಆರ್ ಹಾಗೂ ಪೋಸ್ಕೋ, ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ತಿಳಿಸಿದರು.

ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಮಕ್ಕಳ ಕಳ್ಳ ಸಾಗಾಣಿಕೆ, ಅಮಲು ಬರಿಸುವ ಮಧ್ಯ ಮಾದಕಗಳು, ತಂಬಾಕು ಉತ್ಪನ್ನಗಳ ಬಗ್ಗೆ ಸದಾ ಮಹಿಳೆಯರು ಮಕ್ಕಳು ಜಾಗೃತರಾಗಿರಬೇಕು.

ಬಾಲ್ಯ ವಿವಾಹಗಳು ನಡೆದಲ್ಲಿ ಮಕ್ಕಳ ಸಹಾಯವಾಣಿ 1098, ಇಲ್ಲವೇ ಪೋಲಿಸ್ ಸಹಾಯವಾಣಿ 112 ಕರೆ ಮಾಡಿ ಬಾಲ್ಯ ವಿವಾಹ ನಡೆಯುವುದನ್ನು ತಡೆಗಟ್ಟಬೇಕು, ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21ವರ್ಷ ತುಂಬಿರಬೇಕು ಎಂದು ತಿಳಿಸಿದರು.

ಬಾಲ ಕಾರ್ಮಿಕ ಪದ್ದತಿಯನ್ನು ಹೊಗಲಾಡಿಸಿ ಮಕ್ಕಳು ಓದುವ ಹಂತದಲ್ಲಿ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಹಾಗೂ ಮದ್ದು, ಬಂದೂಕು, ಗುಂಡುಗಳ ಮಹತ್ವ ಅರಿತಿರಬೇಕು ಎಂದು ಅದರ ಬಗ್ಗೆತಿಳಿಸಿದರು.

ಈಸಂದರ್ಭದಲ್ಲಿ ಪೋಲಿಸ್ ಮಹಿಳಾ ಪೇದೆ ಹುಸೇಂಬಿ, ಹಾಗೂ ಶಾಲಾ ಸಹ ಶಿಕ್ಷಕರಾದ ವಿನಯ್ ಹಿರೇಮಠ, ಶ್ರೀಮತಿ ನಿರ್ಮಲಾ ಶ್ರೀಗಿರಿ ಇನ್ನಿತರ ಸಿಬ್ಬಂದಿಯವರು ಇದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.