A special government school in Gangavati,
Nali Kali furniture launch event
ಗಂಗಾವತಿ: ತಾಲ್ಲೂಕಿನ ವಿರುಪಾಪುರದ ಹೆಚ್.ಆರ್.ಜಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ-೨೪ ರಂದು ನಲಿ ಕಲಿ ಪೀರೋಪಕರಣ ಮತ್ತು ಕಲಿಕೋಪಕರಣಗಳ ಅನಾವರಣವನ್ನು ಮುನಿರಾಬಾದ್ ಡೈಯಟ್‌ನ ಹಿರಿಯ ಉಪನ್ಯಾಸಕರಾದ ಶ್ರೀಯುತ ಸೋಮಶೇಖರ್‌ಗೌಡ ಪಾಟೀಲ್ ರವರು ಮಾಡಿದರು ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಹಕ್ಕಂಡಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೋಮಶೇಖರಗೌಡ ಪಾಟೀಲ್‌ರವರು, ‘ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕು. ಈ ಶಾಲೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದು, ಮಕ್ಕಳ ದಾಖಲಾತಿಯಂತೆ ಹಾಜರಾತಿ ಕೂಡ ಇರುವುದು ಕಲಿಕಾ ವಾತಾವರಣದ ಪೂರಕತೆಗೆ ಹಿಡಿದ ಕನ್ನಡಿಯಾಗಿದೆ. ಮುಖ್ಯ ಗುರುಗಳ ಪರಿಶ್ರಮ ಚೆನ್ನಾಗಿದ್ದು, ಶಾಲೆಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದಾರೆ’ ಎಂದು ಹೇಳಿದರು. ನಂತರ ಮಾತನಾಡಿದ ಅವರು ಈ ತರಗತಿ ಶಿಕ್ಷಕರು ಕೂಡ ಉತ್ತಮ ಬೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ಶಾಲೆ ನಗರದಲ್ಲಿ ವಿಶೇಷ ಶಾಲೆಯಾಗಿದೆ. ಇಲ್ಲಿ ಎಲ್ಲ ಮಕ್ಕಳು ದಲಿತ ಮತ್ತು ಹಿಂದುಳಿದ ಕುಟುಂಬದಿAದ ಬಂದ ಮಕ್ಕಳಾಗಿವೆ. ಶಾಲೆಯಲ್ಲಿ ಕಲಿಕೆ ಉತ್ತಮವಾಗಿದ್ದು, ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ತಯಾರಿ ಮಾಡುವಂತೆ ಸಲಹೆ ನೀಡಿದರು. ಮುಖ್ಯ ಗುರುಗಳಾದ ಶರಣಪ್ಪ ಹಕ್ಕಂಡಿ ಸಂಘಟನೆಯ ಜೊತೆಗೆ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಶೈಕ್ಷಣಿಕ ಪ್ರಗತಿಗಾಗಿ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎಲ್ಲಾ ಸರಕಾರಿ ಶಾಲೆಗಳು ಈ ರೀತಿ ಆಗಬೇಕು ಎಂದು ಹೇಳಿದರು. ಶಾಲೆಗೆ ನಲಿ ಕಲಿ ಟೇಬಲ್ ಮತ್ತು ಚೇರುಗಳನ್ನು ದಾನವಾಗಿ ನೀಡಿರುವ ಬೇತಲ್ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಹೇಮಾ ಮೇಡಂ ರವರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಅಧಿಕಾರಿಗಳಾದ ಸುರೇಶ್‌ಗೌಡ, ಬಿ.ಆರ್.ಸಿ ಆಗಿರುವ ಮಂಜುನಾಥ್, ಗಂಗಾವತಿಯ ವಲಯದ ಶಿಕ್ಷಣ ಸಂಯೋಜಕರಾದ ರಾಘವೇಂದ್ರ, ಶಿಕ್ಷಣ ಪ್ರೇಮಿಗಳಾದ ವೀರೇಶ್ ಸುಳೆಕಲ್ ಹಿರೇಜಂತಕಲ್, ಕ್ಲಸ್ಟರ್‌ನ ಸಿ.ಆರ್.ಪಿ ಗಳಾದ ದೇವೇಂದ್ರ, ದೇವಣ್ಣ ನಾಯಕ, ಮುಕ್ಕಣ್ಣ, ರಾಮಣ್ಣನವರು ಹಾಗೂ ಶಾಲೆಯ ನಿವೃತ್ತ ಶಿಕ್ಷಕರಾದ ಶಿವಪ್ರಸಾದ್ ಹಿರೇಮಠ ಮತ್ತು ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಶ್ರೀದೇವಿ ಹಟ್ಟಿ, ಶ್ರೀಮತಿ ಆಶಾರಾಣಿ ಸಿ.ಎನ್., ಎಸ್‌ಡಿಎಂಸಿಯ ಉಪಾಧ್ಯಕ್ಷರಾದ ಬಾನುಬೇಗಮ್, ಸದಸ್ಯರಾದ ಝರೀನಾ, ಸೌಮ್ಯ ಹಾಗೂ ಹಿರೇಜಂತಕಲ್ ಕ್ಲಸ್ಟರ್‌ನ ಎಲ್ಲ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.