Breaking News

ದಲಿತರನ್ನ ಸಾಗುವಳಿ ಜಮೀನಿನಿಂದ ಒಕ್ಕಲೆಬ್ಬಿಸಿಲು ಯತ್ನ ಮುಖಂಡರ ಆಕ್ರೋಶ.

Outrage of the leaders of the attempt to evict the Dalits from the cultivated land.

ಜಾಹೀರಾತು

ತಿಪಟೂರು: ತಾಲ್ಲೋಕಿನ ಮರಿಸಿದ್ದಯ್ಯನಪಾಳ್ಯ ಗ್ರಾಮದಲ್ಲಿ ಸಾಗುವಳಿ ಮಾಡಿ ಜೀವನ ನಡೆಸುತ್ತಿರುವ ದಲಿತರನ್ನ ಪಟ್ಟಭದ್ರಹಿತಾಸ್ತಿಗಳು ಒಕ್ಕಲೆಬ್ಬಿಸಲು, ನಿರಂತರವಾಗಿ ಪ್ರಯತ್ನಿಸುತ್ತಿರುವುದನ್ನ ಖಂಡಿಸಿ ಕರ್ನಾಟಕ ಭೀಮ್ ಸೇವೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿನ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಭೀಮ್ ಸೇನೆ ತಾಲ್ಲೋಕು ಆಧ್ಯಕ್ಷ ಮಂಜುನಾಥ್ ,ತಿಪಟೂರು ತಾಲ್ಲೋಕಿನ ಬಿ.ಗೌಡನಕಟ್ಟೆ ಗ್ರಾಮದ ಸರ್ವೆನಂಬರ್ 52 ರಲ್ಲಿ ಮರಿಸಿದ್ದಯ್ಯನಪಾಳ್ಯ ಗ್ರಾಮದ ಲಕ್ಷ್ಮಯ್ಯ ಬಿನ್ ದೊಡ್ಡಯ್ಯ 20 ಗುಂಟೆ ಜಮೀನು ಹಾಗೂ ಸರ್ವೇ ನಂಬರ್ 53ರಲ್ಲಿ ಚಂದ್ರಯ್ಯ ಬಿನ್ ವಗ್ಗಯ್ಯ ಎಂಬುವವರು 19 ಗುಂಟೆ ಗ್ರಾಮದ ಚಂದ್ರಯ್ಯ s/o ವಗ್ಗಯ್ಯ ಸರ್ವೇ ನಂಬರ್ 53 ರಲ್ಲಿ 19 ಗುಂಟೆ ಮತ್ತು ಗೋವಿಂದಪ್ಪ ಬಿನ್ ದಾಸಪ್ಪ ಎಂಬುವವರು ಒಂದು ಎಕರೆ ಜಮೀನಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ
ಆದರೆ ಗ್ರಾಮದ ರಾಜಕೀಯ ಪ್ರಭಾವುಳ್ಳ ಪಟ್ಟಭದ್ರಹಿತಾಸ್ತಿಗಳ ಕುಮ್ಮಕ್ಕಿನಿಂದ ಅಧಿಕಾರಿಗಳು ದಲಿತರನ್ನ ಒಕ್ಕಲೆಬ್ಬಿಸಲು ಯತ್ನಿಸುತ್ತಿರುವುದು, ಖಂಡನೀಯ, ಮುವತ್ತು ನಲವತ್ತು ವರ್ಷಗಳಿಂದ ಭೂಮಿಯನ್ನೆ ನಂಬಿ ಜೀವನ ನಡೆಸುತ್ತಿರುವ ದಲಿತರಿಗೆ ಸಾಗುವಳಿ ಚೀಟಿ ನೀಡಬೇಕು, ಗ್ರಾಮದಲ್ಲಿ ಸಾಕಷ್ಟು ಗೋಮಾಳದ ಜಮೀನು ಖಾಲಿಯಿಂದ ಆ ಭೂಮಿಯನ್ನ ಸರ್ಕಾರಿ ಸ್ಮಶಾನ,ಹಾಗೂ ವಸತಿ ಉದೇಶಕ್ಕಿ ಮೀಸಲಿಡಬೇಕು, ಸರ್ಕಾರ ಪಟ್ಟಭದ್ರರ ಕುಮ್ಮಕ್ಕಿಗೆ ಒಳಗಾದರೇ ಕರ್ನಾಟಕ ಭೀಮ್ ಸೇನೆ ತಾಲ್ಲೋಕಿನ ದಲಿತಪರ ಸಂಘಟನೆಗಳೊಂದಿಗೆ ಉಗ್ರಹೋರಾಟ ಮಾಡುವುದಾಗಿ ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೋಕ್ ಅಧ್ಯಕ್ಷ ಟಿ.ರಾಜು ಬೆಣ್ಣೆನಹಳ್ಳಿ ಮಾತನಾಡಿ ರಾಜ್ಯದ ಹಲವಾರು ತಾಲ್ಲೋಕುಗಳಲ್ಲಿ ಬಗರ್ ಹುಕ್ಕು ಸಾಗುವಳಿ ಚೀಟಿ ನೀಡಿ ಬಡವರು ಬದುಕಲು ದಾರಿ ಮಾಡಿಕೊಟ್ಟರೆ, ತಾಲ್ಲೋಕಿನ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಪರಿಣಾಮ, ಕಳೆದ 20 ರ್ಷಗಳಿಂದ ಬಡರೈತರಿಗೆ ಸಾಗುವಳಿ ಚೀಟಿ ನೀಡದೆ,ಅಡ್ಡಗತ್ತರಿಗೆ ಸಿಲುಕಿಸಿದ್ದಾರೆ,
ಶಾಸಕರು ಕೂಡಲೇ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು, ಹಾಗೂ ತಾಲ್ಲೋಕಿನಲ್ಲಿ ದಲಿತರಿಗೆ ಸರ್ಕಾರಿ ಸ್ಮಶಾನಕ್ಕೆ, ಹಾಗೂ ವಸತಿಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಲಕ್ಷ್ಮಯ್ಯ.ದಾಸಪ್ಪ.ಮಂಜುನಾಥ್.ಸೇರಿದಂತೆ ಅನೇಕರು ಉಪಸ್ಥಿತರಿಸರು

About Mallikarjun

Check Also

ಕೋಲೆ ಅರೋಪಿಗಳನ್ನು ಬಂಧಿಸುವವರೆಗೂ ಸೂಕ್ತವಾದಭದ್ರತೆಯನ್ನು ನೀಡಿ: ಶಾಂತಮ್ಮ

Provide adequate security till arrest of Kole accused: Shanthamma ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.