Breaking News

ಹನೂರು: ಪಟ್ಟಣದಲ್ಲಿ ವಿಶ್ವಮಾನವ ಒಕ್ಕಲಿಗರ ಸಂಘದ ವತಿಯಿಂದ ಶ್ರೀ ನಾಡಪ್ರಭುಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವಿಜೃಂಭಣೆಯಿಂದ ಜರುಗಿತು.

Hanur: Sri Nada Prabhu Kempegowda’s 515th birth anniversary program organized by Vishwamanava Okkaligar Sangh was celebrated with great pomp in the town.

ಜಾಹೀರಾತು

ವರದಿ: ಬಂಗಾರಪ್ಪ ,ಸಿ .
ಹನೂರು :ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಬೆಳ್ಳಿರಥದಲ್ಲಿ ಕೂರಿಸಲಾಗಿದ್ದ ಶ್ರೀ ನಾಡಪ್ರಭು ಕೆಂಪೇಗೌಡ ಪುತ್ತಳಿಗೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಸಮಾಜದ ಹಿರಿಯ ಮುಖಂಡ ರು ಮಾಜಿ ಶಾಸಕ ಆರ್ ನರೇಂದ್ರ ರವರು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ ಮಾತನಾಡಿ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಜಯಂತಿ ದೇಶಾದ್ಯಂತ ಮೂಲೆ ಮೂಲೆಯಲ್ಲಿ ಆಚರಣೆ ಮಾಡುತ್ತಿದ್ದೇವೆ, ನಾಡಿನ ಜಯಂತಿಗಳು ನಡೆಯುತ್ತಿವೆ ಎಂದರೆ ಅದರ ಹಿಂದೆ ವಿಶೇಷವಾದ ಭಾವನೆಗಳು ಇರುತ್ತವೆ, ಮಹನೀಯರ ಜಯಂತಿ ಆಚರಣೆ ಮಾಡುವ ನಾವು ಅವರ ಬದುಕು ಅವರ ಹೋರಾಟವನ್ನು ನಾವು ಅನುಸರಿಸಬೇಕು, ನಮ್ಮ ಪೂರ್ವಿಕರು ಕೊಟ್ಟಿರುವಂತ ಹಬ್ಬಗಳು, ಜಯಂತಿ ಮಾಡುವುದರಿಂದ ಒಗ್ಗಟ್ಟು ಬೆಳೆಯುತ್ತದೆ, ಬುದ್ಧ, ಬಸವ ಅಂಬೇಡ್ಕರ್, ಕುವೆಂಪು ಎಲ್ಲಾ ನಾಯಕರುಗಳು ಕೂಡ ನಾಡಿಗೆ ಅತ್ಯಂತ ಮರೆಯಲಾಗದ ಕೊಡುಗೆಯನ್ನು ಕೊಟ್ಟಿದ್ದಾರೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳಿದ್ದಾರೆ ಅದನ್ನು ಅನುಸರಿಸುತ್ತ ಕೆಂಪೇಗೌಡರು ಕಟ್ಟಿದ್ದ ಬೃಹತ್ ಬೆಂಗಳೂರು ಸರ್ವ ಜನಾಂಗದ ಜನರಿಂದ ಕಂಗೊಳಿಸುತ್ತಿದೆ.

ನಮ್ಮ ಪೂರ್ವಿಕರು ಅವರದ್ದೇ ಆದ ವಿಶೇಷ ಕೊಡುಗೆಯನ್ನು ನಾಡಿಗೆ ಕೊಟ್ಟಿದ್ದಾರೆ. ಅದನ್ನು ನಾವು ಅನುಸರಣೆ ಮಾಡುವ ಮೂಲಕ ಉತ್ತಮ ಜಗತ್ತನ್ನು ನಿರ್ಮಾಣ ಮಾಡುವಂತವರಾಗಬೇಕು ನಮ್ಮ ಮಕ್ಕಳಿಗೆ ಎಲ್ಲಾ ಪೂರ್ವಿಕರ ಚರಿತ್ರೆಯನ್ನು ತಿಳಿಸುವ ಜೊತೆಗೆ ಜೀವನದಲ್ಲಿ ನಗು ನಗುತ ಬಾಳೋಣ ಭಗವಂತ ಕೊಟ್ಟಿರೋ ಜೀವನ ಅಮೂಲ್ಯವಾದದ್ದು ಅದನ್ನು ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಸದಾ ಯೋಚನೆ ಮಾಡೋಣ ಮಾನವೀಯತೆಯನ್ನು ಜಗತ್ತಿಗೆ ಸಾರೋಣ ಎಂದು ತಿಳಿಸಿದರು.

ಇನ್ನು ಕಳೆದ ಮೂರು ವರ್ಷಗಳಿಂದ ಹನೂರಿನ ಯುವಕರು ಒಳ್ಳೆಯ ಸಂಘಟಿತರಾಗಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘಟಿತರಾಗಿ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಅವರ ತತ್ವ ಆದರ್ಶಗಳನ್ನು ತಮ್ಮ ಮೈಗೂಡಿಸಿಕೊಳ್ಳಬೇಕು ಎಂದು ಯುವಕರಿಗೆ ಶುಭ ಹಾರೈಸಿದರು.

ಮೆರವಣಿಗೆಯಲ್ಲಿ ಕೇರಳದ ಚಂಡಿ ವಾದ್ಯ, ಡೊಳ್ಳು ಕುಣಿತ ವೀರಗಾಸೆ, ಬೊಂಬೆ ಕುಣಿತ, ದೊಣ್ಣೆ ವರಸೆ, ಹಳ್ಳಿಕಾರ್ ಜೋಡ್ ಎತ್ತುಗಳು ನೋಡುಗರ ಕಣ್ಮನ ಸೆಳೆಯಿತು.

ಶ್ರೀ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮಗಳಿಂದ ಒಕ್ಕಲಿಗ ಸಮಾಜದವರು ಆಗಮಿಸಿದ್ದು ವಿಶೇಷವಾಗಿತ್ತು.

ಇದೇ
ಕಾರ್ಯಕ್ರಮದಲ್ಲಿ ಶಾಸಕ ಎಂ ಆರ್ ಮಂಜುನಾಥ್, ಮಾಜಿ ಶಾಸಕರುಗಳಾದ ಆರ್ ನರೇಂದ್ರ,ಪರಿಮಳ ನಾಗಪ್ಪ , ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದತ್ತೇಶ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಗಂಗಾಧರ್, ನಿರ್ದೇಶಕ ಮಂಜೇಗೌಡ, ಜಿಲ್ಲಾಧ್ಯಕ್ಷ ಎಲ್ ನಾಗೇಂದ್ರ,ವಿಶ್ವಮಾನವ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗರಾಜುಗೌಡ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಟಿ ಹೆಚ್ ಓ ಪ್ರಕಾಶ್, ಇ ಒ ಉಮೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ನಟರಾಜ್ ಗೌಡ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಗಿರೀಶ್, ಹರೀಶ್ ಆನಂದ್ ಕುಮಾರ್, ತಾಲ್ಲೂಕು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಬಂಗಾರಪ್ಪ ಸಿ , ಮುಖಂಡರುಗಳಾದ ಪತ್ರಕರ್ತರಾದ ಚೇತನ್ ,ಕಾರ್ತಿಕ್ ,ರವಿ ,ಪ್ರಸನ್ನ ಕುಮಾರ್ , ಹಾಗೂ ಮಾದೇಶ್ , ನಟರಾಜು, ಶಶಿಕುಮಾರ್ ,ಪ್ರತಾಪ್, ರಾಜೂಗೌಡ ,ರಾಜೇಂದ್ರ , ಹನೂರು ಕೊಳ್ಳೇಗಾಲ ಒಕ್ಕಲಿಗರ ಸಂಘದ ನಿರ್ದೇಶಕ ಮಂಜೇಶ್ , ಸೇರಿದಂತೆ ಸಮಾಜದ ಮುಖಂಡರುಗಳು ಹಾಜರಿದ್ದರು.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.