Breaking News

ಅಂಗನವಾಡಿ ಪ್ರವೇಶೋತ್ಸವಕ್ಕೆ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ ಚಾಲನೆ….

District Narrator Gangappa Drives to Anganwadi Entrance Festival…

ಜಾಹೀರಾತು



ಗಂಗಾವತಿ,25:ನಗರದ ಹಿರೇಜಂತಕಲ್ ಬಸವ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ
2024 -25ರ ಸಾಲಿನ ಪ್ರವೇಶ ಆರಂಭಕ್ಕೆ ಕೇಂದ್ರದ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ ಅವರು ಬುಧವಾರದಂದು ಚಾಲನೆ ನೀಡಿದರು ಬಳಿಕ ಮಾತನಾಡಿದ ಗಂಗಪ್ಪ ಅವರು ಶಾಲೆಗೆ ಹೊರಟರೇ ಮಗು ದೇಶಕ್ಕೆ ಅದವೇ ನಗು, ವಿದ್ಯಾರ್ಥಿ ಜೀವನಕ್ಕೆ ಅಂಗನವಾಡಿ ಈ ಹಿನ್ನೆಲೆಯಲ್ಲಿ ಪಾಲಕರು ತಮ್ಮ ನಾಲ್ಕು ವರ್ಷದ ಮಕ್ಕಳನ್ನು ಅಂಗದವಾಡಿಗ ದಾಖಲಿಸಿ ಮುಂದಿನ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು ಜೊತೆಗೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಯೋಗ, ಮಕ್ಕಳಿಂದ ಸಂಭಾಷಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ಬಂತು ಹಾಗೂ ಅಂಗನವಾಡಿಯ ವಿಶೇಷತೆ ಕುರಿತು ಮಾತನಾಡಿ ಇಲ್ಲಿನ ಮಕ್ಕಳಿಗೆ ಪಾಲಕರು ಸೇರಿದಂತೆ ಶಿಕ್ಷಕರು ಶ್ರಮವಹಿಸಿ ಮಕ್ಕಳಿಗೆ ಸಮವಸ್ತ್ರವನ್ನು ನಿಗದಿಪಡಿಸಿ ಶಿಕ್ಷಣ ನೀಡುತ್ತಿರುವುದು ಇತರ ಅಂಗನವಾಡಿಗಳಿಗೆ ಪ್ರೇರಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯ ಶ್ರೀಮತಿ ಅರ್ಚನಾ ರಾಘವೇಂದ್ರ ಶೆಟ್ಟಿ ಮಾತನಾಡಿ ಹಿರೇ ಜಂತಕಲ್ ಇ ವಲಯ ಅಂಗನವಾಡಿ ಕೇಂದ್ರದ ಕಾರ್ಯಕರ್ತರ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸುವುದರ ಮೂಲಕ ಪ್ರವೇಶ ಆರಂಭಕ್ಕೆ ಚಾಲನೆ ನೀಡಿದ್ದು ಸಂತಸವಾಗಿದೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ದಾಖಲಿಸುವುದರ ಮೂಲಕ ಮುಂದಿನ ಗುಣಮಟ್ಟದ ಶಿಕ್ಷಣಕ್ಕೆ ದಾರಿ ದೀಪವಾಗಬೇಕೆಂದು ಕರೆ ನೀಡಿದರು ಈ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಶಿಕ್ಷಕರು ಅತ್ಯಂತ ಕಾಳಜಿ ವಹಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಂಗಾವತಿ ಶಿಶು ಅಭಿವೃದ್ಧಿ ಅಧಿಕಾರಿ ಪ್ರವೀಣ್ ಹೇರೂರು, ನಗರಸಭಾ ಸದಸ್ಯರಾದ ಹುಲಿಗಮ್ಮ ಕಿರಿಕಿರಿ ಅಂಗನವಾಡಿ ಜಿಲ್ಲಾ ಸಂಯೋಜಕ ಅಶೋಕ್, ಅಂಗನವಾಡಿ ಹಿರಿಯ ಮೇಲ್ವಿಚಾರಕರಾದ ಶರಣಮ್ಮ ನಾಲ್ವಡ, ಸಾವಿತ್ರಿ ,ವಿದ್ಯಾವತಿ,ಈರಮ್ಮ,ಶಾರದಮ್ಮ, ಅಂಗನವಾಡಿ ಶಿಕ್ಷಕಿಯರಾದ ಸಾವಿತ್ರಿ ಜ್ಯೋಶಿ,ಸುನಿತಾ ಅರುಣಕುಮಾರ,ಶರಣಮ್ಮ‌ಕಲ್ಮಾಠ,ಮೈಹಿಮುದ್ ಬೇಗಂ,ನೀಲಮ್ಮ, ಗಿರಿಜಾಮ್ಮ ದರೋಜಿ,
ಸಿದ್ದಪ್ಪ ಕುರಿ , ದಾನಪ್ಪ ಹೆಚ್ ಸುರೇಶ್ ಮುಖ್ಯೋಪಾಧ್ಯಾಯ ಶರಣಪ್ಪ ಸೇರಿದಂತೆ ಎಲ್ಲಾ ಅಂಗನವಾಡಿ ಶಿಕ್ಷಕರು ಮಕ್ಕಳ ಪಾಲಕರು ಹಾಗೂ ಬಾಲವಿಕಾಸ ಸಮಿತಿ ಸದಸ್ಯರು ಸೇರಿದಂತೆ ಇತರರು ಇದ್ದರು

About Mallikarjun

Check Also

ಕೋಲೆ ಅರೋಪಿಗಳನ್ನು ಬಂಧಿಸುವವರೆಗೂ ಸೂಕ್ತವಾದಭದ್ರತೆಯನ್ನು ನೀಡಿ: ಶಾಂತಮ್ಮ

Provide adequate security till arrest of Kole accused: Shanthamma ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.