Breaking News

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಉಂಡೆನಾಮ ಹಾಕಿದ ನಿರ್ಮಲಾ ಸೀತಾರಾಮನ್ : ಕನಕಪ್ಪ ಮಳಗಾವಿ

ವರದಿ : ಪಂಚಯ್ಯ ಹಿರೇಮಠ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕನಕಗಿರಿ : ಮೋದಿ ಮೂರನೇ ಬಾರಿ ಅಧಿಕಾರ ಹಿಡಿದ ಬಳಿಕ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಲಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಕ್ಕೆ ಉಂಡೆನಾಮ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಕೊಪ್ಪಳ ಜಿಲ್ಲಾಧ್ಯಕ್ಷರಾದ ಕನಕಪ್ಪ ಮಳಗಾವಿಯವರು ಕಿಡಿ ಕಾರಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮೇಕೆದಾಟು ಸಮಾನಾಂತರ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ರಾಜ್ಯಕ್ಕೆ ನಾಮ ಹಾಕಲಾಗಿದೆ ಎಂದು ಹೇಳಿದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಅದಕ್ಕೂ ಕೇಂದ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ. ಬೆಂಗಳೂರಿನಲ್ಲಿ 60 ಕಿಮೀ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಕೂಡ ಪ್ರಸ್ತಾಪ ಮಾಡಿಲ್ಲ ಎಂದರು.

ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೋ ಮಾರ್ಗ ವಿಸ್ತರಣೆ ಮಾಡುವ ಬಗ್ಗೆ ಮತ್ತು 44.65 ಕಿ.ಮೀ ಉದ್ದದ ಮೂರನೇ ಹಂತದ ಮೆಟ್ರೋ ಹಂತದ ವಿಸ್ತರಣೆ ಬಗ್ಗೆ ಕೂಡ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. 37 ಕಿ.ಮೀ. ಹೆಬ್ಬಾಳ-ಸರ್ಜಾಪುರ ಯೋಜನೆಗೆ ಕೂಡ ಉಂಡೇನಾಮ ಹಾಕಿದ್ದಾರೆ ಎಂದರು.

ರಾಜ್ಯ ಸರ್ಕಾರದ ಹೊಸ ಹೆದ್ದಾರಿ ಯೋಜನೆಗಳಾದ ಗುಂಡ್ಲುಪೇಟೆ, ನಂಜನಗೂಡು ಮತ್ತಯ ಮೈಸೂರು ಮೂಲಕ ಕೊಳ್ಳೆಗಾಲ-ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766 ಅಗಲೀಕರಣ ಯೋಜನೆಯನ್ನು ಕಡೆಗಣಿಸಲಾಗಿದೆ ಎಂದು ಜಿಲ್ಲಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿಕ ಪಕೋಡ ಮಾಡಿ ಎಂದಿದ್ದರು. ಈಗ ಪ್ರತಿ ವರ್ಷ 75 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳುವ ಮೂಲಕ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ ಎಂದರು. 75 ಲಕ್ಷ ಉದ್ಯೋಗ ಕೊಡುತ್ತೇನೆ ಎನ್ನುವ ಇವರು ಪ್ರತಿ ವರ್ಷ 4 ಕೋಟಿ ವಿದ್ಯಾರ್ಥಿಗಳಿಗೆ ಸ್ಕಿಲ್ ತರಬೇತಿ ಕೊಡುವುದಾಗಿ ಹೇಳಿದ್ದಾರೆ ಉಳಿದ 3.25 ಕೋಟಿ ಮಂದಿ ಏನು ಮಾಡಬೇಕು ಎಂದರು.

ರೈತರ ಆದಾಯ ದ್ವಿಗುಣವಾಗಿಲ್ಲ, ಭಾರತ ಇನ್ನೂ ಗುಡಿಸಲು ಮುಕ್ತವಾಗಿಲ್ಲ, 370 ಕಾಯಿದೆ ಮೂಲಕ ವಿಶೇಷ ಸ್ಥಾನಮಾನ ನೀಡಿದ ಜಮ್ಮು ಮತ್ತು ಕಾಶ್ಮೀರ ಇನ್ನೂ ಉಗ್ರರಿಂದ ಮುಕ್ತವಾಗಿಲ್ಲ, ಪ್ರತಿ ಮನೆಗೂ ವಿದ್ಯುತ್ ಕೊಟ್ಟಿಲ್ಲ ಇದೆಲ್ಲವೂ ಮೋದಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ, 100 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುವುದಾಗಿ ಮೋದಿ ಮತ್ತೊಂದು ಟೋಪಿ ಹಾಕಿದ್ದಾರೆ ಎಂದರು.

ಎಲ್ಲಿ ಸರ್ಕಾರ ಬೀಳುತ್ತದೋ ಎನ್ನುವ ಭಯದಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇವರಿಗೆ ಸರ್ಕಾರ ಭದ್ರಪಡಿಸಿಕೊಳ್ಳಬೇಕೆ ಹೊರತು ಅಭಿವೃದ್ಧಿ ಬೇಕಿಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ತೆರಿಗೆ ವಿನಾಯಿತಿ ಸಿಗುತ್ತದೆ ಎಂದು ಕಾಯುತ್ತಿದ್ದು ಮಧ್ಯಮ ವರ್ಗದವರಿಗೆ ನಿರಾಸೆ ಮಾಡಿದ್ದಾರೆ. ಸ್ಟಾಡಂರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂ. ಗಳಿಂದ 75,000 ರೂ. ಗಳಿಗೆ ಮಾಡಿರುವುದಕ್ಕೆ ಮಧ್ಯಮ ವರ್ಗ ವಿರೋಧ ವ್ಯಕ್ತಪಡಿಸಿದೆ ಎಂದರು.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯವನ್ನು ಕಡೆಗಣಿಸಿರುವುದನ್ನು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *