Viramma of Dasanala village died

ಗಂಗಾವತಿ: ದಾಸನಾಳ ಗ್ರಾಮದ ವಿರಮ್ಮ ಗಂಡ ವೀರಭದ್ರಗೌಡ್ರು (81) ಸೋಮವಾರ ರಾತ್ರಿ 11.30 ಕ್ಕೆ ನಿಧನರಾಗಿದ್ದಾರೆ.
ಖಾಸಿಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರು, ವೀರಶೈವ ಲಿಂಗಾಯತ ಮಹಾವೇದಿಕೆಯ ರಾಜ್ಯ ಸದಸ್ಯರಾದ ಆರ್.ದೇವಾನಂದ್ ಇವರು ತಾಯಿಯವರಾಗಿದ್ದು. ಏಳು ಜನ ಪುತ್ರರು ಹಾಗೂ ಮೂರು ಜನ ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಇಂದು 23.07.2024 ರಂದು ಮದ್ಯಹ್ನ 2.30 ಕ್ಕೆ ದಾಸನಾಳ ಗ್ರಾಮದ ತಮ್ಮ ತೋಟದಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.