Breaking News

ಕೃಷಿ,ನೀರಾವರಿ ಹಾಗೂ ಕಾರ್ಮಿಕರಹೋರಾಟಕ್ಕೆ ಪತ್ರಕರ್ತ ಕೆ.ನಿಂಗಜ್ಜ ಧ್ವನಿಯಾಗಿದ್ದಾರೆ:ರೈತ ಮುಖಂಡ ಶರಣಪ್ಪ ದೊಡ್ಮನಿ.

Journalist K. Ningajja is a voice for agriculture, irrigation and labor struggle: farmer leader Sharanappa Dodmani.

ಜಾಹೀರಾತು


ಗಂಗಾವತಿ: ಕೃಷಿ, ನೀರಾವರಿ ಮತ್ತು ಕಾರ್ಮಿಕ ಹೋರಾಟಕ್ಕೆ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅವರು ಧ್ವನಿಯಾಗಿ ಜನಮಾನಸದಲ್ಲಿ ಚಾಪು ಮೂಡಿಸಿದ್ದು ಕರ್ನಾಟಕ ಸರಕಾರ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ಮಾಡಿದ್ದು ಶ್ಲಾಘನೀಯವಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಮನಿ ಹೇಳಿದರು.
ಅವರು ನಗರದ ನಿತ್ಯ ಹೊಯ್ಸಳ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪತ್ರಿಕೋದ್ಯಮಕ್ಕೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಸಾಮಾಜಿಕ ಜವಾಬ್ದಾರಿಯಲ್ಲಿ ಶೋಷಿತ ದೀನ ದಲಿತರು, ಕೃಷಿಕರು ಅಸಂಘಟಿತ ವಲಯದ ಕಾರ್ಮಿಕರಿಗೆ ಪತ್ರಕರ್ತರು ನ್ಯಾಯ ಕೊಡುವ ಕಾರ್ಯ ಮಾಡಬೇಕು .


ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹಲವಾರು ಸಮಸ್ಯೆಗಳಿದ್ದು ಕೆ ನಿಂಗಜ್ಜ ಅವರು ತಮ್ಮ ಪತ್ರಿಕೆಯಲ್ಲಿ ನೀರಾವರಿ ಕೃಷಿ ಸೇರಿದಂತೆ ಭತ್ತಕ್ಕೆ ಬೆಲೆ ಕುಸಿದಾಗ ಸ್ಪಂದಿಸಿ ರೈತರ ಪರವಾಗಿ ಸರಕಾರದ ಗಮನಕ್ಕೆ ಬರುವಂತೆ ಸುದ್ದಿ ಬರೆಯುವ ಮೂಲಕ ಸರ್ಕಾರದ ಗಮನಕ್ಕೆ ತಂದು ರೈತರಿಗೆ ನ್ಯಾಯ ಒದಗಿಸಿದ್ದಾರೆ .
ಇಂತಹ ಸಮಾಜಮುಖಿ ಪತ್ರಕರ್ತರು ಇನ್ನೂ ಹೆಚ್ಚಾಗಬೇಕು .
ಪ್ರಸ್ತುತ ಕರ್ನಾಟಕ ಸರ್ಕಾರ ಕೆ.ನಿಂಗಜ್ಜ ನವರಿಗೆ ಮಾಧ್ಯಮ ಅಕಾಡೆಮಿ ಸದಸ್ಯತ್ವ ನೀಡಿದ್ದು ಇವರು ಪತ್ರಿಕೋದ್ಯಮದಲ್ಲಿ ಇಡೀ ರಾಜ್ಯವನ್ನು ಪ್ರತಿನಿಧಿಸಿ ಪತ್ರಕರ್ತರಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ಸೂಕ್ತ ತರಬೇತಿಗಳು ಮತ್ತು ಪುರಸ್ಕಾರಗಳನ್ನು ನ್ಯಾಯೋಚಿತವಾಗಿ ದೊರಕುವಂತೆ ಮಾಡಲಿ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ರಮೇಶ ಲಂಬಾಣಿ,ಶ್ರೀನಿವಾಸ ಭೋವಿ,ದಲಿತ ಸಂಘದ ಕಲ್ಯಾಣ ಕರ್ನಾಟಕ ಭಾಗದ ಸಂಚಾಲಕ ಹಂಪೇಶ ಅರುಗೋಲು,ಕರವೇ ಸಂಘಟನೆಯ ಯಮನೂರ ಭಟ್,ಪತ್ರಕರ್ತ ಚನ್ನಬಸವ,ಮಲ್ಲಿಕಾರ್ಜುನ ಗೋಟೂರು,ಮಲ್ಲಿಕಾರ್ಜುನ ನಾಯಕ ದೇಸಾಯಿ ಕ್ಯಾಂಪ್,
ಸೇರಿ ಹಲವರಿದ್ದರು.

About Mallikarjun

Check Also

ವಾರ್ಡ್ ಶಿಬಿರಗಳಲ್ಲಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಿ:ನಾಗೇಶ್,

Obtain form-3 through online software in ward camps : Nagesh,, ಯಲಬುರ್ಗಾ : ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.