A Grand Farewell to Favorite Teachers by Ex-Students: A teacher who feels the love of the villagers

ಗಂಗಾವತಿ : ಕೊಪ್ಪಳ ತಾಲೂಕಿನ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇಂದರಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 25 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಭೀಮಸೇನ ಕೆ.ಬಡಿಗೇರ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು
ಈ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಹಾಜರಿದ್ದು, ಪಾಠ ಕಲಿಸಿದ ಗುರುವಿಗೆ ಗುರುವಂದನೆ,ಹಾಗೂ ಶ್ರೀಇಂದ್ರೇಶ್ವರ ದೇವಸ್ಥಾನದಿಂದ ಶಿಕ್ಷಕರಿಗೆ ಹೂ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು ಹಾಗೂ ಇನ್ನೂ ಉಳಿದ ಇದೆ ಶಾಲೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ ವಯೋನಿವೃತಿ ಹೊಂದಿರುವ ಶಿಕ್ಷಕರಾದ ಮೈಲಾರಪ್ಪ ಉಂಕಿ,ರಾಮಣ್ಣ ಮುತ್ತಳಾ,ಅಂದನಗೌಡ ಅಯ್ಯನಗೌಡ,ಗುರುರಾಜ ಗುತ್ತಲ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು,
ಪ್ರೀತಿಯ ವಿದ್ಯಾರ್ಥಿಗಳಿಂದ ಸನ್ಮಾನ ಹಾಗೂ ಉಡುಗೊರೆ ಸ್ವೀಕರಿಸಿ ಮಾತನಾಡಿದ ಭೀಮಸೇನ ಬಡಿಗೇರ ಅವರು, ಒಂದೇ ಶಾಲೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ನಿಜಕ್ಕೂ ಸಂತೋಷ, ಆತ್ಮತೃಪ್ತಿ ತಂದಿದೆ. ಇದೇ ಶಾಲೆಯಿಂದ ನಿವೃತ್ತಿ ಹೊಂದುತ್ತಿರುವುದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು.
ಇಂದರಗಿ ಗ್ರಾಮದಲ್ಲಿ 1994 ರಿಂದ 2019 ರವರಿಗೆ ಸೇವೆಯನ್ನು ಸಲ್ಲಿಸಿದ್ದೇನೆ ಈ ಗ್ರಾಮದಲ್ಲಿ ಎಲ್ಲಾ ಸಮಾಜ ಮುಖಂಡರು ಹಾಗೂ ವಿಧ್ಯಾರ್ಥಿಗಳು ನನಗೆ ಒಳ್ಳೆಯ ಗೌರವವನ್ನು ಕೊಡುವುದರ ಮೂಲಕ ನನಗೆ ಈ ಶಾಲೆಯ ಸೇವೆಯನ್ನು ಸಲ್ಲಿಸಲು ಅವಕಾಶ ಸಿಕಿತ್ತು,ಮತ್ತು ನನ್ನ ಜೊತೆಗೆ ಇನ್ನೂ ನಾಲ್ಕು ಜನ ಶಿಕ್ಷಕರೊಂದಿಗೆ ನನಗೆ ಅಭಿನಂದನ ಸಮಾರಂಭ ಮಾಡಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ.ಅಧ್ಯಕ್ಷ ರಮೇಶ ಕಾಮನೂರು ,ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಮರೇಶ ಕೊಪ್ಪಳ, ಗ್ರಾಮ ಸದಸ್ಯರಾದ ಗವಿಸಿದ್ದಪ್ಪ ಹಾವರಗಿ, ಡಾ.ನಾಗರಾಜ ಕಂಬಳಿ, ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಒಕ್ಕೂಟದ ಅಧ್ಯಕ್ಷ ಡಾ.ಅಮರೇಶ ಕುಂಬಾರ, ಗ್ರಾಮದ ಮುಖಂಡರಾದ ಸಿದ್ದಪ್ಪ ಎಮ್ಮಿ,ದೇವಪ್ಪ ಭೋವಿ,ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿ ಇಂದ್ರೇಶ ಕೊಳ್ಳಿ,ಗವಿಸಿದ್ದಪ್ಪ ಹಡಪದ, ಆದೇಪ್ಪ ಬೆಟ್ಟಗೇರಿ,ಸುರೇಶ ಕುಂಬಾರ, ಮಂಜುನಾಥ ಬೆಟ್ಟಗೇರಿ,ಆನಂದಪ್ಪ ಕುರಿ,ಪರಶುರಾಮ ಮಜ್ಜಿಗಿ,ರಮೇಶ ಮ್ಯಾಗ್ಡಿ,ರಾಮಣ್ಣ ಹಿರೇಕುರಬರ್,ಕನಕಪ್ಪ ಪೂಜಾರ,ಹನಮೇಶ ಮಡಿವಾಳರ್,ಇಂದ್ರೇಶ ಕೇರಳಿ,ಮಾಜಿ ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಹ್ಯಾಟಿ,ಬಸವರಾಜ ಹಲಗೇರಿ,ಶಿಕ್ಷಕರಾದ ದೇವಪ್ಪ ಒಂಟಿಗಾರ, ,ಮುಖ್ಯೋಪಾಧ್ಯಾಯರಾದ ಭಾಗ್ಯಮ್ಮ ಹೆಚ್, ಕಾರ್ಯಕ್ರಮದ ನಿರೂಪಣೆ ಮಾಡಿದ ಶಿಕ್ಷಕ ಗವಿಸಿದ್ದಪ್ಪ,ಬೆಟ್ಟದೇಶ ಕುಂಬಾರ ಸ್ವಾಗತಿಸಿದರು, ಹಾಗೂ ಗ್ರಾಮದ ಗುರು ಹಿರಿಯರು, ವಿವಿಧ ಸಂಘದ ಅಧ್ಯಕ್ಷರು,ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಇದ್ದರು