Breaking News

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ:ಸಂಸದ ರಾಜಶೇಖರ ಹಿಟ್ನಾಳ

Working hard for the development of the constituency: MP Rajasekhara Hitna

ಜಾಹೀರಾತು
IMG 20240721 WA0258 300x140



ಗಂಗಾವತಿ.ಜು.21: ಕೊಪ್ಪಳ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.
ಅವರು ಶನಿವಾರದಂದು ನಗರದ ಔಷಧೀಯ ಭವನದಲ್ಲಿ ಔಷಧಿಗಳ ಕಾನೂನು ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ದರೋಜಿ-ಗಂಗಾವತಿ ಮತ್ತು ಗಂಗಾವತಿ-ಬಾಗಲಕೋಟ ಬ್ರಾಡಗೇಜ್ ರೈಲ್ವೆ ಮಾರ್ಗದ ರಚನೆ, ಬೂದಗುಂಪಾ ಕ್ರಾಸ್ ನಿಂದ ಬಳ್ಳಾರಿ ನಗರದವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಶ್ರಮಿಸುವುದಾಗಿ ಹೇಳಿದರು.
ಸಿಂಧನೂರು ನಗರದಿಂದ ಹುಬ್ಬಳ್ಳಿಗೆ ಸಂಚರಿಸುವ ಎರಡು ರೇಲ್ವೆಗಳಲ್ಲಿ ಒಂದನ್ನು ಧಾರವಾಡದವರೆಗೂ ಇನ್ನೊಂದನ್ನು ಗೋವಾದವರೆಗೂ ಸಂಚರಿಸುವಂತೆ ಮತ್ತು ವಿಜಯಪುರ-ಸಿಂಧನೂರು ರೇಲ್ವೆಯನ್ನು ನೂತನವಾಗಿ ಆರಂಭಿಸಲು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಸಂಸದರಿಗೆ ಮನವಿ ಮಾಡಿದರು.
ಹಿಟ್ನಾಳ ಗ್ರಾಮದ ಸಮೀಪ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಶೌಚಾಲಯ ದುರಸ್ತಿ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರೋಡ್ ಹಂಪ್ಸ್ ಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವ ಅನಿವಾರ್ಯತೆಯನ್ನು ಸಂಸದರಿಗೆ ಹೇರೂರ ಅವರು ಮನವರಿಕೆ ಮಾಡಿದರು. ಹೇರೂರ ಅವರ ಬಹುತೇಕ ಮನವಿಗಳ ಬಗ್ಗೆ ಸಂಸದರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿದ್ದ
ಸಮಾಜಿಕ ಹೋರಾಟಗಾರ್ತಿ ಶೈಲಜಾ ಹಿರೇಮಠ ಮಾತನಾಡಿ, ಔಷಧಿ ವ್ಯಾಪಾರಿಗಳದ್ದು ವ್ಯಾಪಾರವಲ್ಲ, ಸೇವಾ ವೃತ್ತಿ.ಅದಕ್ಕಾಗಿ ವೃತ್ತಿಗೆ ಧಕ್ಕೆ ಆಗದಂತೆ ನಡೆದು ಕೊಳ್ಳಬೇಕು. ಔಷಧ ವ್ಯಾಪಾರಿಗಳು ವ್ಯಾಪಾರಿ ಮನೋಭಾವನ್ನು ಇಟ್ಟು ಕೊಂಡರೆ ಹಣ ಮಾತ್ರ ಗಳಿಸಬಹುದು, ಸೇವಾ ಮನೋಭಾವ ಇಟ್ಟುಕೊಂಡರೆ ಹಣ ಮತ್ತು ಹೆಸರು ಎರಡನ್ನೂ ಗಳಿಸಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ಈ ಸಂಧರ್ಭದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಅದಕ್ಕೆ ಪ್ರತಿಕ್ರೀಯಿಸಿದ ಹಿಟ್ನಾಳ, ಕಾರ್ಯಕ್ರಮದಲ್ಲಿ ಔಷಧ ವ್ಯಾಪಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಔಷಧಿ ವ್ಯಾಪಾರದಲ್ಲಿ ನಿಯಮಗಳನ್ನು ಉಲ್ಲಂಘಿಸದೆ ವ್ಯವಹರಿಸಲು ಔಷಧ ವ್ಯಾಪಾರಿಗಳಿಗೆ ಸಲಹೆ ನೀಡಿದರು.
ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ದುರ್ಗಾಶ್ರೀ ಮೆಡಿಕಲ್ ಸ್ಟೊರ್ಸ್ ಮಾಲೀಕ ಮಲ್ಲಿಕಾರ್ಜುನ ಮತ್ತು ಯಶೋಧಾ ದಂಪತಿಗಳ ಮಗಳಾದ ಕುಮಾರಿ ಸಂಗೀತಾ ಧಾರವಾಡ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿ.ಎಸ್.ಸಿ.(ಅಗ್ರಿ) ಪದವಿಯಲ್ಲಿ ಬಂಗಾರದ ಪದಕ ಪಡೆದು ಉತ್ತೀರ್ಣವಾಗಿದ್ದು, ಅಖಿಲ ಭಾರತ ಮಟ್ಟದಲ್ಲಿ 28 ಸಾವಿರ ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 102 ನೇ ಸ್ಥಾನ ಪಡೆದು ಕೇರಳದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಎಮ್.ಎಸ್.ಸಿ.ಅಗ್ರಿ ಅಭ್ಯಾಸಕ್ಕೆ ಪ್ರವೇಶ ಪಡೆದಿದ್ದಾಳೆ. ಈ ನಿಮಿತ್ತ ಸಂಗೀತಾ ಪಾಲಕರನ್ನು ಸನ್ಮಾನಿಸಲಾಯಿತು.
ಸೇಂಟ್‌ ಫಾಲ್ಸ್ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಹಿರೇಮಠ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೇವಾ ಆಯುರ್ವೇದ ಕಂಪನಿಯ ನಿರ್ದೇಶಕ ಅಜಯ ಕುಮಾರ್, ರಮೇಶ್ ಬಾಬು, ಔಷಧ ವ್ಯಾಪಾರಿಗಳಾದ ಎಸ್.ಗಣೇಶ, ಎಸ್.ಮಂಜುನಾಥ, ಅರಳಿ ಅಮರೇಶ ಕಾರಟಗಿ, ಶರಣಪ್ಪ ಬೆಟಗೇರಿ, ನಾಗರಾಜ ಹನುಮನಾಳ, ಚಂದ್ರಶೇಖರಯ್ಯ ಹೇರೂರ ಸೇರಿದಂತೆ ನೂರಕ್ಕು ಹೆಚ್ಚು ಔಷಧ ವ್ಯಾಪಾರಿಗಳು, ಸೇರಿದಂತೆ
ಉದ್ಯಮಿ ಮುಷ್ಟಿ ವಿರುಪಾಕ್ಷಪ್ಪ ,ನಗರಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ವಾಸುದೇವ ನವಲಿ, ಮಾಜಿ ಅಧ್ಯಕ್ಷ ವೆಂಕಟೇಶ, ವಿಶ್ವನಾಥ ಕೆಸರಟ್ಟಿ, ಹನುಮರೆಡ್ಡೆಪ್ಪ ಮಾಲಿ ಪಾಟೀಲ್, ವೀರಣ್ಣ ಕಾರಂಜಿ, ಸಂಧ್ಯಾ ಪಾರ್ವತಿ ಸನ್ಮಾನ ಕಾರ್ಯದಲ್ಲಿ‌ ಭಾಗವಹಿಸಿದ್ದರು. ರಾಜಶೇಖರಯ್ಯ ಭಾನಾಪೂರ, ಕಲ್ಯಾಣರಾವ್, ಸಿ.ಚಿದಾನಂದ ಹಾಗೂ ಇತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.