Breaking News

ಇಡಿಗಂಟು ಜಾರಿಗೆ ಆದೇಶಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದ ಸಂಘಟಿತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ.

Idigantu passed order- a historic victory for the organized struggle led by the Akshardasoh Employees Union (CITU).

ಜಾಹೀರಾತು

ಗಂಗಾವತಿ: ಅತ್ಯಂತ ಕಡುಬಡತನದ ಜೀವನ ನಡೆಸುತ್ತಿರುವ ಈಗಾಗಲೇ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದಲಿರುವ ಅಕ್ಷರ ದಾಸೋಹ ಅಡುಗೆ ನೌಕರರಿಗೆ ಇಡಿಗಂಟು ನೀಡಲು ಮುಂದಾಗಿರುವ ನಮ್ಮ ರಾಜ್ಯ ಸರ್ಕಾರದ ನಡೆಗೆ ಸಂಘಟನೆ ಅಭಿನಂದನೆ ಸಲ್ಲಿಸುತ್ತದೆ. ಇದು ಅಕ್ಷರದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದ ಸಂಘಟಿತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ ಎಂದು ಬಿಸಿಯೂಟ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಲಕ್ಷಿö್ಮÃದೇವಿ ಸೋನಾರ್ ಹರ್ಷ ವ್ಯಕ್ತಪಡಿಸಿದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಯು ನಮ್ಮ ರಾಜ್ಯದಲ್ಲಿ ೨೦೦೧-೦೨ ರಲ್ಲಿ ಪ್ರಾರಂಭವಾಯಿತು. ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಾತಿ ತಡೆಗಟ್ಟಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆ ನೌಕರರನ್ನು ನಿವೃತ್ತಿ ಹೆಸರಿನಲ್ಲಿ ರಾಜ್ಯದಲ್ಲಿ ಕಳೆದ ೨೦೨೨ ರಿಂದ ಸುಮಾರು ೧೧,೫೦೦ಕ್ಕೂ ಹೆಚ್ಚಿನ ನೌಕರರನ್ನು ಕೆಲಸದಿಂದ ಕೈ ಬಿಡಲಾಗಿದೆ. ಕಳೆದ ೨೩ ವರ್ಷಗಳಿಂದಲೂ ಸೇವೆ ಸಲ್ಲಿಸಿದ ಈ ನೌಕರರನ್ನು ಅಮಾನೀಯವಾಗಿ ಬಿಡುಗಡೆ ಮಾಡಿದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ನಿರಂತರ ಹೋರಾಟ ನಡೆಸುತ್ತಲೇ ಬಂದಿದೆ.
ಕಳೆದ ೩-೪ ವರ್ಷಗಳಿಂದಲೂ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಮತ್ತು ನಿವೃತ್ತ ಅಡುಗೆಯವರಿಗೆ ಒಂದು ಲಕ್ಷ ರೂಪಾಯಿಗಳ ಇಡಿಗಂಟು ನೀಡಬೇಕೆಂದು ಹಲವಾರು ಬಾರಿ ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರು, ಹಲವಾರು ಬಾರಿ ಹೋರಾಟ ನಡೆಸಿದಾಗ ಮಾತುಕತೆ ನಡೆಸಿದರೂ ಇದರ ಬಗ್ಗೆ ಸರ್ಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ಹೆಚ್ಚಿನ ಮುತುವರ್ಜಿ ವಹಿಸಿರಲಿಲ್ಲ. ಜುಲೈ ೧೫, ೨೦೨೪ ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿ.ಐ.ಟಿ.ಯು) ನೇತೃತ್ವದಲ್ಲಿ ಇಡಿಗಂಟು ಜಾರಿಗಾಗಿ, ವೇತನ ಹೆಚ್ಚಳಕ್ಕಾಗಿ, ಸಾದಿಲ್ವಾರು ಜಂಟಿಖಾತೆ ಬದಲಾವಣೆ ಕುರಿತು ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಅನಿರ್ಧಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಈ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಜುಲೈ ೧೬, ೨೦೨೪ ಸಂಘಟನೆಯ ಮುಖಂಡರೊAದಿಗೆ ಆರ್ಥಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮಾತುಕತೆ ನಡೆಸಿ, ಅದರ ಫಲವಾಗಿ ಸರ್ಕಾರ ಅಡುಗೆ ಸಿಬ್ಬಂದಿಯವರು ೧೫ ವರ್ಷ ಹಾಗೂ ಅದಕ್ಕೂ ಹೆಚ್ಚಿನ ಅವಧಿಗೆ ಸೇವೆಸಲ್ಲಿಸಿ ೬೦ ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ನೌಕರರಿಗೆ ರೂ. ೪೦,೦೦೦ ಮತ್ತು ೫ ವರ್ಷ ಮೇಲ್ಪಟ್ಟು ಹಾಗೂ ೧೫ ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ೬೦ ವರ್ಷ ಪೂರ್ಣಗೊಂಡ ನಂತರ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ನೌಕರರಿಗೆ ರೂ. ೩೦,೦೦೦ ಇಡಿಗಂಟು ನೀಡಲು ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದೆ. ವೇತನ ಹೆಚ್ಚಳ. ಇನ್ನಿತರ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈಡೇರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಅನಿರ್ದಿಷ್ಟ ಹೋರಾಟದಲ್ಲಿ ರಾಜ್ಯಾದಾದ್ಯಂತ ಸುಮಾರು ಐದುಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿಗಳು ಅಡುಗೆ ಬಂದ್ ಮಾಡಿ ಭಾಗವಹಿಸಿದ್ದರು. ಹೋರಾಟದ ನೇತೃತ್ವವನ್ನು ರಾಜ್ಯ ಗೌರವಾಧ್ಯಕ್ಷರಾದ ಎಸ್. ವರಲಕ್ಷ್ಮಿ, ಅಧ್ಯಕ್ಷರಾದ ಲಕ್ಷ್ಮಿದೇವಿ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಖಜಾಂಚಿ ಮಹಾದೇವಮ್ಮ ಸಿದ್ದಮ್ಮ, ಗಂಗಾ ನಾಯ್ಕ, ಮಹೇಶ ಹಿರೇಮಠ, ಅರವಿಂದ ಹಾಗೂ ಇನ್ನಿತರು ವಹಿಸಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷರಾದ ನಿರುಪಾದಿ ಬೆಣಕಲ್, ತಾಲೂಕ ಕಾರ್ಯದರ್ಶಿಯಾದ ಮಂಜುನಾಥ ಡಗ್ಗಿ, ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳಾದ ಗಂಗಮ್ಮ ಸಿದ್ದಾಪುರ, ಸುಜಾತ ಸಂಗಾಪುರ, ಶಶಿಕಲಾ ಕಲ್ಗುಡಿ, ನೂರಜಾನ್ ಕನಕಗಿರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.