Breaking News

ನಾಲ್ಕು ವೇದಗಳ ರಚಿಸಿದ ಶ್ರೀ ಗುರು ವ್ಯಾಸರಾಜರಜನ್ಮದಿನವೇ ಗುರುಪೌರ್ಣಿಮೆ: ನಾರಾಯಣರಾವ್ ವೈದ್ಯ

Gurupurnima is the birthday of Shri Guru Vyasaraja, the creator of the four Vedas: Narayan Rao Vaidya

ಜಾಹೀರಾತು

ಗಂಗಾವತಿ: ಋಗ್ವೇದ, ಯಜುರ್ವೇದ, ಅಥರ್ವಣ ವೇದ ಹಾಗೂ ಸಾಮವೇದವನ್ನು ರಚಿಸಿದ ಮಹರ್ಷಿ ಹಾಗೂ ಗುರು ಶ್ರೀ ವ್ಯಾಸರಾಜರ ಜನ್ಮದಿನವನ್ನು ಗುರುಪೌರ್ಣಿಮೆ ಎಂದು ದೇಶಾಧ್ಯಂತ ಆಚರಿಸಲಾಗುತ್ತಿದೆ ಎಂದು ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ನಗರದ ಶಂಕರ ಮಠದಲ್ಲಿ ಗುರುಪೌರ್ಣಿಮೆ ಪ್ರಯುಕ್ತ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸೇರಿದಂತೆ ಸುಖಿ ಸಮಾಜದ ನಿರ್ಮಾಣಕ್ಕಾಗಿ ಗುರುಗಳ ಅನುಗ್ರಹ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಗುರು ಪೌರ್ಣಿಮೆ ಆಚರಿಸುವುದರ ಮೂಲಕ ಎಲ್ಲಾ ಗುರು ವೃಂದದವರಿಗೆ ಕೃತಜ್ಞತೆಗಳನ್ನು ಸಮರ್ಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜಸೇವೆ, ನೊಂದವರ ಧ್ವನಿಯಾಗಿ ಬೆಳಕು ನೀಡುವ ಕೆಲಸವನ್ನು ಶ್ರೀಮಠದಿಂದ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ತಹಶೀಲ್ ಕಛೇರಿಯ ಗ್ರೇಡ್-೨ ತಹಶೀಲ್ದಾರ ಮಹಾಂತೇಶಗೌಡ ಮಾತನಾಡಿ, ಗಂಗಾವತಿಯ ಶಂಕರ ಮಠ ಹತ್ತುಹಲವಾರು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಹಲವು ಉತ್ತಮ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ. ಗುರು ಪೌರ್ಣಿಮೆ ಅಕ್ಷರ ಕಲಿಸಿದಾತರಿಂದ ಹಿಡಿದು ಜೀವನದ ಮೌಲ್ಯಗಳಾದ ಪ್ರೀತಿ, ವಿಶ್ವಾಸ, ಅನುಕಂಪ, ಸಹಾನುಭೂತಿ ಉಳಿಸಿಬೆಳೆಸುವ ಕಾರ್ಯ ಗುರುಗಳಿಂದ ಮಾತ್ರ ಸಾಧ್ಯ. ಅಂತಹ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಎಲ್ಲಾ ಗುರುಗಳಿಗೆ ನಮನಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರಭಟ್ ನೇತೃತ್ವದಲ್ಲಿ ಗುರುಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ ಸೇರಿದಂತೆ ಗುರುಗಳ ಭಾವಚಿತ್ರದ ಪ್ರದಕ್ಷಿಣೆ, ವೇದಮಂತ್ರ ಘೋಷಗಳೊಂದಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್, ಶ್ರೀಪಾದರಾವ್ ಮುಧೋಳಕರ್, ವೇಣುಗೋಪಾಲ್, ಜಗನ್ನಾಥ ಅಳವಂಡಿಕರ್, ಭೀಮಾಶಂಕರ ಹೊಸಳ್ಳಿ, ಶ್ರೀನಿವಾಸ ಕೆ. ಸೇರಿದಂತೆ ಇತರರು ಉಪಸ್ಥಿತರಿದ್ದರು.

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.