Guru Poornami celebration by honoring Yoga Gurus at Balaji Yoga Centre
ಬೆಂಗಳೂರು, ಜು, 22; ಹಿರಿಯ ನಾಗರಿಕರು ಮತ್ತು ಮಹಿಳೆಯರನ್ನೊಳಗೊಂಡ ಯೋಗಾಸಕ್ತರು ನಗರದ ಶ್ರೀ ಬಾಲಾಜಿ ಯೋಗ ಕೇಂದ್ರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಯೋಗ ಗುರುಗಳನ್ನು ಗೌರವಿಸಲಾಯಿತು.
ಶ್ರೀ ಬಾಲಾಜಿ ಯೋಗ ಕೇಂದ್ರ 40 ವರ್ಷಗಳ ಹಿಂದೆ ಯೋಗಿ ಶ್ರೀನಿವಾಸ ಮೂರ್ತಿ ಗುರೂಜಿ ಅವರಿಂದ ಪ್ರಾರಂಭವಾಗಿದ್ದು, ಈಗಲೂ ಯೋಗ ಕಲಿಕೆಯ ಪರಂಪರೆಯನ್ನು ಮುಂದುವರೆಸಲಾಗಿದೆ. ಗುರೂಜಿ ಅವರ ಆಶಯಗಳನ್ನು ಶಂಕರ್ ಗುರೂಜಿ ಈಡೇರಿಸುತ್ತಿದ್ದು, ಇವರಿಗೆ ಇದೀಗ 75 ವರ್ಷಗಳು ಪೂರ್ಣಗೊಂಡಿದೆ. 100 ಕ್ಕೂ ಅಧಿಕ ಮಂದಿ ಇಲ್ಲಿ ಯೋಗ ಕಲಿಯುತ್ತಿದ್ದು, ಇದರಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗುರು ಪೂರ್ಣಿಮೆಯಂದು ಎಲ್ಲರೂ ಸೇರಿ ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ಸಂತಸ ವ್ಯಕ್ತಪಡಿಸಿದರು.
ಯೋಗ ಕೇಂದ್ರದ ಅಧ್ಯಕ್ಷ ವಿಷ್ಣು ಭರತ್ ಆಲಂಪಳ್ಳಿ ಮಾತನಾಡಿ ಗುರು ಎಂದರೆ ಸಂಸ್ಕೃತ ಪದ ಎಂದರೆ ಕತ್ತಲೆಯಿಂದ ಬೆಳಕಿಗೆ ತರುವುದಾಗಿದೆ. ಯೋಗ ಎಂದರೆ ಆಸನಗಳನ್ನು ಹಾಕುವ ಜೊತೆಗೆ ದಿನದ 24 ಗಂಟೆ, ವರ್ಷಪೂರ್ತಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಂತಸದಿಂದಿರುವುದೇ ಸುಯೋಗ ಎಂದು ಹೇಳಿದರು.
ಆಫ್ಲೈನ್ ಹಾಗೂ ಆನ್ ಲೈನ್ ನಲ್ಲಿ ತರಗತಿಗಳಿಗೆ ಸೇರಲು ಹೇವದನ್, [9342810861] ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.