Breaking News

ಪಿಂಜಾರ, ನದಾಫ್ ಅಭಿವೃದ್ದಿ ನಿಗಮಕ್ಕೆ ಅನುದಾನನೀಡಿ:ಕೊಪ್ಪಳ,

Grant to Pinjara, Nadaf Development Corporation: Koppala,

ಜಾಹೀರಾತು

ಪಂಚಯ್ಯ ಹಿರೇಮಠ,,,,

ಕೊಪ್ಪಳ : ಪಿಂಜಾರ್, ನದಾಫ್ ಇತರೇ ಹದಿಮೂರು ಉಪ ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಮುಂದಿನ ದಿನಮಾನಗಳಲ್ಲಿ ಅನುದಾನ ನೀಡದಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಳಕಲ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಹ್ಮದ್ ಸಿರಾಜುದ್ದೀನ್ ಕೊಪ್ಪಳ ಹೇಳಿದರು.

ಅವರು ಕುಕನೂರ ಪಟ್ಟಣದ ತಹಸೀಲ್ದಾರ ಪ್ರಾಣೇಶ್ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ ಪಿಂಜಾರ, ನದಾಫ ಜನಾಂಗವು ಕರ್ನಾಟಕದ ರಾಜ್ಯದ್ಯಂತ ಸುಮಾರು 22 ರಿಂದ 25 ಲಕ್ಷಗಳ ಜನಸಂಖ್ಯೆಯನ್ನು ಹೊಂದಿದ್ದು, ಸರ್ಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸತತವಾಗಿ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ಮತ್ತು ರಾಜಕೀಯ ನಿರ್ಲಕ್ಷತೆಯಿಂದ ನಮಗೆ ಯೋಜನೆಗಳು ಸಮರ್ಪಕವಾಗಿ ತಲುಪದೇ ವಂಚಿತರಾಗುತ್ತಿದ್ದೇವೆ ಎಂದರು.

ಸಮಾಜ ಅಭಿವೃದ್ಧಿಗೆ ನೇರವಾಗಿ ಅನುಕೂಲವಾಗಲೆಂದು ಪ್ರತ್ಯೇಕ ನಿಗಮ ಮಂಡಳಿಗಳಿಗೆ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಹಿಂದಿನ ಸರ್ಕಾರ ಈ ಸಮಾಜದ ತೊಂದರೆಗಳನ್ನು ಗಮನಿಸಿ ಸಾಮಾಜಿಕ ಕಳಕಳಿಯಿಂದ ಜನಾಂಗಕ್ಕೆ ನೇರವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪಿಂಜಾರ,ನದಾಫ್ ಹಾಗೂ ಇತರ ಹದಿಮೂರು ಉಪ ಜಾತಿಗಳ ಅಭಿವೃದ್ಧಿ ನಿಗಮ ದ ಆದೇಶದೊಂದಿಗೆ ಘೋಷಣೆ ಮಾಡಿದೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಾಮಾಜಿಕ ಕಳಕಳೆಯುಳ್ಳ ನಾಯಕರಾದ್ದು ಅತ್ಯಂತ ಹಿಂದುಳಿದ ಹಾಗೂ ಶೋಷಿತ ಈ ಸಮಾಜವನ್ನು ಕಡೆಗಣಿಸದೆ ಸಮಾಜದ ಹಿತಾಸಕ್ತಿಯಿಂದ ಕಷ್ಟಗಳನ್ನು ಗುರುತಿಸಿ, ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ತಕ್ಷಣ ನಿಗಮಕ್ಕೆ ಅವಶ್ಯ ಇರುವ ಅನುದಾನವನ್ನು ನೀಡಬೇಕೆಂದು ರಾಜ್ಯಾದ್ಯಂತ ತಾಲೂಕ ಮತ್ತು ಜಿಲ್ಲಾ ಘಟಕಗಳಿಂದ ಏಕಕಾಲದಲ್ಲಿ ಮನವಿ ನೀಡುತ್ತಿದ್ದೇವೆ ಎಂದರು.

ನಂತರದಲ್ಲಿ ರಾಜ್ಯ ಸದಸ್ಯರಾದ ಎ.ಪಿ. ಮುಧೋಳ ಮಾತನಾಡಿ
ನಮ್ಮ ಪಿಂಜಾರ, ನದಾಫ ಹಾಗೂ ಇನ್ನೂ ಇತರ ಹದಿಮೂರು ಉಪ ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಯಾವುದೇ ರೀತಿಯಿಂದ ಇದುವರೆಗೂ ಅನುದಾನ ದೊರೆತಿಲ್ಲಾ, ನಮ್ಮ ಸಮಾಜವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಔದ್ಯೋಗಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದು, ಕಷ್ಟಕರ ಜೀವನ ನಡೆಸುತ್ತಿರುವ ಸಮಾಜವಾಗಿದ್ದು ಕೂಡಲೇ ಮುಖ್ಯಮಂತ್ರಿಗಳು ನಮ್ಮ ನಿಗಮಕ್ಕೆ ಅನುದಾನವನ್ನು ಕೊಡಬೇಕೆಂದು ಹೇಳಿದರು.

ನೂತನ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ ಸಮಾಜದ ಹಿತ ದೃಷ್ಟಿಯಿಂದ ಹಾಗೂ ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನ ರೂಪಿಸಲು ಬಜೆಟ್ ನಲ್ಲಿ ಅಥವಾ ವಿಶೇಷ ಪ್ಯಾಕೇಜ್ ಮೂಲಕ ಅವಶ್ಯ ಇರುವ ಅನುದಾನ ನೀಡಬೇಕೆಂದು ಸತತವಾಗಿ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಮನವಿ ನೀಡುತ್ತಿದ್ದರೂ ಸಹ ಸರಕಾರ ಸ್ಪಂದಿಸದೇ ಸಮಾಜವನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿದೆ.

ರಾಜ್ಯದಲ್ಲಿ ಸುಮಾರು 25 ಲಕ್ಷಗಳ ಜನಸಂಖ್ಯೆ ಹೊಂದಿರುವ ನಮ್ಮಂತಹ ಬಡ ಸಮುದಾಯವನ್ನು ಕಡಗಣಿಸುವದು ಹಾಗೂ ನಿರ್ಲಕ್ಷತನ ತೋರುವುದು ಸಮಾಜಕ್ಕೆ ಮಾಡುವ ಘೋರ ಅನ್ಯಾಯವಾಗಿದೆ ಎಂದರು.

ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಸ್ಪಂದಿಸದೆ ಇದ್ದಲ್ಲಿ ಸರಕಾರವು ಹಿಂದುಳಿದ ಸಮಾಜಗಳಿಗೆ ಘೋರ ಅನ್ಯಾಯ ಎಸುಗುತ್ತಿರುವ ಬಗ್ಗೆ ರಾಜ್ಯಾದ್ಯಂತ ಸಾರ್ವಜನಿಕರ ಗಮನಕ್ಕೆ ತರಲು ಬಹಿರಂಗವಾಗಿ ಪ್ರತಿಭಟನೆ, ಧರಿಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಮನವಿಯನ್ನು ರಾಜ್ಯ ಸಮಿತಿ ಸದಸ್ಯರಾದ ವಜೀರ್ ಸಾಬ್ ತಳಕಲ್ ವಾಚಿಸಿದರು.

ಈ ಸಂದರ್ಭದಲ್ಲಿ ಕುಕುನೂರು ತಾಲೂಕ ತಹಶೀಲ್ದಾರ್ ಎಚ್. ಪ್ರಾಣೇಶ್ ಸ್ವೀಕರಿಸಿ ಮಾತನಾಡಿ ಮನವಿಯನ್ನು ಈ ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಿಕೊಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿದಸ್ತಗಿರಿ ಸಾಬ್ ರಾಜೂರು ಕುಕುನೂರು ತಾಲೂಕ ಅಧ್ಯಕ್ಷರು, ಹುಸೇನ್ ಸಾಬ್ ಎ ನದಾಫ್ ತಾಲೂಕ ಕಾರ್ಯದರ್ಶಿ , ಫಕೀರ್ ಸಾಬ್ ರಾಜೂರ, ಮಹಮ್ಮದ್ ಅಲಿ ಅರಕೇರಿ, ಬಾಬು ಸಾಬ್ ಬ್ಯಾಡಗಿ, ಕಲಂದರ್ ಸಾಬ ನೂರಬಾಷಾ, ಮಲಿಕಸಾಬ ನೂರಬಾಷ, ಶಮಶಾದ್ ಬೇಗಂ, ರಜಿಯಾ ಬೇಗಂ, ರಿಜ್ವಾನ್ ನದಾಫ, ಜುಬೇದ ಬೇಗಂ, ಅಬ್ಬಾಸ ಅಲಿ ವೆಂಕಟಾಪುರ, ಇತರರು ಇದ್ದರು.

About Mallikarjun

Check Also

ಮೃತಪಟ್ಟ ಬಾಲಕರ ಕುಟುಂಬಕ್ಕೆ ಸರ್ಕಾರ ತಲಾ 5ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಣೆರಿಮ್ಸ್ ಆಸ್ಪತ್ರೆಗೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಭೇಟಿ, ಮಕ್ಕಳ ಆರೋಗ್ಯ ವಿಚಾರಣೆ

The government distributed a compensation check of Rs 5 lakh each to the families of …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.